ಗುಲ್ಬರ್ಗಾ

ಪುರಾತನ ಶಿಲಾ ಶಾಸನ ಶೋಧ

Published On :

ಶಹಾಪುರ: ಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ಬೌದ್ಧ ಧರ್ಮಕ್ಕೆ ಸೇರಿದ ಬ್ರಾಹ್ಮೀ ಶಾಸನವೊಂದನ್ನು ಶಹಾಪುರ ತಾಲೂಕಿನ ಸಿರವಾಳ ಗ್ರಾಮದಲ್ಲಿ ಶೋಧಿಸಲಾಗಿದೆ.  ಈ ಶಾಸನವು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸ್ಮಾರಕ ಶಿಲಾಫಲಕವಾಗಿದೆ. ಮೊದಲ ಹಂತದಲ್ಲಿ ಬೌದ್ಧ ಧರ್ಮದ ಸಂಕೇತವನ್ನು ಪ್ರತಿಬಿಂಬಿಸುವ ಸ್ತೂಪವನ್ನು ಕೆತ್ತಿದ್ದಾರೆ. ಮೊದಲ ಹಂತ ಮತ್ತು ಎರಡನೇ ಹಂತವನ್ನು ಪ್ರತ್ಯೇಕಿಸುವ ಮಧ್ಯದ ಪಟ್ಟಿಕೆಯಲ್ಲಿ ಬ್ರಾಹ್ಮೀ ಶಾಸನವನ್ನು ಕೆತ್ತಲಾಗಿದೆ. ಎರಡನೇ ಪಟ್ಟಿಕೆಯಲ್ಲಿ ಮೂವರು ಬೌದ್ಧ ಉಪಾಸಕರ ಶಿಲ್ಪಗಳಿವೆ. ದುರದೃಷ್ಟವಶಾತ್ ಈ ಸ್ಮಾರಕ ಶಿಲ್ಪವನ್ನು ಭಗ್ನಗೊಳಿಸಲಾಗಿದೆ. ಬಹುತೇಕ ಭಾಗ ಕಣ್ಮರೆಯಾಗಿರುವುದರಿಂದ ಹೆಚ್ಚಿನ ಮಾಹಿತಿಗಳು ಲಭಿಸಲಾರವು ಎನ್ನುತ್ತಾರೆ ಸಂಶೋಧಕ ಡಾ.ಎಂ.ಎಸ್. ಸಿರವಾಳ. ಪ್ರಪಂಚದ ಪ್ರಮುಖ ಪುರಾತನ ಲಿಪಿಗಳಲ್ಲಿ ಒಂದಾಗಿರುವ ಬ್ರಾಹ್ಮೀ ಲಿಪಿಯಲ್ಲಿ 'ಭರತುವಿಸ' ಎಂದು ಬರೆಯಲಾಗಿದೆ. ಲಿಪಿ ಬ್ರಾಹ್ಮೀ ಆಗಿದ್ದರೆ ಬಳಸಿರುವ ಭಾಷೆ ಮಾತ್ರ ಪ್ರಾಕೃತವಾಗಿದೆ ಎಂದು ಡಾ. ಸಿರವಾಳ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.