ಸೈಯದ್ ಸೋಫಿ ದರ್ಗಾದಲ್ಲಿ ಉರೂಸ್
ಶಹಾಪುರ: ಅಸದುಲ್ ಅವಲಿಯಾ-ಎ-ದಕ್ಕನ್ ಕರ್ಬಲಾಯೇಸಾನಿ ಹಜರತ್ ಸೈಯದ್ ಶಾ ಮೊಹಮ್ಮದ್ ಸೋಫಿ ಸರಮತ್ ರಹಮತುಲ್ಲಾ ಅಲೈ ನುಸರತಾಬಾದ ಮಹಾತ್ಮರ ಉರೂಸ್ ಫೆ.6ರಿಂದ ಸಗರದಲ್ಲಿ ನಡೆಯಲಿದೆ.
ತಾಲೂಕಿನ ಸಗರ ಗ್ರಾಮದಲ್ಲಿ ಸುಮಾರು 700 ವರ್ಷಗಳ ಹಿಂದೆ ಒಬ್ಬ ಜಾದೂಗಾರ ಇದ್ದ. ಅವನು ಊರಿನ ಜನರಿಗೆ ತನ್ನ ಮಂತ್ರಗಳಿಂದ ಮೋಸಮಾಡುತ್ತಿದ್ದ. ಇದರಿಂದ ಬೇಸತ್ತ ಊರಿನ ಜನರು ದೇವರಲ್ಲಿ ಮೊರೆಹೋದರು. ಅಂದಿನ ಕಾಲದಲ್ಲಿ ದೆಹಲಿಯ ಸಂಸ್ಥಾನಕ್ಕೆ ಒಳಪಡುವ ಒಂದು ರಾಜ್ಯದ ರಾಜರಾಗಿದ್ದ ಸಂತ ಸೋಫಿ ಸರಮತ್ ಅವರು ಈ ಭಾಗದಲ್ಲಿ ಧರ್ಮಪ್ರಚಾರಕ್ಕೆ ಬಂದಿದ್ದಾಗ ಈ ಊರಿನ ಸಮಸ್ಯೆಯನ್ನು ಅರಿತು ತಮ್ಮ ರಾಜ ಪದವಿಯನ್ನು ತ್ಯಜಿಸಿದರು. ಜಾದೂಗಾರನ ವಿರುದ್ಧ ಹೋರಾಡಿ ಸಗರ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಿ ಜನ ನೆಮ್ಮದಿಯಿಂದ ಬಾಳುವ ವಾತಾವರಣ ನಿರ್ಮಿಸಿದರು.
ಸೈಯದ್ ಸೋಫಿ ಸರಮತ್ ಮತ್ತು ಹಜರತ್ ಅಮ್ಮನವರ ಬಾಷಾ ಅವರ ಸಮಾಧಿಯನ್ನು ದೊಡ್ಡ ಸಗರ ಗ್ರಾಮದ ಕೇಂದ್ರ ಭಾಗವಾದ ಚಾವಡಿಯ ಎದುರಿನಲ್ಲಿ ಮಾಡಲಾಯಿತು. ಊರಿಗೆ ಶಾಂತಿ ನೆಲೆಸುವಂತೆ ಮಾಡಿದ ಇವರ ಸವಿನೆನಪಿಗಾಗಿ ಪ್ರತಿ ವರ್ಷ ಸೋಫಿ ಸರಮತ್ ಅವರ ಜಾತ್ರೆಯನ್ನು ಆಚರಿಸಲಾಗುತ್ತದೆ.
ಈ ಜಾತ್ರೆ ಮುಗಿದ 15 ದಿನಗಳಿಗೆ ಹಜರತ್ ಅಮ್ಮನವರ ಬಾಷಾ ಅವರ ಜಾತ್ರೆಯನ್ನು ಆಚರಿಸಲಾಗುತ್ತದೆ. ಈಗಿನ ಪೀಠಾಧಿಪತಿ ಸೈಯದ್ ಶಾ ಅತಾವುಲ್ಲಾ ಹುಸೇನಿ ಸರಮತ್ ಸಜ್ಜಾದಾನಶೀನ (ಶಮಶತ್ ಬರೇಜಾ ಬಾಬಾ) ಸರಮತ್ ಸಗರ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

