ನೃಪತುಂಗ ಸಾರಿಗೆ ವಿಸ್ತರಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.26
ಇಲ್ಲಿನ ಮಹಾತ್ಮ ಬಸವೇಶ್ವರ ಕಾಲೋನಿ ನಿವಾಸಿಗಳು ತಮ್ಮ ಬಡಾವಣೆಗೂ ಸಾರಿಗೆ ಸಂಸ್ಥೆ ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ಓಡಿಸುತ್ತಿರುವ ನೃಪತುಂಗ ನಗರ ಸಾರಿಗೆ ಸೇವೆ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ನಗರದ ಪ್ರಮುಖ ಬಡಾವಣೆ ಆಗಿದ್ದರೂ ಇಲ್ಲಿಗೆ ಇಂದಿಗೂ ನಗರ ಸಾರಿಗೆ ಸೇವೆ ಏಕೆ ದಕ್ಕುತ್ತಿಲ್ಲ. ಆಟೋದವರು ಬೇಕಾಬಿಟ್ಟಿ ದರ ಕೇಳುತ್ತ ಜನರನ್ನು ಪರೇಶಾನ್ ಮಾಡುತ್ತಿದ್ದಾರೆ. ಇಂತಹ ಅವ್ಯವಸ್ಥೆಗೆ ನಗರ ಸಾರಿಗೆ ನಗರದ ಹಲವೆಡೆ ತಕ್ಕ ಉತ್ತರ ನೀಡಿ ಜನಮನ ಗೆದ್ದಿರುವಾಗ ಬಸವೇಶ್ವರ ಕಾಲೋನಿಯಲ್ಲಿಯೂ ಸಾರ್ವಜನಿಕರ ಸಹಕಾರದಿಂದ ಇಂತಹ ಸಾಧನೆ ಸುಲಭದಲ್ಲಿ ಮಾಡಲು ಸಾಧ್ಯ ಎಂದು ಬಡಾವಣೆಯ ಜನ ಹೇಳುತ್ತಿದ್ದಾರೆ.
ಬಸವೇಶ್ವರ ಕಾಲೋನಿಯ ಜೊತೆಗೇ ಅಕ್ಕಪಕ್ಕದ ಆದರ್ಶ ನಗರ, ಗಣೇಶ ನಗರ, ಪ್ರಗತಿ ಕಾಲೋನಿ, ಮೆಹಬೂಬ್ ನಗರವರೆಗೂ ಬಸ್ಸಿನ ಸೇವೆ ವಿಸ್ತರಿಸಬಹುದಾಗಿದೆ. ಇಂತಹ ಸುವರ್ಣ ಅವಕಾಶ ಇದ್ದರೂ ಅದ್ಯಾಕೋ ಈಶಾನ್ಯ ಸಾರಿಗೆ ಸಂಸ್ಥೆ ಈ ನಗರವನ್ನು ನೃಪತುಂಗ ಸೇವೆಯಿಂದ ವಂಚಿತರನ್ನಾಗಿ ಮಾಡಿದೆ ಯಾಕೋ ಎಂದು ಬಸವೇಶ್ವರ ಬಡಾವಣೆ ನಿವಾಸಿಗಳು ಆಕ್ಷೇಪಿಸಿದ್ದಾರೆ.
ಕಾಲೋನಿ ನಿವಾಸಿಗಳಾದ ಕಾಂತರಾಜ ತವಗ, ಬಸವರಾಜ ಹರಸೂರ್, ಬೆನಕಪ್ಪ, ಶೇಖ್ ಆರೀಫ್ ಹುಸೇನ್, ಮೊಹ್ಮದ್ ಫರೂಕ್, ಶರಣಬಸಪ್ಪ, ಸೈಯ್ಯದ್ ಆದಿಲ್ ಅಹ್ಮದ್, ಚಂದ್ರಕಾಂತ, ಭೀಮರಾವ ಓಕಳಿ, ಬಾಬೂರಾವ ಭಂಡಾರೆ, ಗೀತಾ, ರಾಜಶೇಖರ ಸರಸಂಬಿ, ಸಂಗಣ್ಣ ಸೇರಿದಂತೆ ನೂರಾರು ನಿವಾಸಿಗಳು ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ನಿಯಂತ್ರಣಾಧಿಕಾರಿ, 2ನೇ ವಿಭಾಗ ಇವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ನಗರ ಸಾರಿಗೆ ಸೇವೆಗಾಗಿ ಆಗ್ರಹಿಸಿದ್ದಾರೆ.
ನೃಪತುಂಗ ನಗರ ಸಾರಿಗೆ ಅಲ್ಲದೆ ಹೋದರೂ ಸಂಸ್ಥೆ ಚಿಂತನೆ ನಡೆಸಿರುವಂತೆ ಮಿನಿ ಕ್ಯಾಬ್ಗಳ ಸೇವೆಗಾದರೂ ಬಸವೇಶ್ವರ ನಗರ ಸೇರಿದಂತೆ ಅಕ್ಕಪಕ್ಕದ ನಗರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಬಸವೇಶ್ವರ ನಗರ, ಗಣೇಶ ನಗರ, ಆದರ್ಶ ಕಾಲೋನಿ ಸೇರಿದಂತೆ ಅಕ್ಕಪಕ್ಕದ ಬಡಾವಣೆಗಳ ನಿವಾಸಿಗಳು ಒತ್ತಾಯಿಸಿದ್ದಾರೆ.
ಈಶಾನ್ಯ ಸಾರಿಗೆ ಸಂಸ್ಥೆ ಬಡಾವಣೆಯ ಜನರ ಒಕ್ಕೊರಲ ಮನವಿಗೆ ಸ್ಪಂದಿಸಿ ಆದಷ್ಟು ಬೇಗ ಸಾರಿಗೆ ಸೇವೆ ಆರಂಭಿಸುವ ನಿರೀಕ್ಷೆ ತಮ್ಮದಾಗಿದೆ ಎಂದು ಕಾಂತರಾಜ ತವಗ “OÚ«ÚsÚ®ÚúڒOæQ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

