ಟಿಪ್ಪು, ನಿಜಾಮರ ಬಗ್ಗೆ ತಪ್ಪು ತಿಳಿವಳಿಕೆ ಸಲ್ಲ
ಆಳಂದ: ಮೈಸೂರಿನ ಹುಲಿ, ಮಹಾನ್ ದೇಶಭಕ್ತನಾಗಿದ್ದ ಟಿಪ್ಪುಸುಲ್ತಾನ ಅವರ ತ್ಯಾಗ ಬಲಿದಾನ ಬಹುದೊಡ್ಡ ಕೊಡುಗೆಯಾಗಿದೆ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಆಶ್ರಯದಲ್ಲಿ ಏರ್ಪಡಿಸಿದ್ದ ಟಿಪ್ಪುಸುಲ್ತಾನರ 263ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಟಿಪ್ಪುವಿನ ಮತ್ತು ನಿಜಾಮ ರಾಜನ ಕುರಿತು ತಪ್ಪು ತಿಳಿವಳಿಕೆ ಮೂಡಿಸಲಾಗಿದೆ. ಇಂಥ ಜಯಂತಿಗಳ ಆಚರಣೆ ಮೂಲಕ ಅವರ ಬಗ್ಗೆ ಜನರಿಗೆ ನೈಜ ಇತಿಹಾಸ ತಿಳಿಸುವ ಕೆಲಸ ಆಗಬೇಕಾಗಿದೆ ಎಂದರು.
ದೇಶ ಗುಲಾಮಗಿರಿಯಲ್ಲಿದ್ದಾಗ ಅನೇಕ ಮುಸ್ಲಿಂ ನಾಯಕರು ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಮುಸ್ಲಿಂರು, ದಲಿತರು ಸೇರಿ ಎಲ್ಲ ವರ್ಗದವರಿಗೆ ಈ ದೇಶದಲ್ಲಿ ಬದುಕುವ ಹಕ್ಕಿದೆ, ಸ್ವಾತಂತ್ರ್ಯ ಪೂರ್ವ ದೇಶದ ಪ್ರಧಾನಿ ಭರ್ಕತ ಅಲಿ ಭೂಪಾಲಿ ಆಗಿದ್ದರು, ಯುವಕರು ಟಿಪ್ಪುವಿನಂತೆ ದೇಶ, ಸಮಾಜ ಕಟ್ಟುವ ಕೆಲಸದಲ್ಲಿ ಮುನ್ನೆಡೆದು ಎಲ್ಲರೂ ಒಂದಾಗಿ ಶಾಂತಿ, ಸೌಹಾರ್ದ ಜೀವನ ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು. ಬಳಿಕೆ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಬೀದರ್ ಲೋಕಸಭಾ ಸದಸ್ಯ ಎನ್.ಧರ್ಮಸಿಂಗ್, ಎಲ್ಲರು ಕೂಡಿ ಬದುಕು ನಡೆಸಬೇಕು. ಟಿಪ್ಪುವಿನಂತೆ ಕಾರ್ಯ ಮಾಡಿ ಯುವಕರು ಕೀರ್ತಿ ತರಬೇಕು ಎಂದರು. ಸಮಾರಂಭದಲ್ಲಿ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ, ಅಬ್ದುಲ್ ಸಲಾಂ ಸಗರಿ, ಕೈಗಾರಿಕೆ ಇಲಾಖೆ ಅಧಿಕಾರಿ ಜಾಫರ್ ಅನ್ಸಾರಿ ಮಾತನಾಡಿದರು.
ಇಲಿಯಾಸ್ ಅಹಮದ್ ಭಾಗವಾನ್, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್, ಮೋಹಿಜ್ ಕಾರಬಾರಿ, ಅಮ್ಜದ್ ಅಲಿ ಖರ್ಜಗಿ, ಸದಸ್ಯ ಜಾಕೀರ್ ಲಾಡಕಾ, ಆಯೂಬ ಅಲಿ ರೋತೆ, ಮುಖಂಡ ಶಿವುಪುತ್ರಪ್ಪ ಹತ್ತಿ, ಮೌಲಾ ಮುಲ್ಲಾ, ಪೀರಾಸತ ಅನ್ಸಾರಿ, ಸುಲೆಮಾನ್ ಮುಕುಟ್, ಮಕ್ದುಮ ಕಾಲೇಮಿರ್ ಅನ್ಸಾರಿ, ಬಸವರಾಜ ಪಾಟೀಲ್, ಜಗನಾಥ ಶೇಗಜಿ, ಅಫಜಲ್ ಅನ್ಸಾರಿ, ಸತಾರ ಮುರುಕರ, ರಿಯಾಸ್ ಭಾಗವಾನ, ಸೈಯದ್ ತನ್ವಿರ್, ರಾವುಫ್ ಅನ್ಸಾರಿ, ಜಾವೇದ್ ಭಾಗವಾನ, ಮೌಲಾನ ಮುಸ್ತಾಕ್ ಅಫಜಾ ಅನ್ಸಾರಿ ಪಾಲ್ಗೊಂಡಿದ್ದರು.
ಅಹಮದ್ ಅಲಿ ಸಗರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

