ಗುಲ್ಬರ್ಗಾ

ಹೈ-ಕ ಹಳೆ ಹುಲಿಯ ಕ'ಜಪ'

Published On :

 ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.30
ಈಗಾಗಲೇ ಕಾಂತಾ, ಗುರುನಾಥ, ಬಿಆರ್ಪಿ, ಎಂವೈಪಿ ಎಂದು ಜಿಲ್ಲಾ ರಾಜಕಾರಣದಲ್ಲಿನ ಹಳೆ ಹುಲಿಗಳನ್ನು ಬೇಟೆಯಾಡಿ ಅವರನ್ನೆಲ್ಲ ಆಯಕಟ್ಟಿನ ಅಸೆಂಬ್ಲಿ ಅಖಾಡಗಳಿಗೆ ಅಭ್ಯರ್ಥಿಯಾಗಿಸುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ಜನತಾ ಪಕ್ಷ, ಇದೀಗ ಸೇಡಂ ಅಸೆಂಬ್ಲಿಗೂ ಅಂತಹದ್ದೇ ಹಳೆ ಹುಲಿಯೊಂದರ ಬೇಟೆಗೆ ಮುಂದಾಗಿದೆ.
ಕಲಂ 371 ಹೋರಾಟಗಳ ಹಿನ್ನೆಲೆಯಲ್ಲಿ ಹೋರಾಟದ ಹುಲಿ ಎಂದೇ ಹೆಸರಾಗಿರುವ, ಮಾಜಿ ಶಾಸಕ ವೈಜನಾಥ ಪಾಟೀಲ್ ಇದೀಗ OÚ”d®Ú’ ಶುರು ಮಾಡಿದ್ದಾರೆ. ಅವರನ್ನು ಸೇಡಂ ಅಸೆಂಬ್ಲಿ ಕಣಕ್ಕಿಳಿಸಲು ಭರದ ಸಿದ್ಧತೆಗಳು ಸಾಗಿವೆ ಎಂದು ತಿಳಿದು ಬಂದಿದೆ.
ಖಚಿತ ಮೂಲಗಳ ಪ್ರಕಾರ- ಈಗಾಗಲೇ ವೈಜನಾಥ ಪಾಟೀಲ್ ಹಾಗೂ ಯಡಿಯೂರಪ್ಪ ನಡುವೆ ನೇರವಾಗಿಯೇ ಮಾತುಕತೆಯಾಗಿದೆ ಎನ್ನಲಾಗಿದ್ದು ವೈಜನಾಥ ಸಹ ಕಜಪಕ್ಕೆ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಕಲಂ 371 ಅನುಷ್ಠಾನಗೊಂಡಿರುವ ಈ ದಿನಗಳಲ್ಲಿ ಹೈ-ಕ ನೆಲದ ಜನಾಂದೋಲನದ ರೂವಾರಿ ಎಂದೇ ಹೆಸರಾಗಿರುವ ವೈಜನಾಥರನ್ನೇ ಸೇಡಂನಿಂದ ಅಭ್ಯರ್ಥಿಯಾಗಿಸಿದಲ್ಲಿ ಹೋರಾಟ- ಅದರ ಯಶಸ್ಸನ್ನೇ ಹಿನ್ನೆಲೆಯಾಗಿಟ್ಟುಕೊಂಡು ಜನಾದೇಶ ಕೇಳಲು ಹೆಚ್ಚು ಅನುಕೂಲವಾಗುತ್ತದೆ ಎಂಬುದು ಈ ರಾಜಕೀಯ ಆಟದ ಹಿಂದಿನ ಮುಖ್ಯ ತರ್ಕ ಎನ್ನಲಾಗುತ್ತಿದೆ. ಕಲಂ 371 ಅಂಗೀಕಾರಕ್ಕೆ ಸಂಸತ್ತನ್ನು ಆಗ್ರಹಿಸಿ ಉಭಯ ಸದನಗಳಲ್ಲಿ ಠರಾವು ಅಂಗೀಕಾರಗೊಂಡಿದ್ದು ಯಡಿಯೂರಪ್ಪ ಸಿಎಂ ಆಗಿದ್ದಾಗ ಎಂಬುದು ವಾಸ್ತವ. ಇದೀಗ ವೈಜನಾಥ ಅವರು ಕಜಪದಿಂದ ಕಣಕ್ಕಿಳಿದಲ್ಲಿ ಇಂತಹ ಎಲ್ಲ ಸಂಗತಿಗಳನ್ನು ತಮ್ಮ ಗೆಲವಿಗೆ ಪೂರಕವಾಗಿರುವಂತೆ ಬಳಸಿಕೊಳ್ಳಬಹುದು ಎಂಬ ಚರ್ಚೆಗಳೂ ಸಾಗಿವೆ. ಇವೆಲ್ಲ ಹಿನ್ನೆಲೆಯಲ್ಲಿಯೇ ಅವರು OÚ”d®Ú’ ಆರಂಭಿಸಿದ್ದಾರೆ.
ಸ್ಥಳೀಯ ನಾಯಕರೊಂದಿಗೆ ಚರ್ಚೆ: ಈಚೆಗಿನ ದಿನಗಳಲ್ಲಿ ಯಡಿಯೂರಪ್ಪನವರನ್ನು ಟೀಕಿಸಿದ್ದರೂ ವೈಜನಾಥ ಇದೀಗ ಕಜೆಪಿಯಿಂದಲೇ ಕಣಕ್ಕಿಳಿಯುವ ನಿರ್ಧಾರ ಗಟ್ಟಿಗೊಳಿಸಿದ್ದರಿಂದ ಈಗಾಗಲೇ ಅವರು ಸೇಡಂ ಪ್ರವಾಸ ಕೈಗೊಂಡು ಈಚೆಗಷ್ಟೇ ಜೆಡಿಎಸ್ ತೊರೆದಿರುವ ಚಂದ್ರಶೇಖರ ರೆಡ್ಡಿ ಮದನಾ ದೇಶಮುಖ ಜೊತೆ ಮಾತುಕತೆ ನಡೆಸಿ ಬೆಂಬಲ ಕೋರಿದ್ದಾರೆ.
 ಇದಕ್ಕೆ ಸ್ಪಂದಿಸಿರುವ ಮದನಾ ತಾವೂ ಬೆಂಬಲಿಗರ ಸಭೆ ಕರೆದು ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇವೆ. ಆಗ ತಮ್ಮ ಬೆಂಬಲದ ಕೋರಿಕೆಯನ್ನು ಚರ್ಚಿಸುತ್ತೇವೆಂದು ವೈಜನಾಥರಿಗೆ ಹೇಳಿದ್ದಾರೆ ಎನ್ನಲಾಗಿದೆ.
ವೈಜನಾಥ ಚಿಂಚೋಳಿ ಕ್ಷೇತ್ರದಿಂದ ಗೆದ್ದು ಪಟೇಲ್ ಸರ್ಕಾರದಲ್ಲಿ ಸಚಿವರಾಗಿದ್ದವರು. ಇದಾದ ನಂತರ ಚಿಂಚೋಳಿ(ಮೀ) ಕ್ಷೇತ್ರವಾಗಿ ಪರಿವರ್ತಿತಗೊಂಡಿದ್ದರಿಂದ ವೈಜನಾಥರು ತವರು ಕ್ಷೇತ್ರವಿಲ್ಲದೆ ತೊಂದರೆಯಲ್ಲಿದ್ದರು.
 ಅದೇ ಕಾರಣಕ್ಕೆ ಅವರು ಈಚೆಗಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಂದ ದೂರವಿದ್ದೇ ತಮ್ಮ 371ನೇ ವಿಧಿಗಾಗಿ ಹೋರಾಟ ಸಂಘಟಿಸಲಾರಂಭಿಸಿದ್ದರು. ಆದರೆ, ಕಲಂ 371 ಸಂಸತ್ತಿನಲ್ಲಿ ಮಂಡನೆಯಾದ ನಂತರ ಕಾಂಗ್ರೆಸ್ ಪರವಾಗಿ ಹಾಗೂ ಆ ಪಕ್ಷದ ನಾಯಕರಾದ ಖರ್ಗೆ ಬಗ್ಗೆ ತುಸು ಮೃದುಧೋರಣೆ ತಾಳಿದಂತಿದ್ದರು.
ಅಚ್ಚರಿಯ ಬೆಳವಣಿಗೆ: ಆದರೀಗ ದಿಢೀರನೆ ವೈಜನಾಥ ಪಾಟೀಲರು OÚ”d®Ú’ ಶುರು ಮಾಡಿದ್ದರಿಂದ ಜಿಲ್ಲೆಯ ರಾಜಕೀಯದಲ್ಲಿ ಇದು ಅಚ್ಚರಿಯ ಬೆಳವಣಿಗೆಯಾಗಿ ದಾಖಲಾಗಿದೆ. ಕೆಲವು ತಿಂಗಳ ಹಿಂದಷ್ಟೆ ವೈಜನಾಥ ಚುನಾವಣೆ ರಾಜಕೀಯಕ್ಕೆ ಮರಳೋದಿಲ್ಲ, ಅದೇನಿದ್ದರೂ ಅವರ ಪುತ್ರ ಡಾ. ವಿಕ್ರಂ ಪಾಟೀಲ್ ಅವರೇ ಅಸೆಂಬ್ಲಿಗೆ ಧುಮುಕಲಿದ್ದಾರೆಂಬ ಚರ್ಚೆಗಳಿದ್ದವು.
ಆದರೀಗ ಕಲಂ 371 ಯಶ ಕಂಡಿರುವ ಸಂದರ್ಭದಲ್ಲಿ ಎದುರಾಗಿರುವ ಈ ಚುನಾವಣೆಯಲ್ಲಿ ಡಾ. ವಿಕ್ರಂ ಕಣಕ್ಕಿಳಿಯುವುದಕ್ಕಿಂತ ವೈಜನಾಥರೇ ಕಣದಲ್ಲಿ ಕಂಡರೆ ಅದು ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ ಎಂಬ ಚರ್ಚೆಗಳು ಆಪ್ತರಲ್ಲಿ ನಡೆದು, ಅದರ ಫಲವಾಗಿಯೇ ಅವರು ಸೇಡಂ ಅಸೆಂಬ್ಲಿಯತ್ತ ಮುಖ ಮಾಡುವಂತಾಗಿದೆ. ದಳ ಪರಿವಾರದ ವೈಜನಾಥ ಹೋರಾಟದ ಮನೋಭಾವದವರು. ಕಲಂ 371 ಹೋರಾಟದಿಂದಾಗಿ ಹೆಸರುವಾಸಿಯಾಗಿ ದಳ ತೊರೆದು ಬಿಜೆಪಿ ಸೇರಿ ಇದೀಗ ಕಜಪ ಹೊಸ್ತಿಲಲ್ಲಿದ್ದಾರೆ.
ಪ್ರಮುಖ ಪಕ್ಷಗಳಲ್ಲಿ ತಳಮಳ: ವೈಜನಾಥ ತವರು ಕ್ಷೇತ್ರ ಚಿಂಚೋಳಿಯಲ್ಲಿದ್ದ ಇದೀಗ ಸೇಡಂಗೆ ಹೊಂದಿಕೊಂಡಿರುವ ಸುಲೇಪೇಟ್ ಹಾಗೂ ನಿಡಗುಂದಾ ಜಿಪಂ ಕ್ಷೇತ್ರಗಳ 32 ಹಳ್ಳಿಗಳ 40ಕ್ಕೂ ಹೆಚ್ಚು ಬೂತ್ಗಳು ಸೇಡಂ ವ್ಯಾಪ್ತಿಗೆ ಇವೆ. ಈ ಹಿನ್ನೆಲೆಯಲ್ಲಿ ವೈಜನಾಥರ ಸ್ಪರ್ಧಾ ಬಯಕೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಲ್ಲಿ ತಳಮಳ ಮೂಡಿಸಿದೆ.
 ಡಾ. ಶರಣಪ್ರಕಾಶ ಇಲ್ಲಿ ಕಾಂಗ್ರೆಸ್ ಹುರಿಯಾಳು. ಡಾ. ಶರಣ ಚಿಂಚೋಳಿಯ ಸುಲೇಪೇಟ್, ನಿಡಗುಂದಾ ವ್ಯಾಪ್ತಿಯಲ್ಲೇ ಹೆಚ್ಚು ಕೆಲಸ ಮಾಡುತ್ತ ಇಲ್ಲಿನ ಜನರ ಒಲವು ಪಡೆಯುವ ಯತ್ನ ಮಾಡಿದ್ದರು. ಇದೀಗ ಅದೇ ನೆಲದ ವೈಜನಾಥ, ಕಣದಲ್ಲಿ ಇಳಿಯುವ ಸುದ್ದಿ ಇರುವುದರಿಂದ ಕೈ ಪಾಳಯದಲ್ಲಿ ಆತಂಕ ಮೂಡಿದೆ.
ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ರಾಜಕುಮಾರ್ ತೇಲ್ಕೂರ್, ಜೆಡಿಎಸ್ನ ಮುಕ್ರಂಖಾನ್, ರೆಡ್ಡಿ ಸಮುದಾಯದ ಮತಗಳೇ ಇಲ್ಲಿ ನಿರ್ಣಾಯಕ. ವೈಜನಾಥರ ಪ್ರವೇಶದಿಂದಾಗಿ ಜೆಡಿಎಸ್ ಹೊರತುಪಡಿಸಿ ಉಳಿದ ಪಕ್ಷಗಳ ಅಭ್ಯರ್ಥಿಗಳು ಲಿಂಗಾಯಿತ ಸಮುದಾಯಕ್ಕೇ ಸೇರಿದವರಾಗುವುದರಿಂದ ಜಾತಿ- ಕೋಮುವಾರು ಮತ ವಿಭಜನೆ ಇಲ್ಲಿ ಅದ್ಹೇಗೆ ಕೆಲಸ ಮಾಡುವುದು ಎಂಬುದೇ ಕುತೂಹಲಕಾರಿ.
ಕೆಜೆಪಿ ಇಲ್ಲಿ ಜಿಪಂ ಸದಸ್ಯ ಶ್ರೀನಾಥ ಪಿಳ್ಳೆ ಅವರನ್ನು ಅಭ್ಯರ್ಥಿಯಾಗಿಸುವ ಚಿಂತನೆಯಲ್ಲಿತ್ತು. ವೈಜನಾಥರ ಪ್ರವೇಶದಿಂದ ಪಕ್ಷ ತನ್ನ ಚಿಂತನೆಯನ್ನು ಪರಾಮರ್ಶಿಸಲು ಮುಂದಾಗಿದೆ. ಬೆಂಗಳೂರಲ್ಲಿ ಈಗಾಗಲೇ ಕೆಜೆಪಿ ಸಭೆಯಲ್ಲಿ ವೈಜನಾಥರ ಸೇಡಂ ಸ್ಪರ್ಧೆಯ ಬಗ್ಗೆ ಗಂಭೀರ ಚರ್ಚೆಗಳು ಶುರುವಾಗಿವೆ. ಏ.5ಕ್ಕೆ ಯಡಿಯೂರಪ್ಪ ಗುಲ್ಬರ್ಗಕ್ಕೆ ಬರಲಿದ್ದು ಅಷ್ಟರೊಳಗೇ ಎಲ್ಲವೂ ಇತ್ಯರ್ಥವಾಗಲಿದೆ.
ಈ ಬೆಳವಣಿಗೆ ಹಿಂದೆ ಸುನೀಲ ವಲ್ಯಾಪುರೆ ಅವರ ಪ್ರಯತ್ನವಿದೆ ಎನ್ನಲಾಗಿದ್ದು, ವೈಜನಾಥರ ಸೇಡಂ ಸ್ಪರ್ಧೆ ಈಗಾಗಲೇ ಚಿಂಚೋಳಿ ಕಣಕ್ಕೆ ಧುಮುಕಿರುವ ಸುನೀಲ್ಗೆ ರಾಜಕೀಯವಾಗಿ ಹೆಚ್ಚು ಅನುಕೂಲವಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.