ಗುಲ್ಬರ್ಗಾ

ಶಾಲೆಯಲ್ಲಿ ಸಿಲಿಂಡರ್ ಅವಘಡ: ಬಿಸಿಯೂಟ ಅಧಿಕಾರಿ ಪರಿಶೀಲನೆ

Published On :

ಕೆಂಭಾವಿ: ಪಟ್ಟಣದಲ್ಲಿ ಸರ್ಕಾರಿ ಬಾಲಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದ ಬಿಸಿಯೂಟ ಸಿಲಿಂಡರ್ ಅವಘಡ ಹಿನ್ನೆಲೆಯಲ್ಲಿ ಜಿಲ್ಲಾ ಬಿಸಿಯೂಟ ಅಧಿಕಾರಿ ಡಿ.ಎಮ್. ಹೊಸಮನಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2010ರಿಂದಲೇ ಅಗ್ನಿ ಸುರಕ್ಷಾ ಉಪಕರಣದಲ್ಲಿ ಬೆಂಕಿ ನಂದಿಸುವ ದ್ರವ ತುಂಬದೆ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರುಗಳಿಗೆ ಅವುಗಳನ್ನು ತುಂಬಿಸಿಕೊಂಡು ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯಾವುದೆ ಸಂದರ್ಭದಲ್ಲಿ ಅನಾಹುತವಾದರೆ ಅದಕ್ಕೆ ನೇರವಾಗಿ ಶಾಲೆಯ ಮುಖ್ಯ ಗುರುಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಪ್ರತಿಯೊಂದು ತರಗತಿ ಕೋಣೆಯಲ್ಲಿ ಬೆಂಕಿ ನಂದಿಸುವ ಸುರಕ್ಷಾ ಪರಿಕರಗಳನ್ನು ಇಡಬೇಕು. ಇದಕ್ಕೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದರು.  ಬಿಸಿಯೂಟದ ಕೋಣೆಯಲ್ಲಿ ಯಾವುದೆ ಮಕ್ಕಳನ್ನು ಬಿಡಬಾರದು ಮತ್ತು ಈ ಬಗ್ಗೆ ಅವರಿಗೆ ತರಬೇತಿಯನ್ನೂ ಕೂಡ ಕೊಡಲಾಗುವದು.
ಕೆಂಭಾವಿಯಲ್ಲಿ ಸಂಭವಿಸಿದ ಘಟನೆಗೆ ನೇರವಾಗಿ ಸಂಬಂಧಪಟ್ಟ ಸಿಲಿಂಡರ್ ಕಂಪನಿಯೇ ಕಾರಣ. ಸಂಬಂಧಪಟ್ಟ ಕಂಪನಿಗೆ ನೋಟೀಸ್ ಜಾರಿ ಮಾಡಲು ಮೇಲಧಿಕಾರಿಗಳು ಸೂಚಿಸಿದ್ದಾರೆ ಎಂದು ಹೇಳಿದರು. ತಾಲ್ಲೂಕು ಬಿಸಿಯೂಟ ಅಧಿಕಾರಿಗಳಾದ ಚಂದ್ರಕಾಂತ ಕೊಣ್ಣುರ, ಬಿ.ಆರ್. ಮಾನಸುಣಗಿ, ಸಿಆರ್ಪಿ ಶ್ರೀಶೈಲ ಪಾಸೋಡಿ ಇದ್ದರು.
ವರ್ಷಕ್ಕೊಮ್ಮೆ ಅಗ್ನಿ ಸುರಕ್ಷಾ ಉಪಕರಣ ರಿಫಿಲ್ಲಿಂಗ್ ಮಾಡುವ ನಿಯಮವಿದೆ. ಆದರೆ ಈ ನಿಯಮ ಪಾಲಿಸದಿರುವುದು ಈ ಘಟನೆಯಿಂದ ಬೆಳಕಿಗೆ ಬಂದಿದೆ. ಸರ್ಕಾರ ಉಪಕರಣಗಳನ್ನು ಒದಗಿಸುತ್ತದೆ. ಆದರೆ ಇಲ್ಲಿರುವ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಮತ್ತು ಮೇಲಧಿಕಾರಿಗಳೂ ಕೂಡಾ ಈ ಬಗ್ಗೆ ಗಮನಹರಿಸದಿರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತವೆ ಎಂದು ವಿರುಪಾಕ್ಷಿ ಕರಡಕಲ್ ಆರೋಪಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದೆ ಯಾವ ಶಾಲೆಯಲ್ಲಿಯೂ ಇಂತಹ ಅನಾಹುತವಾಗದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.