ವರದಕ್ಷಿಣೆ ಕಿರುಕುಳ; ಅತ್ತೆ, ಮಾವನ ಮೇಲೆ ಅಳಿಯ ಹಲ್ಲೆ
ಗುಲ್ಬರ್ಗ: ವರದಕ್ಷಿಣೆ ಹಣ ನೀಡುವಂತೆ ಅಳಿಯ ಇತರರು ಸೇರಿ ಅತ್ತೆ ಮತ್ತು ಮಾವನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಸ್ಟೇಷನ್ ಬಜಾರ ಬಡಾವಣೆಯಲ್ಲಿ ನಡೆದಿದೆ. ಲಲಿತಾಳ ತಂದೆ ಮತ್ತು ತಾಯಿ ಅಳಿಯನಿಂದ ಹಲ್ಲೆಗೊಂಡವರು. ನಗರದ ಸ್ಟೇಷನ್ ಬಜಾರ ಬಡಾವಣೆಯ ಉಪ್ಪಾರಗಲ್ಲಿಯ ನಿವಾಸಿ ಲಲಿತಾಳನ್ನು 8 ವರ್ಷದ ಹಿಂದೆ ಆಂಧ್ರದ ತಾಂಡೂರ ತಾಲೂಕಿನ ಕರನಕೋಟ್ ಗ್ರಾಮದ ನರಸಿಂಗನೊಂದಿಗೆ ಮಾಡುವೆ ಮಾಡಲಾಗಿತ್ತು.
ಮದುವೆ ಸಂದರ್ಭದಲ್ಲಿ 10 ತೊಲಿ ಬಂಗಾರ, 2 ಲಕ್ಷ ನಗದು, ಬೈಕ್ ಹಾಗೂ ಗೃಹ ಬಳಕೆಯ ಸಾಮಾನು ನೀಡಿ ಮದುವೆ ಮಾಡಲಾಗಿತ್ತು. ಮದುವೆ ಬಳಿಕ ಒಂದೂವರೆ ವರ್ಷದ ನಂತರ ಗಂಡ ಅತ್ತೆ, ಮಾವ, ಮೈದುನ ಸೇರಿ ದೈಹಿಕ, ಮಾನಸಿಕ ಕಿರುಕುಳ ನೀಡಿ ತವರು ಮನೆಯಿಂದ 5 ಲಕ್ಷ ತರಬೇಕು. ಇಲ್ಲವಾದರೆ ಬೇರೊಂದು ಮದುವೆಯಾಗುವುದಾಗಿ ನರಸಿಂಗ ಬೆದರಿಕೆ ಹಾಕಿದ್ದ. ಇದನ್ನು ಲಲಿತಾ ತನ್ನ ತಂದೆ ತಾಯಿಗೆ ತಿಳಿಸಿದಾಗ ಅವರು 2 ಲಕ್ಷ ನೀಡಿದ್ದರು ಎನ್ನಲಾಗಿದೆ. ಜೂ.8ರಂದು ತವರಿನಲ್ಲಿ ಲಲಿತಾ ಇದ್ದಾಗ ಅಲ್ಲಿಗೆ ವಾಹನದಲ್ಲಿ ಬಂದ ನರಸಿಂಗ ಹಾಗೂ ಇತರರು ಹಣಕ್ಕಾಗಿ ಆಗ್ರಹಿಸಿ ಲಲಿತಾಳ ತಂದೆ, ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತು ಲಲಿತಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ರೇಲ್ವೆ ಗ್ಯಾಂಗಮನ್ ಆತ್ಮಹತ್ಯೆ
ಗುಲ್ಬರ್ಗ: ಜೀವನದಲ್ಲಿ ಜಿಗುಪ್ಸೆಗೊಂಡು ರೇಲ್ವೆ ಗ್ಯಾಂಗಮನ್ನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರೇಲ್ವೆ ಕ್ವಾಟರ್ಸ್ನಲ್ಲಿ ನಡೆದಿದೆ. ರಾಮಲಿಂಗ ಎಂಬಾತನೇ ಆತ್ಮಹತ್ಯೆಗೆ ಶರಣರಾಗಿದ್ದು, ಈತನ ಪತ್ನಿ ಮತ್ತು ಮಕ್ಕಳು ತಮಿಳುನಾಡಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಈತ ಹಿರೆನಂದೂರದಲ್ಲಿರುವ ರೇಲ್ವೆ ಕ್ವಾಟರ್ಸ್ನಲ್ಲಿ ನೆಲೆಸಿದ್ದನೆಂದು ತಿಳಿದುಬಂದಿದೆ. ಈ ಕುರಿತು ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
ಕವಲಗಾ; ಕಾಲರಾಕ್ಕೆ ಬಾಲಕಿ ಬಲಿ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಕವಲಗಾ (ಬಿ) ಗ್ರಾಮದ ಬಾಲಕಿಯೊಬ್ಬಳು ಕಾಲರಾ ರೋಗಕ್ಕೆ ಬಲಿಯಾದ ಘಟನೆ ನಡೆದಿದೆ. ರುದ್ರಮ್ಮ ತಂದೆ ಚಂದ್ರಕಾಂತ(5) ಎಂಬ ಬಾಲಕಿ ಕಾಲರಾದಿಂದ ಉಂಟಾದ ವಾಂತಿ ಬೇಧಿಗೆ ಈಡಾಗಿ ಸಾವಿಗೀಡಾಗಿದ್ದಾಳೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ತಿಳಿಸಿದ್ದಾರೆ.
ಜಿಲ್ಲೆಯ ಕವಲಗಾ (ಬಿ) ಗ್ರಾಮದಲ್ಲಿ 27 ಕಾಲರಾ ಪ್ರಕರಣಗಳು ಪತ್ತೆಯಾಗಿವೆ. ಜೇವರ್ಗಿ ತಾಲೂಕಿನ ಮಂದೇವಾಲದಲ್ಲಿ 5 ಪ್ರಕರಣ ಹಾಗೂ ಚಿತ್ತಾಪುರ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ 25 ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದ್ದಾರೆ. ಕಲುಷಿತ ನೀರಿನಿಂದ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಈಗಾಗಲೇ ಅಲ್ಲಿ ವೈದ್ಯರ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಪರಿಸ್ಥಿತಿ ಸುಧಾರಿಸಿದೆ. ಕವಲಗಾ (ಬಿ) ಮತ್ತು ಲಕ್ಷ್ಮೀಪುರ ತಾಂಡಾಗಳಿಗೆ ಸ್ವಚ್ಛ, ಶುದ್ಧ, ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

