ನಾಮಪತ್ರ ಸ್ವೀಕಾರ, ಪರಿಶೀಲನೆಗೆ ಸಿದ್ಧತೆ
ಗುಲ್ಬರ್ಗ: ರಾಜ್ಯ ಚುನಾವಣಾ ಆಯೋಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ನಿಗದಿಪಡಿಸುತ್ತಿದ್ದಂತೆಯೇ ಜಿಲ್ಲೆಯಲ್ಲಿಯೂ ಭರದ ಸಿದ್ಧತೆಗಳು ಸಾಗಿವೆ. 8 ನಗರ- ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಅಧಿಸೂಚನೆಯನ್ನು ಫೆ.14 ರಂದು ಹೊರಡಿಸಿದ್ದು, ಚುನಾವಣಾ ಪ್ರಕ್ರಿಯೆ ಫೆ.16ರಿಂದ ಪ್ರಾರಂಭವಾಗಿದೆ.
ಜಿಲ್ಲೆಯಲ್ಲಿ ಗುಲ್ಬರ್ಗ ಮಹಾನಗರ ಪಾಲಿಕೆ, ಶಹಾಬಾದ್ ನಗರಸಭೆ, ಆಳಂದ, ಚಿತ್ತಾಪುರ, ಸೇಡಂ ಪುರಸಭೆಗಳು ಹಾಗೂ ಅಫಜಲ್ಪುರ, ಜೇವರ್ಗಿ, ಚಿಂಚೋಳಿ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
8 ಸ್ಥಳೀಯ ಸಂಸ್ಥೆಗಳು, 213 ವಾರ್ಡ್: 8 ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟಾರೆ 213 ವಾರ್ಡುಗಳಿದ್ದು ಆಯೋಗದ ನಿರ್ದೆಶನದಂತೆ 1.1.2012ರ ದಿನಾಂಕಕ್ಕೆ ಅರ್ಹರಾದ ಮತದಾರರನ್ನು ಒಳಗೊಂಡ ಮತದಾರರ ಪಟ್ಟಿಗಳನ್ನು ಈ ಚುನಾವಣೆಗೆ ಸಿದ್ಧಪಡಿಸಲಾಗಿದೆ. ಈ 8 ಸ್ಥಳೀಯ ಸಂಸ್ಥೆಗಳಲ್ಲಿ 5,15,817 ಮತದಾರರು ಇದ್ದು, ಈ ಪೈಕಿ 2, 58, 217 ಪುರುಷ ಮತದಾರರು ಹಾಗೂ 2, 47, 600 ಮಹಿಳಾ ಮತದಾರರು ತಮ್ಮ ಮತದಾನದ ಅಧಿಕಾರ ಚಲಾಯಿಸಲಿದ್ದಾರೆ, ಈ ವ್ಯವಸ್ಥೆಗಾಗಿ 511 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚುನಾವಣಾಧಿಕಾರಿ ನೇಮಕ: ಪ್ರತಿ 5 ವಾರ್ಡಿಗೆ ಒಬ್ಬ ಚುನಾವಾವಣಾಧಿಕಾರಿಯನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಈ ಎಲ್ಲ ಚುನಾವಣಾಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಹಾಗೂ ಅವರಿಗೆ ನಿಯುಕ್ತಿಗೊಳಿಸಿದ ವಾರ್ಡುಗಳಿಗೆ ಅನುಸಾರವಾಗಿ ನಾಮಪತ್ರಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ರಾಜಕೀಯ ಮುಖಂಡರು ಈ ವಿಷಯ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಆಯುಕ್ತರು ಮಹಾನಗರ ಪಾಲಿಕೆ ಗುಲ್ಬರ್ಗ ಹಾಗೂ ಸಂಬಂದಪಟ್ಟ ಸ್ಥಳೀಯ ಸಂಸ್ಥೆಯ ಕಾರ್ಯಾಲಯದಿಂದ ಅಲ್ಲದೇ ಸಂಬಂಧಿಸಿದ ತಹಸೀಲ್ದಾರರ ಕಾರ್ಯಾಲಯದಿಂದ ಮಾಹಿತಿಯನ್ನು ಪಡೆಯಬಹುದು.
ನೀತಿ ಸಂಹಿತೆ ಜಾರಿ: ಜಿಲ್ಲಾದ್ಯಂತ ನಗರ, ಸ್ಥಳೀಯ ಸಂಸ್ಥೆಯ ಚುನಾವಣಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಎಲ್ಲ ಕ್ಷೇತ್ರಗಳಲ್ಲಿ 15.2.2013ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ, ಅಧಿಕಾರಿಗಳು ಆಯೋಗದ ನಿರ್ದೇಶನದಂತೆ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದೆ. ಅಲ್ಲದೆ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀತಿ ಸಂಹಿತೆ ಉಲ್ಲಘನೆ ಆಗದಂತೆ ಕಟ್ಟೆಚ್ಚರ ವಹಿಸಲು ತಿಳಿಸಲಾಗಿದೆ.
ಮತದಾನವು ನಿಸ್ಪಕ್ಷಪಾತವಾಗಿ, ಶಾಂತಿಯುತವಾಗಿ ಹಾಗೂ ಸುಗಮವಾಗಿ ಜರುಗಲು ಜಿಲ್ಲಾಡಳಿತ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಕಚೇರಿ ಪ್ರಾರಂಭ
ಗುಲ್ಬರ್ಗ: ಕರ್ನಾಟಕ ಮುನಸಿಪಲ್ ಕಾರ್ಪೋರೇಶನ್ ಚುನಾವಣೆ ನಿಯಮಗಳು 1979ರ ನಿಯಮ 4(1) ಮತ್ತು (2)ರಡಿಯಲ್ಲಿ ಗುಲ್ಬರ್ಗ ಮಹಾನಗರ ಪಾಲಿಕೆ ಗುಲ್ಬರ್ಗ ಚುನಾವಣಾ ಕ್ಷೇತ್ರಗಳಿಗಾಗಿ ಫೆ.16ರಂದು ಬೆ.10 ಗಂಟೆಗೆ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 30, 31, 32, 33, 34, 35ರ ಚುನಾವಣಾಧಿಕಾರಿಗಳ ಕಚೇರಿಯನ್ನು ಗುಲ್ಬರ್ಗ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಕೊಠಡಿ ಸಂಖ್ಯೆ 11ರಲ್ಲಿ ಹಾಗೂ 10, 11, 12, 13, 14 ವಾರ್ಡ್ಗಳ ಕಚೇರಿಯನ್ನು ಕೊಠಡಿ ಸಂಖ್ಯೆ 37ರಲ್ಲಿ ಪ್ರಾರಂಭಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

