ಕಳಸಾರೋಹಣ ಇಂದು
ಜೇವರ್ಗಿ: ತಾಲ್ಲೂಕಿನ ಮುದಬಾಳ (ಬಿ) ಗ್ರಾಮ ದೇವತೆ ದೇವಸ್ಥಾನದ ಕಳಸಾರೋಹಣ ಹಾಗೂ ಸತ್ಸಂಗ ಕಾರ್ಯಕ್ರಮ ಫೆ. 13 ರಿಂದ ಆರಂಭವಾಗಲಿದೆ. ಫೆ. 13ರಿಂದ 17ರವರೆಗೆ ಪ್ರತಿ ರಾತ್ರಿ ಸೊನ್ನದ ಶಿವಾನಂದ ಸ್ವಾಮೀಜಿ ಅವರು ಮಹಾಶಿವಶರಣೆ ಸಜ್ಜಲಗುಡ್ಡದ ಶರಣಮ್ಮನವರ ಜೀವನ ಸಾಧನೆ ಕುರಿತು ಪ್ರವಚನ ನೀಡಲಿದ್ದಾರೆ. ಫೆ.16ರಂದು ರಾತ್ರಿ ಧರ್ಮಸಭೆ ನಡೆಯಲಿದೆ. ಗುಲ್ಬರ್ಗ ಸುಲಫಲ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಈ ಸಭೆಯ ಸಮ್ಮುಖವನ್ನು ಇಜೇರಿ ಅಮಿನೋದೀನ್ ದರ್ಗಾದ ಇಸ್ಮಾಯಿಲ್ ಹುಸೇನಿ ಸಜ್ಜಾದ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಭಾಗವಹಿಸಲಿದ್ದಾರೆ. ಫೆ.18ರಂದು ಬೆಳಗ್ಗೆ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಕಳಸಾರೋಹಣದಲ್ಲಿ ಶಾಸಕರಾದ ಡಾ.ಅಜಯಸಿಂಗ್, ಗುರು ಪಾಟೀಲ್ ಶಿರವಾಳ, ಜಿ.ಪಂ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್, ತಾ.ಪಂ ಸದಸ್ಯ ಹರಿಶ್ಚಂದ್ರ ನಾಯಕ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

