ಸಂಕ್ಷಿಪ್ತ ಸುದ್ದಿ
ಇಂದು ಅಖಿಲ ಭಾರತ ಸಹಕಾರ ಸಪ್ತಾಹ
ಗುಲ್ಬರ್ಗ: ಕರ್ನಾಟಕ ಸಹಕಾರ ಮಹಾಮಂಡಳ, ಗುಲ್ಬರ್ಗ-ಯಾದಗಿರಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಸೇರಿದಂತೆ ಇನ್ನೀತರ ಸಹಕಾರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನ.17 ರಂದು ಬೆಳಗ್ಗೆ 10ಕ್ಕೆ ನಗರದ ವಾದಿರಾಜ್ ಭವನ ಹಿಂದುಗಡೆಯಿರುವ ಜಗದ್ಗುರು ಕಲ್ಯಾಣ ಮಂಟಪದಲ್ಲಿ 60ನೇ ಅಖಿಲ ಭಾರತ ಸಹಕಾರ ಸಪ್ತಾಹ(ಸಹಕಾರ ಸಂಬಂಧಿ ತೆರಿಗೆ ಮತ್ತು ಕಾಯ್ದೆ ದಿನ) ಕಾರ್ಯಕ್ರಮ ನಡೆಯಲಿದೆ. ಸಹಕಾರ ಸಚಿವ ಎಚ್.ಎಸ್. ಮಹಾದೇವಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಠದಲ್ಲಿ ಇಂದು ಶಿವಾನುಭವ ಗೋಷ್ಠಿ
ಜೇವರ್ಗಿ: ಪಟ್ಟಣದಲ್ಲಿರುವ ಷಣ್ಮುಖ ಶಿವಯೋಗಿಗಳ ಮಠದ ಆವರಣದಲ್ಲಿ ನ.17ರಂದು ಸಂಜೆ 5 ಗಂಟೆಗೆ ಶಿವಾನುಭವ ಗೋಷ್ಠಿ ನಡೆಯಲಿದೆ. ಷಣ್ಮುಖ ಶಿವಯೋಗಿಗಳ ಭಕ್ತ ಬಳಗ ಆಯೋಜಿಸಿದ ಕಾರ್ಯಕ್ರಮದಲ್ಲಿ ತಾಂಬಾಳದ ಷಣ್ಮುಖ ಶಿವಯೋಗಿಗಳ ಮಠದ ಪೀಠಾಧಿಪತಿ ವಿಜಯಕುಮಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸುರೇಶ ಸಜ್ಜನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಐ.ಬಿ. ಹಿರೇಮಠ ಅನುಭಾವ ನೀಡುವರು. ಬಸಯ್ಯಸ್ವಾಮಿ ಸ್ಥಾವರಮಠ ಅಧ್ಯಕ್ಷತೆ, ಗುರುಲಿಂಗಪ್ಪ ಬುಕ್ಕಾ ವಚನ ಗಾಯನ, ಬಸವಣ್ಣೆಪ್ಪ ಸಾಹು ಸೀರಿ ದಾಸೋಹಿಗಳಾಗಿದ್ದಾರೆ.
ಛಾಯಾಚಿತ್ರ
ಪ್ರದರ್ಶನ ಇಂದು
ಗುಲ್ಬರ್ಗ: ಪಾಂಡಿಚೇರಿ ಅರವಿಂದಾಶ್ರಮದ ಅಧಿದೇವತೆ ಮಾತೆಯವರು ಭೌತಿಕ ದೇಹವನ್ನು ತ್ಯಜಿಸಿದ ದಿನವಾದ ನ.17ರಂದು ಬೆ. 10.30ಕ್ಕೆ ನಗರದ ಚೈತನ್ಯಮಯಿ ಆರ್ಟ್ ಗ್ಯಾಲರಿಯಲ್ಲಿ ಮಾತಾರವಿಂದರ ಸಮಾಧಿ ಛಾಯಾಚಿತ್ರಗಳ ಪ್ರದರ್ಶನ, ಮಾತೆಯವರು ರಚಿಸಿದ ಕಲಾಕೃತಿಗಳ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ವೆಂಕಟೇಶ ಕೆ. ಜನಾದ್ರಿ ಅವರು ಜೈತನ್ಯಮಯಿ ಮಾತೆಯವರ ಕುರಿತು ಉಪನ್ಯಾಸ ನೀಡಲಿದ್ದಾರೆ. ಹೂಗಳು ಅವುಗಳ ಅಧ್ಯಾತ್ಮಿಕ ಸಂಕೇತಾರ್ಥ ಕುರಿತು ಅರವಿಂದೊ ಸೊಸೈಟಿ ತಯಾರಿಸಿದ ಸಿಟಿ ಪ್ರದರ್ಶನ ನಡೆಯಲಿದೆ.
ವಿದ್ಯಾರ್ಥಿ ನಾಪತ್ತೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರ ಠಾಣೆ ವ್ಯಾಪ್ತಿಯ ಗೋಳಾ(ಕೆ) ಗ್ರಾಮದ ನಿಜಾಮ ಬಜಾರ್ ನಿವಾಸಿ, ವಿದ್ಯಾರ್ಥಿ ಸುನೀಲ್ (14) ಅ.3 ರಂದು ಕಾಣೆಯಾಗಿದ್ದಾರೆ. ಕಾಣೆ ವೇಳೆ 4 ಅಡಿ ಎತ್ತರ, ಬಿಳಿ ಬಣ್ಣ, ನೀಲಿ ಬಣ್ಣದ ಟಿ-ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ನಗರದ ಇಂಜನ್ಫೈಲ್ ಬಡಾವಣೆಯ ಮಾನಸಿಕ ಅಸ್ವಸ್ಥ ನರಸಪ್ಪ ತಳವಾರ (23) ನವೆಂಬರ್ನಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ ಸಾದಾ ಕಪ್ಪು ಮೈ ಬಣ್ಣ ಬಿಳಿಶರ್ಟ್, ಕರಿಬಣ್ಣದ ಲೈನಿಂದ ಪ್ಯಾಂಟ್ ಧರಿಸಿದ್ದಾರೆ. ದುಂಡುಮುಖ, ಸಾದಾ ಮೈಕಟ್ಟು. ಕನ್ನಡ, ಹಿಂದಿ ಮಾತನಾಡುತ್ತಾರೆ. ಸುಳಿವು ಸಿಕ್ಕಲ್ಲಿ ಶಹಾಬಾದ್ ನಗರ ಠಾಣೆ ದೂ.08474-204444, ಮೊ.9480803570 ಸಂಪರ್ಕಿಸಲು ಕೋರಲಾಗಿದೆ.
ಇಂದು ಸಮಾರೋಪ
ಗುಲ್ಬರ್ಗ: ಶಾಂತಿ ಪ್ರಕಾಶನ ತನ್ನ ಸ್ಥಾಪನೆಯ 25 ವರ್ಷ ತುಂಬಿದ ಸಂದರ್ಭದಲ್ಲಿ ಶಾಂತಿಗಾಗಿ ಸಾಹಿತ್ಯ ಎಂಬ ವಿಷಯದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪುಸ್ತಕ ಮೇಳ, ವಿವಿಧ ಕಾರ್ಯಕ್ರಮಗಳ ಸಮಾರೋಪ 17ರಂದು ಬೆಳಗ್ಗೆ 11ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ. ಶಾಂತಿ ಪ್ರಕಾಶನ ಮಂಗಳೂರಿನ ಸದಸ್ಯ ಮುಹಮ್ಮದ್ ಇಸ್ಹಾಖ್ ಪುತ್ತೂರು ಅಧ್ಯಕ್ಷತೆಯಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಪರಿವರ್ತನೆ ಎಂಬ ವಿಷಯದಲ್ಲಿ ನಡೆಯುವ ಸಮಾರಂಭದಲ್ಲಿ ಸಾಹಿತಿ ಪ್ರೊ. ವಿಕ್ರಂ ವಿಸಾಜಿ, ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಭಾಗವಹಿಸಲಿದ್ದಾರೆ.
ಇಂದು ಕುರುಬ ಸಮಾಜದ ಸಭೆ
ಆಳಂದ: ಪಟ್ಟಣದ ಕನಕ ಭವನದಲ್ಲಿ ನ.17ರಂದು ಬೆ.11ಕ್ಕೆ ಕನಕ ಜಯಂತಿ ಆಚರಣೆ ಅಂಗವಾಗಿ ಕರ್ನಾಟಕ ಪ್ರದೇಶ ಕುರುಬರ ತಾಲೂಕು ಸಂಘದ ಆಶ್ರಯದಲ್ಲಿ ಸಮಾಜದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಸಂಗೋಳಿ ರಾಯಣ್ಣ ಯುವ ಕುರುಬರ ಸಂಘದ ಕಾರ್ಯಾಧ್ಯಕ್ಷ ಮಲ್ಲಿನಾಥ ಘೋಡಕೆ ಅವರು ತಿಳಿಸಿದ್ದಾರೆ. ಸಮಾಜದ ಹಿರಿಯರು, ಯುವಕರು ಜಯಂತಿ ಆಚರಣೆ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಅವರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

