'ಅಲ್ಪಸಂಖ್ಯಾತರ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ'
ಅಫಜಲ್ಪುರ: ಅಲ್ಪಸಂಖ್ಯಾತರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಶಾಸಕ ಮಾಲಿಕಯ್ಯ ಗುತ್ತೇದಾರ ಹೇಳಿದರು.
ತಾಲೂಕಿನ ಅತನೂರ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಯಡಿ 40 ಲಕ್ಷ ಅನುದಾನದಲ್ಲಿ ಶಾದಿಮಹಲ್ ಕಟ್ಟಡ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ, ಲಿಂಗಾಯತ, ಬ್ರಾಹ್ಮಣ ಎನ್ನುವ ಬೇಧಭಾವಗಳಿಲ್ಲ. ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಅಫಜಲ್ಪುರ ಮತಕ್ಷೇತ್ರದಲ್ಲಿ ಮುಸ್ಲಿಂ ಬಾಂಧವರು ಹೆಚ್ಚಾಗಿ ವಾಸಿಸುವ ಭೋಗನಳ್ಳಿ, ಬಂದರವಾಡ, ಅತನೂರ, ಗೊಬ್ಬುರ, ಕರಜಗಿ ಗ್ರಾಮಗಳಲ್ಲಿ ಶಾದಿಮಹಲ್ ನಿರ್ಮಿಸಲಾಗುವುದು. 11 ಶಾದಿ ಮಹಲ್ಗನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಪೈಕಿ 5 ಶಾದಿ ಮಹಲ್ ಮಂಜೂರಾಗಿವೆ. ಸಣ್ಣ ಹಳ್ಳಿಗಳಲ್ಲಿರುವ 19 ಸನ್ಮಾನಗಳಿಗೆ ತಡೆಗೋಡೆ, ತಂತಿಬೇಲಿ ಅಳಡಿಸುವಂತೆ ಸಚಿವರಾದ ಖಮರುಲ್ ಇಸ್ಲಾಂ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಮುಖಂಡರಾದ ಇಲಿಯಾಸ್ ಶೇಠ ಮಾತನಾಡಿದರು. ಗುರುಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಲ್ಕಬಿರ್ ಸೊಸೈಟಿ ಅಧ್ಯಕ್ಷ ಖಾಜಾ ಹುಸೇನ್ ಮಲ್ಲಾಬಾದ್ ಮುಖಂಡರಾದ ಪ್ರವೀಣ ಗುತ್ತೇದಾರ, ಸಾಯಬಣ್ಣ ಪೂಜಾರಿ ತಾಪಂ ಸದಸ್ಯ ಶಿವಪುತ್ರಪ್ಪ ಕರೂರ, ವಿಶ್ವನಾಥ ರೇವುರ, ಮೌಲಾಸಾಬ್ ನಧಾಫ, ಸಲಿಂ ಇನಾಮದಾರ್, ಹಫೀಜ್ ಮಣ್ಣೂರ, ಸರದಾರ ಪಟೇಲ್, ಅಧಿಕಾರಿಗಳಾದ ಎಸ್.ಪಿ. ನಂದಗಿರಿ, ಚಿತ್ರಶೇಖರ ದೇಗಲಮಡಿ, ಶರಣಬಸಪ್ಪ ನಾಗನಳ್ಳಿ, ಮಹಿಬೂಬ ಪಾಷಾ, ಹೈದರಸಾಬ್ ಜಾಫರಸಾಬ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

