ಗುಲ್ಬರ್ಗಾ

ಭಾದ್ರಪದ ಮಾಸ: ಮಾಂಸದಂಗಡಿ ಬಂದ್‌ಗೆ ಜೈನಮುನಿಗಳ ಮನವಿ

Published On :

ಕನ್ನಡಪ್ರಭ ವಾರ್ತೆ, ಆಳಂದ, ನ.26
ಜೈನ ಧರ್ಮೀಯರಿಗೆ ಭಾದ್ರಪದ ಮಾಸ ಪವಿತ್ರವಾಗಿದ್ದು, 10 ದಿವಸಗಳ ಪರ್ಯಂತ ರಾಜ್ಯದಲ್ಲಿನ ಮಾಂಸದಂಗಡಿಗಳನ್ನು ಬಂದ್ ಮಾಡುವಂತೆ ಸರ್ಕಾರಕ್ಕೆ ಮನವರಿಕೆ ಮಾಡುವಂತೆ ಅಫಜಲ್ಪುರ ಶಾಸಕ ಮಾಲಿಕಯ್ಯ ಗುತ್ತೇದಾರ ಅವರಿಗೆ ಜೈನಮುನಿ 108 ದಿಗಂಬರ ನಿಯಮಸಾಗರ ಮಹಾರಾಜರು ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಜೈನ ಸಮಾಜದ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಮಹಾವೀರರ ಅಹಿಂಸಾ ತತ್ವ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಇತರರಿಗೆ ಆದರ್ಶರಾಗುವಂತೆ ಸಮಾಜದ ಜನರಿಗೆ ಸಲಹೆ ಮಾಡಿದರು.
ಸುಪಾರ್ ಶಿವಸಾಗರ ಮಹಾರಾಜ, ವೃಷಭಸಾಗರ ಮಹಾರಾಜ ಇವರು ವಿಶೇಷ ಧರ್ಮ ಬೋಧನೆ ಮಾಡಿದರು. ಅಫಜಲ್ಪುರ ಶಾಸಕ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಮುನಿಗಳು ನೀಡಿರುವ ಮನವಿ ಪತ್ರವನ್ನು ಸರ್ಕಾರದ ಗಮನ ಸೆಳೆದು ಭಾದ್ರಪದ ಮಾಸದಲ್ಲಿ ಮಾಂಸದಂಗಡಿಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಡಾ.ರಾಜಾ ವೆಂಕಟಪ್ಪ ನಾಯಕ ಸುರಪುರ, ಸಮಾಜದ ಮುಖಂಡ ಪ್ರಮೋದ ಶಹಾ ಮಾತನಾಡಿದರು.
ಪ್ರಮುಖರಾದ ಸುಭಾಷ ಶಹಾ, ಸತೀಶ ಕಟಂಬಲೆ, ಮನೋಜ ಶಹಾ, ಶೇಖರ ಶಹಾ, ಸಂತೋಷ ಕಟಂಬಲೆ, ಧನರಗ ಸಮಾಜದ ಅಧ್ಯಕ್ಷ ರಾಜೇಂದ್ರ ಬಂಡಗಾರ, ಜಿ.ಕೆ.ಪೂಜಾರು ಇತರ ಸಮಾಜದ ಸಮಾಜದ ಗಣ್ಯರು, ನಾಗರಿಕರು ಪಾಲ್ಗೊಂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.