ಕ್ವಿಂಟಲ್ ತೊಗರಿಗೆ 6450 ಬೆಂಬಲ ಬೆಲೆ ನೀಡಿ
ಬೇಡಿಕೆಗೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘದ ನೇತೃತ್ವದಲ್ಲಿ ಕೃಷಿ ಕಾರ್ಮಿಕರು ಅಹೋರಾತ್ರಿ ಧರಣಿ
ಗುಲ್ಬರ್ಗ: ಕಂಪನಿ ಕೃಷಿ ವಿರೋಧಿಸಿ ಹಾಗೂ ತೊಗರಿ ಕ್ವಿಂಟಲ್ಗೆ 6450 ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘದ ನೇತೃತ್ವದಲ್ಲಿ ರೈತ ಕೃಷಿ ಕಾರ್ಮಿಕರು ಗುರುವಾರ ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿ ಎದುರು 48 ಗಂಟೆಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.
ರೈತಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ನೂರಾರು ರೈತರು 48 ಗಂಟೆಗಳ ಕಾಲ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದುಪಡಿಸಿ: ವಿದೇಶಿ ತೊಗರಿ ಆಮದು ಮೇಲೆ ಶೇ.30ರಷ್ಟು ತೆರಿಗೆ ವಿಧಿಸಬೇಕು, ವಿದೇಶಿ ಕಂಪನಿಗಳಿಗೆ ಅನುಕೂಲವಾಗುವ ರೈತರ ಶೋಷಣೆ ಹೆಚ್ಚಿಸುವ ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದುಪಡಿಸಬೇಕು, ಉದ್ದಿಮೆದಾರರನ್ನು ರೈತರೆಂದು ಪರಿಗಣಿಸುವ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಕೂಡಲೇ ರದ್ದುಪಡಿಸಲು ಮಾರುತಿ ಮಾನ್ಪಡೆ ಆಗ್ರಹಿಸಿದರು.
2500 ಕೋಟಿ ಬಿಡುಗಡೆ ಒತ್ತಾಯ: ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಹಕ್ಕಿಗಾಗಿ, ಭೂಮಿಯಿಂದ ಒಕ್ಕಲೆಬ್ಬಿಸುವುದನ್ನು ತಡೆಯಬೇಕು, ಬದುಕಲು ಯೋಗ್ಯವಾದ ಮನೆ, ನಿವೇಶನ ಮಂಜೂರು ಮಾಡಬೇಕು. ಕೃಷಿ ಉತ್ಪನ್ನಗಳ ಬೆಲೆ ನಿಗದಿಗೆ ಆಯೋಗ ರಚಿಸಿ, ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ಸರ್ಕಾರ ಸಂಘಗಳ ರದ್ದತಿ ವಿರೋಧಿಸಿ, ಸಹಕಾರ ಸಾಲ ಮನ್ನಾದ 2500 ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ವೃದ್ಧಾಪ್ಯ ವೇತನ, ಅಂಗವಿಕಲರ, ವಿಧವೆಯರ ವೇತನ ಮಂಜೂರು ಮಾಡಬೇಕು, ಎಪಿಎಲ್, ಬಿಪಿಎಲ್ ಪದ್ದತಿ ರದ್ದುಪಡಿಸಿ ಎಲ್ಲರಿಗೂ 35 ಕೆಜಿ ಆಹಾರಧಾನ್ಯ ಕೊಡುವ ಮೂಲಕ ಭದ್ರತೆ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ನಿರಂತರ ವಿದ್ಯುತ್: ಪಡಿತರಕ್ಕೆ ಅರ್ಜಿ ಸಲ್ಲಿಸಿದವರಿಗೆ ತಿಂಗಳೊಳಗಾಗಿ ಕಾರ್ಡ್ ಕೊಡ್ ವಿತರಿಸಬೇಕು, ಕೃಷಿ ಪಂಪ್ಸೆಟ್ಗಳಿಗೆ, ಗ್ರಾಮಾಂತರ ಪ್ರದೇಶಕ್ಕೆ ಕನಿಷ್ಠ 10ಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ರಾಜ್ಯದ ನೀರಾವರಿ ಹೆಚ್ಚಿಸಲು ಡಾ. ಪರಮಶಿವಯ್ಯ ವರದಿ ಜಾರಿಗಾಗಿ ಕೃಷ್ಣ ಬಿ. ಸ್ಕಿಮ್ನಲ್ಲಿ ಗುಲ್ಬರ್ಗ ಜಿಲ್ಲೆಗೆ ನ್ಯಾಯಯುತ ಸಾಲ ಒದಗಿಸಬೇಕು, ರೈತರ ಆತ್ಮಹತ್ಯೆ ತಡೆಯಬೇಕು ಮತ್ತು ಚಿಲ್ಲರೆ ವ್ಯಾಪಾರದಲ್ಲಿ, ಕೃಷಿಯಲ್ಲಿ ವಿದೇಶಿ ನೇರ ಬಂಡವಾಳ ವಿರೋಧಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮತ್ತು ಕಾರ್ಯದರ್ಶಿ ಗೌರಮ್ಮ ಪಾಟೀಲ್, ಸೋಮಶೇಖರ ಮುದ್ದಡಗಾ, ವಿಠ್ಠಲರಾವ ಬಿಲಗುಂದಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು, ಗ್ರಾಮಗಳ ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

