ಇಂದು ಮತದಾನ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 4
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರ ಭಾನುವಾರ ಮತದಾನ ನಡೆಯಲಿದೆ. ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಿಸಿಲಿನ ತಾಪ ಅಧಿಕವಾಗಿರುವುದರಿಂದ ಮತಗಟ್ಟೆಗಳಲ್ಲಿ ನೀರು- ನೆರಳಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.
9,3,919 ಪುರುಷ ಹಾಗೂ 8,53,882 ಮಹಿಳಾ, 150 ಇತರೆ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ 17,57,951 ಮತದಾರರು ಇಂದು ಕಣದಲ್ಲಿರುವ ವಿವಿಧ ಪಕ್ಷಗಳ ಪ್ರಮುಖ ಹುರಿಯಾಳುಗಳು ಹಾಗೂ ಪಕ್ಷೇತರರು ಸೇರಿದಂತೆ ಇರುವ 131 ಸ್ಪರ್ಧಾಳುಗಳ ಹಣೆಬರಹ ಬರೆದು ಭದ್ರವಾಗಿ ಮತ ಯಂತ್ರದಲ್ಲಿ ಇಡಲಿದ್ದಾರೆ.
ಪರ್ದಾ ನಶೀನ್ ಮತಗಟ್ಟೆಗಳು: ಈ ಬಾರಿಯ ಮತದಾನ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನಿರ್ದೇಶನದಂತೆ ಗುರುತಿನ ಚೀಟಿ ಇಲ್ಲದೆ ಯಾರೂ ಮತ ಹಾಕಲಾಗದು. ಇದು ತುಂಬ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕೆಲವು ಧರ್ಮೀಯರು ಬುರ್ಖಾಧಾರಿಗಳಾಗಿ ಮತಗಟ್ಟೆಗೆ ಬಂದಾಗಲೂ ಅಂತಹವರ ಗುರುತು ಪತ್ತೆಗೆ ವಿಶೇಷ ಮಹಿಳಾ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ.
ಬುರ್ಖಾಧಾರಿ ಮತದಾರರೇ ಅಧಿಕವಾಗಿರುವ(ಮುಸ್ಲಿಂ ಸಮುದಾಯದವರು ಹೆಚ್ಚು ವಾಸವಿರುವ) ಗುಲ್ಬರ್ಗದ ದಕ್ಷಿಣೋತ್ತರ ವಿಧಾನಸಭೆ ಕ್ಷೇತ್ರಗಳಲ್ಲಂತೂ ಜಿಲ್ಲಾಡಳಿತ 'ಪರ್ದಾ ನಶೀನ್ ಮತಗಟ್ಟೆ'ಗಳೆಂದು ಪ್ರತ್ಯೇಕ ಮತಗಟ್ಟೆಗಳನ್ನೇ ಗುರುತಿಸಿ ಅಲ್ಲಿ ಮಹಿಳಾ ಅಧಿಕಾರಿಗಳಿಂದ ಬುರ್ಖಾಧಾರಿಗಳ ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
20 ತುಕಡಿಗಳು: ಇನ್ನೊಂದು ವಿಶೇಷವೆಂದರೆ ಜಿಲ್ಲೆಗೆ ಈ ಬಾರಿ ಅಗತ್ಯಕ್ಕಿಂತ ಅಧಿಕ ಭದ್ರತಾ ಬಲ ಬಂದಿದೆ. ಗಡಿಭದ್ರತಾ ಪಡೆ, ಅರೆಸೇನಾ ಪಡೆ, ರಾಜ್ಯ ಮೀಸಲು ಪೊಲೀಸ್ ಪಡೆ, ಸಶಶ್ತ್ರ ಮೀಸಲು ಪೊಲೀಸ್ ಹೀಗೆ 20ಕ್ಕೂ ಅಧಿಕ ತುಕಡಿಗಳು ಗುಲ್ಬರ್ಗದ 9 ಅಸೆಂಬ್ಲಿ ಅಂಗಳಗಳಲ್ಲಿ ಬೀಡು ಬಿಟ್ಟಿವೆ.
ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಅಂತಾರಾಜ್ಯ ಗಡಿಪ್ರದೇಶದೊಂದಿಗೆ ಬೆಸೆದುಕೊಂಡಿರುವ ಜಿಲ್ಲೆಯ ಸೇಡಂ, ಆಳಂದ ಹಾಗೂ ಅಫಜಲ್ಪುರ ಅಸೆಂಬ್ಲಿ ಕ್ಷೇತ್ರಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಗುಲ್ಬರ್ಗ ಜಿಲ್ಲಾಧಿಕಾರಿಗಳೂ ಆಗಿರುವ ಚುನಾವಣಾ ಅಧಿಕಾರಿ ಡಾ. ಕೆ.ಜೆ. ಜಗದೀಶ ಗುಲ್ಬರ್ಗದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಜಿಲ್ಲಾಡಳಿತ 2103ರ ಮತ ಮಹಾ ಸಮರಕ್ಕೆ ಅದ್ಹೇಗೆ ಸಜ್ಜಾಗಿದೆ ಎಂಬುದರ ಸಂಪೂರ್ಣ ಮಾಹಿತಿ ನೀಡಿದ್ದಾರೆ.
1) ಒಟ್ಟು ಮತಗಟ್ಟೆಗಳು- 2037
2) ಸೂಕ್ಷ್ಮ ಮತಗಟ್ಟೆಗಳು- 520
3) ಅತಿ ಸೂಕ್ಷ್ಮ ಮತಗಟ್ಟೆಗಳು- 230
4) ಮತದಾನಕ್ಕೆ ಬಳಸಲಾದ ಯಂತ್ರಗಳು- 2246
5) ಮೀಸಲು ಮತಯಂತ್ರಗಳು- 229
6) ಮತದಾರರ ಮಾಹಿತಿ
ಅ) ಪುರುಷ ಮತದಾರರು- 9,03,919
ಆ) ಮಹಿಳಾ ಮತದಾರರು- 8,53,882
ಇ) ಇತರೆ- 150
ಈ) ಒಟ್ಟು ಮತದಾರರು- 17,57,951
7) ಮತಗಟ್ಟೆ ಸಿಬ್ಬಂದಿ ಮಾಹಿತಿ
ಅ) ಪಿಆರ್ಒ- 2241
ಆ) ಎಪಿಆರ್ಒ- 2241
ಇ) ಮತಗಟ್ಟೆ ಅಧಿಕಾರಿ- 4,482
ಈ) ಮೀಸಲು ಸಿಬ್ಬಂದಿ- 2,000
8) ಮೈಕ್ರೋ ಅಬ್ಸರ್ವರ್ಸ್- 638
9) ವಿಡಿಯೋಗ್ರಾಫರ್ಸ್- 334
10) ಸೂಕ್ಷ್ಮ- ಅತಿ ಸೂಕ್ಷ್ಮ ಮತಗಟ್ಟೆ ಮಾಹಿತಿ
ಅ) ಆಳಂದ- 150
ಆ) ಗುಲ್ಬರ್ಗ(ಉ)- 73
ಇ) ಗುಲ್ಬರ್ಗ(ದ)- 74
ಈ) ಗುಲ್ಬರ್ಗ(ಗ್ರಾ)- 84
ಉ) ಚಿಂಚೋಳಿ- 63
ಊ) ಸೇಡಂ- 67
ಎ) ಚಿತ್ತಾಪುರ- 64
ಏ) ಜೇವರ್ಗಿ- 72
ಐ) ಅಫಜಲ್ಪುರ- 95
ಜಿಲ್ಲೆಯ ಆಳಂದ ಅತೀ ಹೆಚ್ಚಿನ ಅಂದರೆ 150 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಹೊಂದುವ ಮೂಲಕ ಗಮನ ಸೆಳೆದರೆ, ಎರಡನೇ ಸ್ಥಾನದಲ್ಲಿ ಅಫಜಲ್ಪುರ(95 ಮತಗಟ್ಟೆ) ಗುರುತಿಸಿಕೊಂಡಿದೆ. ಅತೀ ಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸುವ ಕೆಲಸ ಇಲ್ಲಿಗೆ ಮುಗಿಯಿತು ಅಂತೇನಿಲ್ಲ, ಇದು ಮತದಾನ ದಿನದವರೆಗೂ ನಡೆಯುವ ಕೆಲಸ. ಕೇಂದ್ರ ಚುನಾವಣೆ ವೀಕ್ಷಕರ ಸಲಹೆ- ಸೂಚನೆಗಳನ್ನಾಧರಿಸಿಯೂ ಇಲ್ಲಿ ಮತಗಟ್ಟೆಗಳ ವಿಂಗಡಣೆ ನಡೆಯುತ್ತದೆ. ಹೀಗಾಗಿ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಯಾವಾಗಬೇಕಾದರೂ ಹೆಚ್ಚು- ಕಮ್ಮಿಯಾಗುವ ಸಾಧ್ಯತೆಗಳಿರುತ್ತವೆ.
11) ಒಟ್ಟು ಬಳಸಲಾದ ವಾಹನಗಳು
ಅ) ಬಸ್ಸುಗಳು- 230
ಆ) ಖಾಸಗಿ ವಾಹನಗಳು- 750(ಜೀಪ್- 358, ಕ್ರೂಸರ್- 307)
12) ಮತದಾನ ಭದ್ರತೆ ಮಾಹಿತಿ
ಅ) ಸಿಪಿಎಫ್- 216
ಆ) ಕೆಎಸ್ಸಾರ್ಪಿ- 2 ತುಕುಡಿ
ಇ) ರಾಜ್ಯ ಪೊಲೀಸ್- 1,306
ಈ) ಗೃಹರಕ್ಷಕರು- 817
ಒಟ್ಟು- 2,377
13) 1,200 ರೌಡಿ ಶೀಟರ್ಗಳ ಮೇಲೆ ನಿಗಾ, ಮುಚ್ಚಳಿಕೆ ಪತ್ರ ಪಡೆಯಲಾಗಿದೆ
14) ಆಯುಧಗಳು- 2,004 ಆಯುಧ ಜಪ್ತಿ
15) ಭದ್ರತಾ ತಂಡಗಳು- 2,377
16) ಸಂಹಿತೆ ತಂಡಗಳ ಮಾಹಿತಿ
ಅ) ಫ್ಲೈಯಿಂಗ್ ಸ್ವ್ಕಾಡ್- 40
ಆ) ಸ್ಟಾಟಿಕ್ ಸರ್ವೇಲನ್ಸ್ ತಂಡ- 43
ಇ) ಚೆಕ್ಪೋಸ್ಟ್ಗಳು- 50
17) ಇಲ್ಲೆಲ್ಲಾ ಸಂಪೂರ್ಣ ವಿಡಿಯೋ ಚಿತ್ರೀಕರಣ
ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿದ ಕಡೆಗಳಲ್ಲಿ ಮತದಾನದ ಸಂಪೂರ್ಣ ಪ್ರಕ್ರಿಯೆ ಚಿತ್ರೀಕರಣ ಮಾಡಲಾಗುತ್ತಿದೆ. ಇಂತಹ ಮತಗಟ್ಟೆಗಳಲ್ಲಿ ಕೇಂದ್ರ ವೀಕ್ಷಕರಿಗೆ ನೇರ ವರದಿ ಮಾಡುವಂತಹ ಮೇಕ್ರೋ ಅಬ್ಸರ್ವರ್ ನಿಯೋಜಿತರಾಗಿರುತ್ತಾರೆ.
18) ಸಂಹಿತೆ ಉಲ್ಲಂಘನೆ ಪ್ರಕರಣಗಳು- 82
19) ಜಪ್ತಿಯಾದ ನಗದು- 32.5 ಲಕ್ಷ
20) ಸಾರಾಯಿ- 6,172 ಲೀಟರ್ ಜಪ್ತಿ, 79 ಪ್ರಕರಣ ದಾಖಲು
21) ಕಾಸಿಗಾಗಿ ಸುದ್ದಿ- 1 ಪ್ರಕರಣ ಎಂಸಿಎಂಸಿ ತಂಡದ ಗಮನಕ್ಕೆ ಬಂದಿದೆ. ಗಮನಕ್ಕೆ ರಾಜ್ಯ ಮಟ್ಟದ ಪತ್ರಿಕೆಯೊಂದಕ್ಕೆ ನೋಟಿಸ್, ಸುದ್ದಿಯಲ್ಲಿನ ಅಭ್ಯರ್ಥಿಗೂ ನೋಟಿಸ್.
22) ಅಂಚೆ ಮತದಾನ- 12 ಸಾವಿರ ಚುನಾವಣಾ ಕರ್ತವ್ಯದ ಸಿಬ್ಬಂದಿ ಪೈಕಿ 8000ಕ್ಕೂ ಹೆಚ್ಚು ಸಿಬ್ಬಂದಿ ಮತದಾನ. ಶೇ.80ರಷ್ಟು ಸಾಧನೆ. ಸಿಬ್ಬಂದಿಯಲ್ಲಿ ಕೆಲವರು ತಪ್ಪು ಫಾರ್ಮ್ 12 ತುಂಬಿದ್ದರಿಂದ ಮತದಾನಕ್ಕೆ ತಾಂತ್ರಿಕ ತೊಂದರೆ ಅಡ್ಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

