ಗುಲ್ಬರ್ಗಾ

ಸ್ಮರಣಶಕ್ತಿ ವೃದ್ಧಿಗೆ ಸಹನೆ ಅವಶ್ಯ: ಡಾ.ಗಿರೀಶ್

Published On :

ಗುಲ್ಬರ್ಗ/ಶಹಾಬಾದ್: ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿನ ಸಿಟ್ಟು ಒಳ್ಳೆಯದು. ಅತಿ ಸಿಟ್ಟು ಸಮಸ್ಯೆಗೆ ಕಾರಣವಾಗುತ್ತದೆ. ಸಿಡುಕುತನದಿಂದ ತಾಳ್ಮೆ ಕಳೆದುಹೋಗುತ್ತದೆ. ಒಳ್ಳೆ ತಾಳ್ಮೆಯಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ. ಸಕಾರಾತ್ಮಕ ವಿಚಾರದಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ. ಸಕಾರಾತ್ಮಕ ವಿಚಾರದಿಂದ ಸಂತೋಷವಾಗುತ್ತದೆ. ಜ್ಞಾಪಕಶಕ್ತಿಯೂ ಹೆಚ್ಚುತ್ತದೆ ಎಂದು ಮನೋವಿಜ್ಞಾನಿ ಡಾ.ಗಿರೀಶ ಪುತ್ತೂರ ಹೇಳಿದರು.
ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಬಸಮ್ಮ ಗುರುಬಸಪ್ಪ ಗೊಳೇದ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ 'ವ್ಯಕ್ತಿತ್ವ ವಿಕಸನ' ಕುರಿತು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅತಿ ಒತ್ತದದಿಂದ ಇದ್ದಾಗ ಚೈತನ್ಯ ಕುಂದುತ್ತದೆ. ಇದರಿಂದ ಹಾರ್ಮೋನ್‌ಗಳು ಕಡಿಮೆ ಉತ್ಪತ್ತಿಯಾಗಿ ಬೇಸರ ಹೆಚ್ಚುತ್ತದೆ. ಇದರಿಂದ ನಕಾರಾತ್ಮಕ ವಿಚಾರಗಳು ಹೆಚ್ಚಾಗಿ ಜ್ಞಾಪನೆ ಸಾಮರ್ಥ್ಯ ಕಡಿಮೆಯಾಗಿ, ಕಲಿಕಾ ಸಾಧನೆ ಕುಂಠಿತವಾಗುತ್ತದೆ ಎಂದು ವಿವರಿಸಿದರು.
ಅತಿಯಾದ ಆಲೋಚನೆ ವಿವೇಚನೆ ಕಳೆಯುತ್ತದೆ. ಇದರಿಂದ ಖಿನ್ನತೆ ಉಂಟಾಗಿ, ಏಕಾಂಗಿತನದಿಂದ ಮನಸ್ಸು ಗೊಂದಲದ ಗೂಡಾಗುತ್ತದೆ. ಇದು ಆತ್ಮಹತ್ಯೆಯ ಯೋಜನೆಗೆ ದಾರಿ ಮಾಡಿಕೊಡುತ್ತದೆ. ಸಮಸ್ಯೆಗಳು ವ್ಯಕ್ತಿಯನ್ನು ದೊಡ್ಡ ವ್ಯಕ್ತಿಯನ್ನಾಗಿಸುತ್ತವೆ. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದಾಗ ಜೀವನದಲ್ಲಿ ಗೆಲವು ಸಾಧಿಸಲು ಸಾಧ್ಯ ಎಂದು ಹೇಳಿದರು.
ಸಂಸ್ಥೆ ಕಾರ್ಯದರ್ಶಿ ನಿರಂಜನ ಗೊಳೇದ್, ಸದಸ್ಯರಾದ ವಿಜಯಕುಮಾರ್ ಮುಟ್ಟತ್ತಿ, ಪ್ರಾಚಾರ್ಯ ಶಕುಂತಲಾ ಹೋಳಿ, ಚಂದ್ರಶೇಖರ ಉಪಸ್ಥಿತರಿದ್ದರು.
ಹಣಮಂತರಾವ್ ಇಂಗಿನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದವಿ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, ಅಧ್ಯಾಪಕ ವೃಂದದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.