ಗುಲ್ಬರ್ಗಾ

ಆಮ್ ಆದ್ಮಿ ಪಾರ್ಟಿ ಯಾದಗಿರಿ ಜಿಲ್ಲಾ ಕೋರ್ ಕಮಿಟಿ ರಚನೆ

Published On :

ಗುರುಮಠಕಲ್: ಆಮ್ ಆದ್ಮಿ ಪಾರ್ಟಿಯ ಯಾದಗಿರಿ ಜಿಲ್ಲಾ ಕೋರ್ ಕಮಿಟಿ ರಚಿಸಲಾಗಿದ್ದು, 20 ಸದಸ್ಯರ ಸಮಿತಿಯು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಬೆಳವಣಿಗೆಗೆ ಶ್ರಮಿಸಲಿದೆ ಎಂದು ಪಕ್ಷದ ಸಂಚಾಲಕ ಅಮೀನರೆಡ್ಡಿ ಕಾಳೆಬೆಳಗುಂದಿ ವೈಜನಾಥ ಹಿರೇಮಠ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಈಗಾಗಲೇ ಜನವರಿ 26ರ ವರೆಗೆ ನಡೆದ ಉಚಿತ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ 1000 ಜನ ಸದಸ್ಯತ್ವ ಪಡೆದಿದ್ದಾರೆ ಎಂದು ತಿಳಿಸಿದರು.
ಉಚಿತ ನೋಂದಣಿಗೆ ಕೊನೆಯ ದಿನವಾದ ಜ. 26ರಂದು ದೇಶದಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರಾದವರ ಸಂಖ್ಯೆ 1 ಕೋಟಿ 5 ಲಕ್ಷಕ್ಕೆ ತಲುಪಿದೆ. ನಮ್ಮದು ಒಂದು ಕೋಟಿ ಸದಸ್ಯತ್ವದ ಗುರಿ ಇತ್ತು. ಇದಕ್ಕೆ ನಿರೀಕ್ಷೆ ಮೀರಿ ದೇಶದ ಜನತೆಯಿಂದ ಸ್ಪಂದನೆ ಲಭಿಸಿದೆ. ನಾವು (ಯಾದಗಿರಿ ಜಿಲ್ಲೆಯಿಂದ) ಹಾಗೂ ಎಲ್ಲೆಡೆಯಿಂದ ಮಾಡಿಕೊಂಡ ಮನವಿಗೆ ಕೇಜ್ರಿವಾಲ್ ಅವರ ನೇತೃತ್ವದ ಕೋರ್ ಕಮಿಟಿಯಲ್ಲಿ ಉಚಿತ ಸದಸ್ಯತ್ವ ನೋಂದಣಿ ಅಭಿಯಾನದ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ವೈಜನಾಥ ತಿಳಿಸಿದರು.
ಜಿಲ್ಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಶೀಘ್ರ ತಾಲ್ಲೂಕು ಮಟ್ಟದಲ್ಲಿ ಪ್ರವಾಸ ಹಮ್ಮಿಕೊಂಡು ಜಿಲ್ಲೆಯಾದ್ಯಂತ ಜನತೆಯ ಬಳಿಗೆ ತೆರಳುವ ಹಾಗೂ ಸ್ವರಾಜ್ಯ  ಕಲ್ಪನೆಯ ಆಡಳಿತವನ್ನು ಜಾರಿಗೆ ತರಲು ಪಕ್ಷ ರೂಪಿಸಿರುವ ನೀತಿ, ಸಿದ್ಧಾಂತಗಳು ಹಾಗೂ ಧ್ಯೇಯೋದ್ದೇಶಗಳನ್ನು ತಿಳಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಹಿರೇಮಠ ತಿಳಿಸಿದರು. ಕೋರ್ ಕಮಿಟಿ ಸದಸ್ಯರಾದ ಸುರೇಶ ದೇಶಪಾಂಡೆ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತಗಳು ಆಮ್ ಆದ್ಮಿ (ಜನಸಾಮಾನ್ಯ)ನ ಪರವಾಗಿರುವುದರಿಂದ ಎಲ್ಲರೂ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿ ಸ್ವರಾಜ್ಯ ಕಲ್ಪನೆಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.