ಇಂದು ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ನಗರದ ಗೋದುತಾಯಿ 11 ಕೆ.ವಿ. ಪೀಡರಿನ ತುರ್ತು ದುರಸ್ತಿ ಕಾರ್ಯವನ್ನು ಜು.11 ರಂದು ಕೈಗೊಳ್ಳಲಾಗುವುದು. ಈ ಪ್ರಯುಕ್ತ ಅಂದು ಬೆಳಗಿನ 9ರಿಂದ ಸಂಜೆ 5 ಗಂಟೆಯವರೆಗೆ ಈ ಮುಂದೆ ತೋರಿಸಿರುವ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 11 ಕೆ.ವಿ. ಗೋದುತಾಯಿ ಫೀಡರ್ ಧರಿಯಾಪುರ, ಶಾಹಬಾಜ ಕಾಲೋನಿ, ಊಡಾ, ಮಜಿದ್, ಪಿಡ್ಲಬ್ಯೂಡಿ ಕಾಟರ್ಸ, ರಾಘವೆಂದ್ರ ಟೆಂಪಲ್, ಜೇವರ್ಗಿ ಕಾಲೋನಿ, ಎನ್ಜಿಓ ಕಾಲೋನಿ, ದತ್ತನಗರ, ಮಾಕಾ ಲೇಔಟ್, ಭಾಗ್ಯವಂತಿನಗರ, ವರದನಗರ, ಸಿದ್ದೇಶ್ವರ ಕಲ್ಯಾಣ ಮಂಟಪ, ಮೋಹನನಗರ, ಬಿದ್ದಾಪುರ ಕಾಲೋನಿ, ಜಾಧವ ಲೇಔಟ್.
ನಗರದಲ್ಲಿ ಮಳೆ
ಗುಲ್ಬರ್ಗ: ಬುಧವಾರ ರಾತ್ರಿ ಗುಲ್ಬರ್ಗದಲ್ಲಿ ಧಾರಾಕಾರ ಮಳೆಯಾಗಿದೆ. ಸಂಜೆ 6ರ ಸುಮಾರಿಗೆ ಆರಂಭವಾದ ತುಂತುರ ಮಳೆ ರಾತ್ರಿ 7 ರಿಂದ 8ರವರೆಗೆ ಧಾರಕಾರವಾಗಿ ಸುರಿದಿದೆ. ನಗರದ ಎಲ್ಲ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು.
ಚಿನ್ನ- ಬೆಳ್ಳಿ ಕಳವು
ಗುಲ್ಬರ್ಗ: ಮನೆ ಬೀಗ ಮುರಿದು 2.20 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಕಳವು ಮಾಡಿಕೊಂಡು ಹೋದ ಘಟನೆ ನಗರದ ಎನ್ಜಿಓ ಕಾಲೋನಿಯಲ್ಲಿ ನಡೆದಿದೆ. ಶಶಿಕಲಾ ಶಿವಶರಣಪ್ಪ ಬಂಡೆನೂರ ಮನೆಯ ಮಾಲಿಕರಾಗಿದ್ದು, ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಳ್ಳರು ಬೀಗ ಮುರಿದು ಮನೆಯಲ್ಲಿದ್ದ 80 ಗ್ರಾಂ ಬಂಗಾರ ಮತ್ತು 400 ಗ್ರಾಂ ಬೆಳ್ಳಿ ಸೇರಿ ಒಟ್ಟು 2.20 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಬುಕ್ಕಿ ಸೆರೆ
ಗುಲ್ಬರ್ಗ: ನಗರದ ಕಾಲಾಹುಡಾ ಏರಿಯಾದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಿಲ್ಲತ್ ನಗರದ ಮಹ್ಮದ್ ನಿಜಾಮ್ ತಂದೆ ಮಹ್ಮದ್ ಮೈನೋದ್ದೀನ್ ಆಟೋವಾಲೆನನ್ನು ಬಂಧಿಸಿ 2, 350 ನಗದು ಮತ್ತು ಮಟಕಾ ಚೀಟಿ ಜಪ್ತಿ ಮಾಡಿಕೊಳ್ಳಲಾಗಿದೆ. ಪಿಎಸ್ಐ ನಿಂಗಪ್ಪ ಪೂಜಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ಗುಲ್ಬರ್ಗ: ನಗರದ ಆಳಂದ ರಸ್ತೆಯಲ್ಲಿರುವ ಚೋರ್ ಗುಂಬಜ್ನಲ್ಲಿ 35 ವರ್ಷದ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಈ ವ್ಯಕ್ತಿಯನ್ನು ಯಾರೋ ಕೊಲೆಗೈದು ಶವವನ್ನು ಇಲ್ಲಿ ತಂದು ಹಾಕಿ ಸಾಕ್ಷಿನಾಶ ಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಶವವನ್ನು ಅರೆಬರೆ ಸುಟ್ಟು ಹಾಕಲಾಗಿದೆ. ಸುದ್ದಿ ತಿಳಿದು ರಾಘವೇಂದ್ರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

