ಎಚ್ಡಿಕೆ ಆಡಳಿತವೇ ಗೆಲವಿಗೆ ದಾರಿ: ಕಾಡ್ಲೂರ
ಯಾದಗಿರಿ: ಎಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಅಧಿಕಾರಾವಧಿಯಲ್ಲಿ ಕೈಗೊಂಡ ರೈತಪರ ಹಾಗೂ ಜನಪರ ಕಾರ್ಯಕ್ರಮಗಳೇ ಕ್ಷೇತ್ರದಲ್ಲಿ ನನ್ನ ಗೆಲವಿಗೆ ದಾರಿಯಾಗಿದೆ. ಆದ್ದರಿಂದ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಬಾವುಟ ಹಾರುವುದು ನಿಶ್ಚಿತ ಎಂದು ಅಭ್ಯರ್ಥಿ ಎ.ಸಿ.ಕಾಡ್ಲೂರ ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚಿನ ಆದ್ಯತೆ: ನಗರದ ವಿವಿಧ ವಾರ್ಡುಗಳಲ್ಲಿ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಅದರಲ್ಲೂ ಹೈಕ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿ ಈ ಭಾಗದ ಜನರಿಗೆ ನೆಮ್ಮದಿಯ ಬದುಕು ರೂಪಿಸಿಕೊಟ್ಟಿರುವುದೇ ನಮ್ಮ ಗೆಲವಿಗೆ ಶ್ರೀರಕ್ಷೆ. ಯಾದಗಿರಿ ಮತಕ್ಷೇತ್ರದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಪಣ ತೊಟ್ಟಿದ್ದು, ಜನತೆ ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಎಸ್.ಪಿ.ನಾಡೇಕರ್, ದೇಶದಲ್ಲಿಯೇ ಅಲ್ಪಸಂಖ್ಯಾತರಿಗೆ ಎಲ್ಲಾ ರಂಗಗಳಲ್ಲಿ ಮೀಸಲಾತಿ ಒದಗಿಸಿ ಕೊಟ್ಟಿದ್ದು ಜೆಡಿಎಸ್ ಮಾತ್ರ. ಅದಕ್ಕಾಗಿ ದಲಿತರು, ಹಿಂದುಳಿದವರು, ಅಲ್ಪಾಸಂಖ್ಯಾತರು, ಕೃಷಿ ಕಾರ್ಮಿಕರು ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು ಬಸವರಾಜ್ ಚಂಡ್ರಿಕಿ, ವಿಶ್ವನಾಥ ಸಿರವಾರ, ಡಾ.ಫರವೇಜ್ ಕಾಡ್ಲೂರ್, ಆರೀಫ್ ಕಾಡ್ಲೂರ್, ಇನಾಯಿತ್, ಮಹ್ಮದ್ ಇಸಾಕ್ ಸೇಟ್, ಜಾಕೀರೋದಿನ್, ಮರೇಪ್ಪ ಚಟ್ಟೇರಣಕರ್, ಗೋಪಾಲ ತಳಗೇರಿ, ಶರಣು ನಾಟೇಕರ, ಶರಣಪ್ಪ ಅರಿಕೇರಿ, ರಾಜು ಗೋವಾ, ಶಂಕರ ಶೀರಗೋಳ, ಮಲ್ಲಿಕಾರ್ಜುನ ಜಿನಕೇರಿ, ಬಾಲಪ್ಪ ಸುಂಗಲಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

