ಸಿದ್ದಾರೂಢರ ಮೂರ್ತಿ ಪ್ರತಿಷ್ಠಾಪನೆ, ಪುರಾಣ ಮಂಗಲ
ಆಳಂದ: ತಾಲೂಕಿನ ನರೋಣಾ ಗ್ರಾಮದಲ್ಲಿ ಸ್ಥಾಪಿಸಿದ ಸಿಧ್ಧಾರೂಡ ಮಹಾಸ್ವಾಮಿಗಳ ಮಠದಲ್ಲಿ ಸೋಮವಾರ ಬೆಳಗ್ಗೆ ಅಮೃತ ಶಿಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಾಡಲಾಯಿತು.
ಬೀದರ್ ಚಿದಂಬರ ಆಶ್ರಮದ ಶಿವಕುಮಾರ ಮಹಾಸ್ವಾಮೀಜಿ ಮೂರ್ತಿ ಸ್ಥಾಪನೆ ಮಾಡಿ ವಿಶೇಷ ಪೂಜೆ ನೆರವೇರಿಸಿದರು. ನಂತರ ನಡೆದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಶ್ರದ್ದೆ, ಭಕ್ತಿ, ನಿಷ್ಠೆಗಳು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸ್ಥಳೀಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ. ಅಮೃತಾನಂದಮಯಿ ತಾಯಿ, ಸಿದ್ದೇಶ್ವರಿ ತಾಯಿ, ಗೋಪಾಲರಾವ ಶಾಸ್ತ್ರಿಗಳು, ಮಲ್ಲಿಕಾರ್ಜುನ ಸಿರಗಾಪುರ, ಸುಭಾಷ ಹರಸೂರ, ಬಸವರಾಜ ಚೆಕ್ಕಿ, ದಯಾನಂದ ಬೊಳಶೆಟ್ಟಿ, ಶರಣಗೌಡ ಪಾಟೀಲ್, ಲಿಂಗಣ್ಣಗೌಡ ಪಾಟೀಲ್ ದಣ್ಣೂರ್, ಶಿವಾನಂದ ಬೊಳಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಬಸಮ್ಮ ಸುಭಾಷ ಬೊಳಶೆಟ್ಟಿ, ಗುರುಲಿಂಗಯ್ಯ ಸ್ವಾಮಿ ಕಲಾವಿದರು ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಗುಲ್ಬರ್ಗ ಮಠದ ಲಕ್ಷ್ಮೀತಾಯಿ ನೇತೃತ್ವ ವಹಿಸಿದ್ದರು.
ಅನೀಲಕುಮಾರ ಬೈರಗುಂಡ ಸ್ವಾಗತಿಸಿದರು. ಶಾಂತಪ್ಪ ಖ್ಯಾತನ್ ಕಾರ್ಯಕ್ರಮ ನಿರೂಪಿಸಿದರು.
2001 ಮುತ್ತೈದೆಯರಿಗೆ ಉಡಿ ತುಂಬಿದರು
ಗುಲ್ಬರ್ಗ/ಶಹಾಬಾದ್: ತೊನಸನಳ್ಳಿ ಗ್ರಾಮದ ಸಂಗಮೇಶ್ವರ ಸಂಸ್ಥಾನ ಮಠದ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ 5ನೇ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಇತ್ತೀಚೆಗೆ 2001 ಜನ ಮುತ್ತೈದೆಯರಿಗೆ ಉಡಿಯನ್ನು ತುಂಬಿ, ಮಹಾಪ್ರಸಾದ ವಿತರಿಸಲಾಯಿತು.
ಪಟ್ಟಾಧಿಕಾರ ಮಹೋತ್ಸವ ನಿಮಿತ್ತ 15 ದಿನ ಪರ್ಯಾಂತ ಗುಲ್ಬರ್ಗದ ಮಹಾದಾಸೋಹಿ ಶರಣಬಸವೇಶ್ವರ ಪುರಾಣವನ್ನು ಶಿವಾನಂದ ಶಾಸ್ತ್ರಿಗಳು ಕಾಖಂಡಕಿಯವರಿಂದ ನಡೆಯಿತು. ಪುರಾಣ ಮಹಾಮಂಗಲದಲ್ಲಿ ಶಹಾಬಾದ್ ನಗರ ಸೇರಿದಂತೆ ಸುತ್ತಲಿನ ಗ್ರಾಮಗಳು 2001 ಜನ ಮುತ್ತೈದೆಯರಿಗೆ ಉಡಿತುಂಬುವುದು, ಮಹಾಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಧರ್ಮಸಭೆಯ ಸಾನ್ನಿಧ್ಯವನ್ನು ಹೊನ್ನಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಮಠದ ಚಂದ್ರಗುಂಡ ಶಿವಾಚಾರ್ಯರು ವಹಿಸಿದ್ದರು, ಸ್ಟೇಷನ್ ಬಬಲಾದದ ರೇವಣಸಿದ್ದ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

