ಗುಲ್ಬರ್ಗಾ

ಇಂದು, ನಾಳೆ ಉಚಿತ ಆರೋಗ್ಯ ಶಿಬಿರ

Published On :

ಜೇವರ್ಗಿ: ಧರ್ಮಸಿಂಗ್ ಫೌಂಡೇಶನ್ ಹಾಗೂ ನಾರಾಯಣ ಹೃದಯಾಲಯ ಬೆಂಗಳೂರು ಮತ್ತು ಬಸವೇಶ್ವರ ಸಾರ್ವಜನಿಕ ಆಸ್ಪತ್ರೆ ಗುಲ್ಬರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಜ. 28 ಮತ್ತು 29ರಂದು  ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಕಿತ್ಸೆ ಶಿಬಿರ ನಡೆಯಲಿದೆ.
ಪಟ್ಟಣದ ಹೊರ ವಲಯದಲ್ಲಿರುವ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಡಾ. ಅಜಯಸಿಂಗ್ ಅವರು ವೈದ್ಯರಾಗಿದ್ದು, ಅವರು ತಮ್ಮ ಜನ್ಮ ದಿನವನ್ನು ಬಡ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ. ಬಡ ರೋಗಿಗಳಿಗೆ ನೆರವಿನ ಹಸ್ತ ನೀಡಿದ್ದಾರೆ. ಈ ಮುಂಚೆ ಇವರು ಆರೋಗ್ಯ ಮೇಳ ನಡೆಸುವುದರ ಮೂಲಕ ಸಾವಿರಾರು ಬಡ ರೋಗಿಗಳಿಗೆ ಆರೋಗ್ಯ ಭಾಗ್ಯ ಕಲ್ಪಿಸಿದ್ದಾರೆ.
ತಪಾಸಣೆ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ನಾರಾಯಣ ಹೃದಯಾಲಯ ತಜ್ಞ ವೈದ್ಯರು, ಬಸವೇಶ್ವರ ಆಸ್ಪತ್ರೆ ತಜ್ಞ ವೈದ್ಯರು, ವೈದ್ಯಕೀಯ ಸೇವೆ ನೀಡಲಿದ್ದಾರೆ. ಹೃದಯ ಕಾಯಿಲೆ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ, ನೇತ್ರ ತಪಾಸಣೆ, ಸೀಳು ತುಟಿ, ಹರ್ನಿಯ, ಹೈಡ್ರೋಸಿಲ್, ಪೈಲ್ಸ್, ಪೋಲಿಯೋದಿಂದ ಅಂಗವಿಕಲತೆ, ಟ್ರಾನ್ಸಿಲ್, ರಕ್ತನಾಳ ಚಿಕಿತ್ಸೆ ಮೊದಲಾದ ರೋಗಿಗಳಿಗೆ ಉಚಿತವಾಗಿ ತಪಾಸಣೆ ನಡೆಸಲಾಗುವುದು.
ಉಪಸ್ಥಿತಿ: ಈ ಶಿಬಿರದಲ್ಲಿ ಇಸಿಜಿ, ಇಸಿಎಚ್‌ಒ, ಇಕೋ, ಬಿಪಿ ಮತ್ತು ಬ್ಲಡ್ ಶುಗರ್ ತಪಾಸಣೆ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಗದಗಿನ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಣ್ಣ ಮತ್ತಿಕಟ್ಟಿ, ಶಾಸಕರಾದ ಡಾ. ಶರಣಪ್ರಕಾಶ ಪಾಟೀಲ್, ಡಾ.ಎ.ಬಿ. ಮಲಕರೆಡ್ಡಿ, ಖಮರುಲ್ ಇಸ್ಲಾಂ, ಶರಣಬಸಪ್ಪ ದರ್ಶಾನಾಪುರ, ಮಾಲಿಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ವಿಧಾನಸಭಾ ಸದಸ್ಯ ಅಲ್ಲಂಪ್ರಭು ಪಾಟೀಲ್ ಆಗಮಿಸಲಿದ್ದಾರೆ.

'ಜೇವರ್ಗಿಯಿಂದಲೇ ಚುನಾವಣೆ ಎದುರಿಸುವೆ'
ಗುಲ್ಬರ್ಗ: ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ತಾವು ಜೇವರ್ಗಿ ಕ್ಷೇತ್ರದಿಂದಲೇ ಎದುರಿಸುವುದಾಗಿ ಕೆಪಿಸಿಸಿ ಸದಸ್ಯ, ಯುವ ನಾಯಕ ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ತಂದೆ ಧರ್ಮಸಿಂಗ್ ಅವರ ರಾಜಕೀಯ ಜೀವನಕ್ಕೆ ಜೇವರ್ಗಿ ನೀಡಿರುವ ಕೊಡುಗೆ ಅಪಾರ, ತಮ್ಮ ಕುಟುಂಬ ಜೇವರ್ಗಿ ಜೊತೆ ಹೊಂದಿರುವ ಭಾವನಾತ್ಮಕ ಸಂಬಂಧದಿಂದಾಗಿ ತಾವು ವಿಧಾನಸಭೆ ಚುನಾವಣೆಯನ್ನು ಜೇವರ್ಗಿ ಕ್ಷೇತ್ರದಿಂದಲೇ ಎದುರಿಸುವ ನಿರ್ಧಾರ ಮಾಡಿದ್ದಾಗಿ ಹೇಳಿದರು.
ಧರಂಸಿಂಗ್ ಅವರಿಗೆ ರಾಜ್ಯ ರಾಜಕೀಯ ಪ್ರವೇಶಕ್ಕೆ ಬುಲಾವ್ ಬಂದರೆ ಹೇಗೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಾ. ಅಂಜಯ್, ಇದಕ್ಕಿಂತ ಹೆಚ್ಚಿನ ಸಂತಸ ಏನಿದೆ. ತಂದೆಯವರಿಗೆ ಹೈಕಮಾಂಡ್ ಆ ರೀತಿ ಆದೇಶ ನೀಡಿದರೆ ತಾವೇ ಮುಂದೆ ನಿಂತು ತಂದಯವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.