ಜೂಜುಕೋರರ ಬಂಧನ
ಗುಲ್ಬರ್ಗ: ನಗರದ ಪಂಜಾಬ್ ಬೂಟ್ಹೌಸ್ ಪಕ್ಕದಲ್ಲಿ ಜೂಜಾಟದಲ್ಲಿ ತೊಡಗಿದ್ದ 16 ಜನರನ್ನು ಬಂಧಿಸಿಅವರಿಂದ 18,640 ಜಪ್ತಿ ಮಾಡಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ದಾಳಿ ನಡೆಸಿ ರಾಜಕುಮಾರ ಕಾಮಠಾಣೆ, ಮಲ್ಲಿಕಾರ್ಜುನ ಮರುಮಕಲ್, ಶಿವಪುತ್ರ ಹಡಪದ, ಮುಬಿನ್, ರಿಚರ್ಡ ನಿಕ್ಸನ್, ರಾಜಕುಮಾರ್ ಹಡಪದ, ಕಿರಣಕುಮಾರ್ ಆಗ್ರಹಾರಕರ್, ರಾಜಕುಮಾರ್ ಪವಾರ, ಜಗನಾಥ ಹಡಪದ, ಮಂಜುನಾಥ ಸಿಂಗ್ರೆ, ನಾರಾಯಣ ಹೀಲಾಲಪುರ, ಬಸವರಾಜ ಪೂಜಾರಿ, ಅನೀಲ್ ಹಡಪದ, ಮಹ್ಮದ್ ಮೌಲಾ, ದತ್ತು ಹಿಲಾಲಪುರ, ಭೀಮು ಉಡುಗಿ ಅವರನ್ನು ಬಂಧಿಸಿದ್ದಾರೆ.
ಈ ಕುರಿತು ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ನಾಪತ್ತೆ
ಗುಲ್ಬರ್ಗ: ನಗರದ ಸ್ವಾಮಿ ವಿವೇಕಾನಂದ ಕಾಲೋನಿಯ ಬಾಲಕನೊಬ್ಬ ನಾಪತ್ತೆಯಾದ ಘಟನೆ ನಡೆದಿದೆ. ಶಾಮರಾವ ತಂದೆ ಶಿವರಾವ ಸುಲ್ತಾನಪುರ ಎಂಬುವರ ಮಗ ಸಚಿನ್ ಎಂಬಾತ ಸಂತೋಷ ಕಾಲೋನಿಯಲ್ಲಿ ಭೋಗೇಶ್ವರ ಶಾಲೆಯಲ್ಲಿ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದನು. ನ.5ರಂದು ಬೆ.7.45 ಗಂಟೆಗೆ ಮನೆಯಿಂದ ಹೊರಗೆ ಹೋದವನು ಮರಳಿ ಬಂದಿಲ್ಲ. ಎಲ್ಲ ಕಡೆಗೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಆತನ ಮೊಬೈಲ್ ಸ್ವಿಚ್ಆಫ್ ಆಗಿದ್ದು, ಕೂಡಲೇ ಅವನನ್ನು ಹುಡುಕಿ ಕೊಡಿ ಎಂದು ಶಿವರಾವ ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾನೆ.
ಡೀಸೆಲ್ ಕಳ್ಳತನ
ಗುಲ್ಬರ್ಗ: ಫರಹತಾಬಾದ್ನ ಗಣೇಶ ಪೆಟ್ರೋಲ್ ಬಂಕ್ನಲ್ಲಿ 47,709 ಮೌಲ್ಯದ ಡೀಸೆಲ್ ಕಳ್ಳತನವಾಗಿದೆ. ಕಳ್ಳರು ಡೀಸೆಲ್ ಟ್ಯಾಂಕ್ ತೆಗೆದು ಸುಮಾರು 828 ಲೀಟರ್ ಡೀಸೆಲ್ ಕಳ್ಳತನ ಮಾಡಿದ್ದಾರೆ ಎಂದು ವೀರಭದ್ರಯ್ಯ ಪಾಟೀಲ್ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

