ಗುಲ್ಬರ್ಗಾ

ಬರೀ ಆರ್ಭಟಿಸಿದ ಮಾತ್ರಕ್ಕೆ ಭಾಷೆ ಬೆಳೆಯದು: ಆವುಂಟಿ

Published On :

ಯಾದಗಿರಿ: ಗಡಿ ನಾಡಿನಲ್ಲಿ ಕನ್ನಡ ನೆಲ- ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯ, ಉಳಿಸಿ ಬೆಳೆಸಬೇಕು. ಕೇವಲ ಕನ್ನಡ, ಕರ್ನಾಟಕ ಎಂದು ಆರ್ಭಟಿಸುವುದರಿಂದ ಭಾಷೆ ಬೆಳೆಯಲು ಸಾಧ್ಯವಿಲ್ಲ ಎಂದು ಯಾದಗಿರಿ ಜಿಲ್ಲಾ ಮಟ್ಟದ 2ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಬಾಂಧವ್ಯ ಆವುಂಟಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರಯೋಗ ಪ್ರತಿಷ್ಠಾನ ಏರ್ಪಡಿಸಿದ ಯಾದಗಿರಿ ಜಿಲ್ಲಾ ಮಟ್ಟದ 2ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವಸಾನದತ್ತ ಜನಪದ ಕಲೆ: ಆಧುನಿಕತೆಯ ಭರಾಟೆಯಲ್ಲಿ ಜನಪದ ಕಲೆಗಳು ಮಾಯವಾಗುತ್ತಿವೆ. ಅದಕ್ಕಾಗಿ ಇಂತಹ ಸಮ್ಮೇಳನಗಳ ಮೂಲಕ ಮಕ್ಕಳಲ್ಲಿನ ಜನಪದ ಕಲೆಯ ಬಗ್ಗೆ ಕಲ್ಪನೆ ಮೂಡಿಸುವುದರ ಜೊತೆಗೆ ಪೋಷಿಸುವ ಕೆಲಸವಾಗಬೇಕಿದೆ. 'ಆಡಿ ಬಾ ನನ ಕಂದ ಅಂಗಾಲ ತೊಳದೇನು' ಎಂಬ ಜಾನಪದ ಗೀತೆ ಹಾಗೂ ಗ್ರಾಮೀಣ ಸೊಗಡಿನ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಮನವಿ ಮಾಡಿದರು.
ಜ್ಞಾನ ವೃದ್ಧಿಗಾಗಿ ಟಿವಿ ನೋಡಿ: ಕನ್ನಡದ ಕೋಟ್ಯಾಧಿಪತಿ ವಿಜೇತ ಬಾಲಕ ಮಲ್ಲಿಕಾರ್ಜುನ ತೆಂಗಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸತತ ಪ್ರಯತ್ನದಲ್ಲಿ ನಮ್ಮನ್ನು ತೊಡಗಿಸಿಕೊಂಡಲ್ಲಿ ನಾವು ನಿರೀಕ್ಷಿಸಿದ ಫಲ ಪಡೆಯಲು ಸಾಧ್ಯ. ಜ್ಞಾನದ ತಿಳಿವಳಿಕೆಗೆ ಮಾತ್ರ ಟಿವಿ ನೋಡಿ, ಹೊರತು ಮನೋರಂಜನೆಗೆ ನೋಡುವುದ ಬೇಡ ಎಂದು ಕಿವಿಮಾತು ಹೇಳಿದರು.
ಗುರಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮಕ್ಕಳಿಂದ ಮಕ್ಕಳಿಗಾಗಿ ನಡೆಯುತ್ತಿರುವ ಈ ಮಕ್ಕಳ ಸಾಹಿತ್ಯ ಸಮ್ಮೇಳನ ನಿಜಕ್ಕೂ ಶ್ಲಾಘನೀಯ ಎಂದರು.
ಕಲಾವಿದ ನಚಿಕೇತ ದೇಸಾಯಿ, ಗುರುಮಠಕಲ್ ಪ್ರಯೋಗ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಜೋಶಿ ಪ್ರಾಸ್ಥಾವಿಕ ಮಾತನಾಡಿದರು. ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಮಹಾಂತೇಶ ಕಂಠಿ, ಟಿ.ದೇವೆಂದ್ರ, ಇದ್ದರು. ಕಲಾ ಜಾಥಾಗಳೊಂದಿಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.