ಗುಲ್ಬರ್ಗಾ

ಆಂತರಿಕ ಕಚ್ಚಾಟದಿಂದ ಬಿಜೆಪಿಗೆ ಹಿನ್ನಡೆ: ನರಿಬೋಳ

Published On :

ಜೇವರ್ಗಿ: ರಾಜ್ಯ ಮುಖಂಡರಲ್ಲಿನ ಹೊಂದಾಣಿಕೆ ಕೊರತೆ ಮತ್ತು ನಾಯಕರ ಆಂತರಿಕ ಕಚ್ಚಾಟದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಪ್ರಮುಖ ಕಾರಣಗಳಾಗಿವೆ. ಇದರ ಲಾಭವನ್ನು ಕಾಂಗ್ರೆಸ್ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ಮಂಗಳವಾರ ಪಟ್ಟಣದ ಬಿಜಾಪುರ ಕ್ರಾಸ್ ಬಳಿ ಇರುವ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಆಂತರಿಕ ಸಾಂಸ್ಥಿಕ ಚುನಾವಣೆ ನಿಮಿತ್ತ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರಲ್ಲಿ ಮನೋಬಲ ತುಂಬಿ ಪಕ್ಷವನ್ನು ಪುನರ್ ಸಂಘಟಿಸಲು ಪಯತ್ನಿಸಬೇಕಾಗಿದೆ ಎಂದರು.
ಆಯ್ಕೆ ಪ್ರಕ್ರಿಯೆ: ಪಕ್ಷದ ಐಕಾನ್ ನರೇಂದ್ರ ಮೋದಿ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಲೋಕಸಭಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಕಾರ್ಯಕರ್ತರ ಮನೋಬಲ ಹೆಚ್ಚಾಗಿದೆ ಎಂದರು.
ಬಿಜೆಪಿ ಆಂತರಿಕ ಸಂವಿಧಾನದಡಿಯಲ್ಲಿ ಮೂರು ವರ್ಷಕ್ಕೊಮ್ಮೆ ಪಕ್ಷದ ವಿವಿಧ ಘಟ್ಟಗಳಿಗೆ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆಮಾಡುವುದು. ಸ್ಥಾನಿಕ ಸಮಿತಿ, ಶಕ್ತಿ ಕೇಂದ್ರಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಿದ ನಂತರ ಮಂಡಲ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಕಾರ್ಯಕರ್ತರು ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ನರಿಬೋಳ ಹೇಳಿದರು.
ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಬಿ. ಪಾಟೀಲ್ ಹರವಾಳ, ರಮೇಶಬಾಬು ವಕೀಲ, ದೇವಿಂದ್ರಪ್ಪ ಸರಕಾರ, ದಂಡಪ್ಪ ಸಾಹು ಕುರಳಗೇರಾ, ಬಸವರಾಜ ಮಾಲಿಪಾಟೀಲ್, ದೇವಿಂದ್ರಪ್ಪಗೌಡ ವಾಗಣಗೇರಿ, ಶಿವು ಪಾಟೀಲ್, ಭೀಮರಾಯ ಗುಜಗೊಂಡ, ವಿದ್ಯಾಸಾಗರ ಕುಲಕರ್ಣಿ, ಬಸವರಾಜ ಪವಾಡಶೆಟ್ಟಿ, ಡಾ. ಶಿವರಾಜ ಪಾಟೀಲ್ ಹರವಾಳ, ಬಸವರಾಜ ಕಂದಗಲ್, ಮರೇಪ್ಪ ಬಡಿಗೇರ, ಶಾಂತಗೌಡ ನೆದಲಗಿ, ಪ್ರವೀಣಕುಮಾರ ಕುಂಟೋಜಿಮಠ, ಮಹಿಬೂಬ್ ಇನಾಮದಾರ, ಅಲ್ಲಾಬಕಾಷ ಬಾಗವಾನ್, ಸೋಮಣ್ಣಗೌಡ ಬಳಬಟ್ಟಿ, ನಿಂಗಣ್ಣ ಭಂಡಾರಿ, ಧನಂಜಯಗೌಡ ಗುಡುರ, ರವಿ ಗಣಜಲಖೇಡ, ಗುರುರಾಜ ಸುಬೇದಾರ, ಮಲಶೆಟ್ಟೆಪ್ಪಗೌಡ ಹಿರೇಗೌಡ, ಅಕ್ಬರ್ ಮುಲ್ಲಾ, ಕಿಶನ್ ರಾವ್ ವಕೀಲ, ಶಿವಪುತ್ರಪ್ಪ ಆಡಿನ್, ನಿಂಗಣ್ಣಗೌಡ ಜವಳಗಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.