ಗುಲ್ಬರ್ಗಾ

ಹೂಗಾರ ಗಲ್ಲಿ ಅಂಗನವಾಡಿ ಕೇಂದ್ರಕ್ಕೆ ಕೊಳಚೆ ಅಡ್ಡಿ

Published On :

ಅಫಜಲ್ಪುರ: ಅಫಜಲ್ಪುರ ಪಟ್ಟಣದ ಹೂಗಾರ ಗಲ್ಲಿಯಲ್ಲಿರುವ ಅಂಗನವಾಡಿ ಕೇಂದ್ರದ ಸುತ್ತ ಮುತ್ತ ಕೊಳಚೆ ನೀರು, ಹುಲ್ಲು ಕಸ,ಕಡ್ಡಿ ತುಂಬಿಕೊಂಡಿರುವುದರಿಂದ ಕೇಂದ್ರಕ್ಕೆ ಮಕ್ಕಳು ಹೋಗಲು ತೊಂದರೆಯಾಗಿದೆ.
ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೇಕಾದೆರೆ ಈ ಅಂಗನವಾಡಿ ಕೇಂದ್ರ ಮಕಳಿಲ್ಲದೆ ಬಿಕೋ ಎನ್ನುತ್ತಿದೆ. ಕಾರಣ ಈ ಅಂಗನವಾಡಿ ಕೇಂದ್ರದ ಸುತ್ತಲಿನ ಪ್ರದೇಶ ಕೊಳಚೆಯಿಂದ ಕೂಡಿರುವುದರಿಂದ ಮಕ್ಕಳು ಅಂಗನವಾಡಿಗೆ ಬರುತ್ತಿಲ್ಲ. ಈ ಅಂಗನವಾಡಿ ಕೇಂದ್ರದಲ್ಲಿ 50 ಮಕ್ಕಳು ದಾಖಲಾಗಿದ್ದರೂ ಯಾವುದೇ ಮಕ್ಕಳು ಅಂಗನವಾಡಿಯುತ್ತ ಸುಳಿಯುತ್ತಿಲ್ಲ. ಮಲಿನವಾದ ಜಾಗದಲ್ಲಿ ತಮ್ಮ ಮಕ್ಕಳು ಕುಳಿತು ಕಲಿಯುವುದು ಸಾಧ್ಯವಿಲ್ಲವೆಂದು ಪೋಷಕರು ಈ ಕೇಂದ್ರಕ್ಕೆ ತಮ್ಮ ಮಕ್ಕಳನನ್ನು ಕಳುಹಿಸುತ್ತಿಲ್ಲ. ಮಕ್ಕಳಿಗೆ ಕಲಿಕೆ ಪೌಷ್ಟಿಕವಾದ ಆಹಾರ ನೀಡಬೇಕಾದ ಈ ಕೇಂದ್ರ ಮಕ್ಕಳ ಪಾಲಿಗೆ ರೋಗ ತರುವ ತಾಣವಾಗಿದೆ  ಎನ್ನುತ್ತಾರೆ ಪಾಲಕರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.