ದುಶ್ಚಟಗಳಿಂದ ದೂರವಿರಿ: ಚೆನ್ನವೀರ ಶ್ರೀ
ಚಿಂಚೋಳಿ: ಹಳ್ಳಿಗಳಲ್ಲಿ ನೆಮ್ಮದಿ ಜೀವನ ಸಾಗಿಸಲು ದುಶ್ಚಟಗಳಿಂದ ದೂರವಿರಬೇಕು. ಅದುವೇ ಹಾರಕೂಡ ಮಠಕ್ಕೆ ನೀಡುವ ದೊಡ್ಡ ಕಾಣಿಕೆ ಎಂದು ಹಾರಕೂಡ ಪೀಠಾಧಿಪತಿ ಚೆನ್ನವೀರ ಶ್ರೀ ಹೇಳಿದರು.
ತಾಲೂಕಿನ ಕೊರವಿ ಗ್ರಾಮದಲ್ಲಿ ಗುರುವಾರ ಕೊರವಂಜೇಶ್ವರಿ ಮಾತಾ ದೇವಾಲಯ ಕಟ್ಟಡ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಾರಕೂಡ ಮಠಕ್ಕೆ ಹಣ, ಬಂಗಾರ ಬೇಕಾಗಿಲ್ಲ. ದುಶ್ಚಟ, ಮದ್ಯಪಾನ, ಗುಟುಕಾ, ತಂಬಾಕು ಸೇವನೆ ಬಿಟ್ಟರೆ ಅದೇ ಮಠಕ್ಕೆ ನೀಡುವ ಕಾಣಿಕೆ ಎಂದರು.
ಶಾಸಕ ಡಾ. ಉಮೇಶ ಜಾಧವ ಮಾತನಾಡಿ, ಐತಿಹಾಸಿಕ ದೇವಸ್ಥಾನ ಕೋರವಂಜೇಶ್ವರ ಮಾತೆಯ ದೇವಾಲಯ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 2.50 ಲಕ್ಷ ಮತ್ತು ಬೀದರ್ ಸಂಸದ ಧರ್ಮಸಿಂಗ್ ಅವರಿಂದ 5 ಲಕ್ಷ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಕೈಲಾಸನಾಥ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಬಿ.ಜಿ.ಪಾಟೀಲ್, ನೀಲಕಂಠ ಮೂಲಗೆ ಮುಂತಾದವರು ಮಾತನಾಡಿದರು.
ಮುತ್ಯಾನ ಬಬಲಾದ ಮನಿಷ ಗುರುಪಾದಲಿಂಗ ಶ್ರೀ, ಚಿಕ್ಕಗುರುನಂಜೇಶ್ವರ ಶ್ರೀ, ಭರತನೂರ, ಸಿದ್ದಲಿಂಗ ಶ್ರೀ ಹೊಸಳ್ಳಿ ಮಠ, ಜಿಪಂ ಸದಸ್ಯರಾದ ಸಂಜೀವನ್ ಯಾಕಾಪುರ, ರೇಣುಕಾ ರಾಠೋಡ, ಸುನಂದ ಕೊರವಿ, ಡಾ. ಪಾಂಡುರಂಗ ಪೂಜಾರಿ, ಮಲಕಾಜಪ್ಪ ಶಿವಪುತ್ರಪ್ಪ ಪಾಟೀಲ್, ಚಂದ್ರಕಾಂತ ರಂಗನೂರ್, ಬಸವರಾಜ, ಮೇಘರಾಜ ರಾಠೋಡ, ರವಿರಾಜ ಕೊರವಿ, ಸತೀಶ ಪಾಟೀಲ್, ಅಮರ ಜಾಧವ, ಕಂಟೆಪ್ಪ ಕೊಂಡಂಪಳ್ಳಿ, ದೇವೇಂದ್ರಪ್ಪ ಪಾಟೀಲ್ ಇತರರು ಉಪಸ್ಥಿತರಿದ್ದರು.
ಕಸಾಪ ಅಧ್ಯಕ್ಷ ಸುಭಾಷ ಶೀಲವಂತ ಸ್ವಾಗತಿಸಿದರು. ಶಿವಪ್ರಕಾಶ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಮಾಳಗಿ ಕುಪನೂರ ವಂದಿಸಿದರು. ಹಾರಕೂಡಶ್ರೀ, ಮುತ್ಯಾನ ಬಬಲಾದ ಶ್ರೀ ಕೊರವಂಜೇಶ್ವರಿ ಮಾತೆ ದೇವಾಲಯ ಕಟ್ಟಡದ ನಿರ್ಮಾಣಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಮಹಿಳೆಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

