ಗುಲ್ಬರ್ಗಾ

ಹಂಸನಾಮಕ ಸಂಘದಿಂದ ಯಶಸ್ವಿ ವಿಷ್ಣುಸಹಸ್ರನಾಮ ಪಾರಾಯಣ

Published On :

ಗುಲ್ಬರ್ಗ: ಇಲ್ಲಿನ ರಾಮಮಂದಿರ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ರವೀಂದ್ರನಾಥ ಟ್ಯಾಗೋರ್ ನಗರ, ಓಝಾ ಲೇಔಟ್, ವಿವೇಕಾನಂದ ನಗರ ಬಡಾವಣೆಗಳನ್ನೊಳಗೊಂಡು ಸ್ಥಾಪನೆಯಾಗಿರುವ ಹಂಸನಾಮಕ ಪಾರಾಯಣ ಸಂಘದ ಪ್ರತಿ ಸಪ್ತಾಹದ ಕಾರ್ಯಕ್ರಮವಾಗುರುವ ವಿಷ್ಣು ಸಹಸ್ರನಾಮ ಪಾರಾಯಣ ಇಲ್ಲಿನ ಓಝಾ ಬಡಾವಣೆಯ ರಮೇಶ ಕುಲ್ಕರ್ಣಿ ನರಿಬೋಳ ಇವರ ನಿವಾಸದಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.
ಸಂಘದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾರಾಯಣದಲ್ಲಿ ಸೇರಿದ್ದರು. ನಾರಾಯಣಾಚಾರ್ಯ ಓಂಕಾರ ಅವರು ವಿಷ್ಣು ಸಹಸ್ರನಾಮ, ವಾಯುಸ್ತುತಿ, ಜಯತೀರ್ಥ ಸ್ತುತಿಗಳ ಪಾಠ ಹೇಳಿದರು. ನಂತರ ಎಲ್ಲರೂ ಸಮೂಹಿಕವಾಗಿ ವಿಷ್ಣುಸಹಸ್ರನಾಮ, ವಿಜಯರಾಯರ ಕವಚ, ರಮಾ ಸ್ತೋತ್ರ, ಲಾಲಿ ಹಾಡು, ನರಸಿಂಹದೇವರ ಧ್ಯಾನಶ್ಲೋಕ, ದಾಸರ ಪದಗಳ ಹಾಡುಗಾರಿಕೆ ಸೇರಿದಂತೆ ಅನೇಕ ಶ್ಲೋಕ- ಹರಿಪದಗಳನ್ನು ಹೇಳುತ್ತ 2 ಗಂಟೆಗಳ ಕಾಲ ಭಗವಂತನ ಸ್ಮರಣೆ ನಡೆಯಿತು.
ವಿಶ್ವಮಧ್ವ ಮಹಾ ಪರಿಷತ್ ಗುಲ್ಬರ್ಗ ಘಟಕದ ಅಧ್ಯಕ್ಷ ಅರವಿಂದ ನವಲಿ, ಹಿರಿಯರಾದ ಪದ್ಮನಾಭಾಚಾರ್ಯ ಜೋಶಿ, ಪಿಜಿ ಕುಲ್ಕರ್ಣಿ, ಗಣಪತರಾವ ಸೇರಿದಂತೆ ಬಡಾವಣೆಯ ಹಿರಿಯರು, ಮಕ್ಕಳು ಪಾರಾಯಣದಲ್ಲಿ ಭಾಗವಹಿಸಿದ್ದರು. ಹಂಸನಾಮಕ ಸಂಘ ಸ್ಥಾಪನೆಗೊಂಡಾದನಂತರ ರಮೇಶ ನರಿಬೋಳಿ ಅವರ ಮನೆಯಲ್ಲಿ ನಡೆದದ್ದು, 6ನೇ ಪಾರಾಯಣ ಕಾರ್ಯಕ್ರಮ. ಕಾರ್ಯಕ್ರಮ ಭಕ್ತಿಯಿಂದ ನಡೆಸಿಕೊಟ್ಟವರನ್ನು ಇದೇ ಸಂದರ್ಭದಲ್ಲಿ ಪದ್ಮನಾಭಾಚಾರ್ಯ ಜೋಷಿ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.