ಗುಲ್ಬರ್ಗಾ

ಪಿಎಸ್‌ಐ ಬಂಡೆ ಸಾವಿನ ತನಿಖೆ ಸಿಬಿಐಗೆ ಒಪ್ಪಿಸಿ

Published On :

ಶಹಾಪುರ: ಮಲ್ಲಿಕಾರ್ಜುನ ಬಂಡೆ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಯಾದಗಿರಿ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ಸಂಚಾಲಕ ಸಂಗಮೇಶ ಚನ್ನಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ. ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್‌ರ್ಯಾಲಿ ನಡೆಸಿ, ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಮಾವೇಶಗೊಂಡ ವೇದಿಕೆಯ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಸಿಒಡಿ ತನಿಖೆಯಿಂದ ಸತ್ಯ ಹೊರಬರುವುದು ಅನುಮಾನವಾಗಿದ್ದರಿಂದ ಕೂಡಲೆ ತನಿಖೆಯನ್ನು ಸಿಬಿ.ಐಗೆ ಒಪ್ಪಿಸಬೇಕೆಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ವೀರಶೈವ ಲಿಂಗಾಯತ ವೇದಿಕೆಯ ಪ್ರತಿಭಟನೆಯ ಸಭೆಯಲ್ಲಿ ಮಲಶೆಟ್ಟೆಪ್ಪ ಜೈನಶೆಟ್ಟಿ, ಸಂಗಣ್ಣ ಕುನ್ನೂರ, ವಿಶ್ವ ಸಜ್ಜನಶೆಟ್ಟಿ, ಮಲ್ಲು ಮಾಡಗಿ, ಮಲ್ಲು ಶಿರವಾಳ, ಪ್ರಕಾಶ ಶಿರವಾಳ,ರಮೇಶ ಮಳ್ಳಿ, ನಿಂಗರಾಜ, ಶಿವು ಹೂಗಾರ, ಪ್ರವೀಣ ಕಲಾಲ, ವೀರೇಶ ಮಠಪತಿ, ಚಂದ್ರು ಜಾಲಹಳ್ಳಿ, ಸಂಗು, ಮಂಜು ಕುಂಬಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.