ಗುಲ್ಬರ್ಗಾ

ಲಂಚ; ಪಿಡಿಒ ಮೇಲೆ ಆರೋಪ

Published On :

ಸೇಡಂ: ಮುಧೋಳ ಗ್ರಾಮದ 2011ನೇ ಸಾಲಿನ ಇಂದಿರಾ ಆವಾಸ ಯೋಜನೆ ಅಡಿಯಲ್ಲಿ ಸರ್ಕಾರದಿಂದ ನಿವೇಶನ ಮಂಜೂರಿಯಾಗಿದ್ದು, ಪಿಡಿಒ ಶಿವಶಂಕರಯ್ಯ ಲಂಚ ಪಡೆದು ಬೇರೊಬ್ಬರ ಹೆಸರಿಗೆ ನಿವೇಶ ಮಂಜೂರಿ ಮಾಡಿದ್ದಾರೆ ಎಂದು ನಿವೇಶನ ವಂಚಿತ ಸ್ವಾತಂತ್ರ್ಯ ಹೋರಾಟಗಾರ ಕಿಶನರಾವ ತುಳಜಾರಾಮ ಖೇವಜಿ ಆರೋಪಿಸಿದ್ದಾರೆ. ಮುಧೋಳ ಪಿಡಿಒ ಶಿವಶಂಕರಯ್ಯ ಮತ್ತು ಕಾರ್ಯದರ್ಶಿ ಇಬ್ಬರು ಕೂಡಿಕೊಂಡು ಲಂಚ ಪಡೆದು ತಮ್ಮ ಹೆಸರಿಗೆ ಮಂಜೂರಿಯಾಗಿದ್ದ, ನಿವೇಶನವನ್ನು ಬೇರೊಬ್ಬರ ಹೆಸರಿಗೆ ಮಂಜೂರು ಮಾಡಿದ್ದಾರೆ.  ಈ ಕುರಿತು ಕೂಲಂಕುಶ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕೆಂದು ಅವರು ಮನವಿಯಲ್ಲಿ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ. ಈ ಕುರಿತು ಪಿಡಿಓಗೆ ಸಂಪರ್ಕಿಸಿದಾಗ ಹಾರಿಕೆ ಉತ್ತರ ನೀಡುವ ಮೂಲಕ ತಮ್ಮನ್ನು ಹೆದರಿಸಿದ್ದಾರೆ ಎಂದು ಕಿಶನರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಜಯಂತಿ
ಚಿತ್ತಾಪುರ: ತಾಲೂಕಿನ ರಾವೂರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮ ಜೂ.29ರಂದು ನಡೆಯಲಿದೆ. ಬೆಳಗ್ಗೆ 8ಕ್ಕೆ ಸಿದ್ಧಲಿಂಗ ಸ್ವಾಮೀಜಿ ಧ್ವಜಾರೋಹಣ ಮಾಡುವರು. ಸಂಜೆ 5ಕ್ಕೆ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಯಲಿದೆ. ಗ್ರಾಪಂ ಅಧ್ಯಕ್ಷೆ ಪಾರ್ವತಿ ಗುದಗಲ್ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಶ್ರೀನಿವಾಸ ಸಗರ, ಡಾ. ಗುಂಡಣ್ಣ ಬಾಳಿ, ಮಾಲೀಯಾ ಸುಲ್ತಾನಾ ಬೇಗಂ, ಸೂರ್ಯಕಾಂತ ಕಟ್ಟಿಮನಿ, ಅಣ್ಣಾರಾವ ಬಾಳಿ, ಮಶಾಕಸೇಟ್, ಶರಣು ಜ್ಯೋತಿ ಅತಿಥಿಗಳಾಗಿ ಆಗಮಿಸುವರು. ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಜಯಕುಮಾರ ಸಾಲಿಮನಿ ಉಪನ್ಯಾಸ ನೀಡುವರು.
ಇಂದು ಸನ್ಮಾನ
ಗುಲ್ಬರ್ಗ: ಗುವಿವಿ ಶಿಕ್ಷಕೇತರ ನೌಕರರ ಸಂಘವು ಜೂ.29 ರಂದು ಮಧ್ಯಾಹ್ನ 3ಕ್ಕೆ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ವಿಶ್ವವಿದ್ಯಾಲಯಗಳಲ್ಲಿ ನೌಕರರ ಸಮಸ್ಯೆಗಳು ಕುರಿತು ವಿಚಾರ ಸಂಕಿರಣ ಮತ್ತು 10ಜನ ನಿವೃತ್ತ ಶಿಕ್ಷಕೇತರ ಸಂಗಾತಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರೊ. ಜೆ.ಎಸ್. ಪಾಟೀಲ್ ಉಪನ್ಯಾಸ ನೀಡಲಿದ್ದಾರೆ. ಪ್ರೊ. ದಯಾನಂದ ಅಗಸರ್, ಪ್ರೊ. ಶರಣಪ್ಪ ಹಲ್ಲೆ, ಪ್ರೊ.ಬಿ.ಎಂ. ಕನಹಳ್ಳಿ, ಎಂ.ಬಿ. ಸಜ್ಜನ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಇಂದು ಪಾಲಕರ ಸಭೆ
ಚಿತ್ತಾಪುರ: ತಾಲೂಕಿನ ರಾವೂರು ಸರ್ಕಾರಿ ಫ್ರೌಢ ಶಾಲೆಯಲ್ಲಿ ಪಾಲಕರ ಸಭೆಯು ಜೂ.29ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಗ್ರಾಪಂ ಸದಸ್ಯ ಶರಣು ಜ್ಯೋತಿ ಅಧ್ಯಕ್ಷತೆ ವಹಿಸುವರು. ಮುಖ್ಯಗುರು ರೇಣುಕಾ, ಗ್ರಾಪಂ ಅಧ್ಯಕ್ಷೆ ಪಾರ್ವತಿ ಗುದಗಲ್, ಸಿದ್ಧಲಿಂಗ ಬಾಳಿ, ಶಂಕ್ರಯ್ಯ ಸ್ವಾಮಿ ಅತಿಥಿಗಳಾಗಿ ಆಗಮಿಸುವರು.
ಶರಣ ಸಂಗಮ
ಗುಲ್ಬರ್ಗ: ಪಟ್ಟಣದ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬರುವ ಜು.1ರಂದು ಬಸವಕೇಂದ್ರ ತಾಲೂಕು ಘಟಕದಿಂದ ಶರಣ ಸಂಗಮ ಆಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.