ಹೊರಸಂಪನ್ಮೂಲ ಬೋಧಕರಿಗೆ ಸೂಚನೆ
ಯಾದಗಿರಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ 2004-05ರ ನಂತರನೇಮಕಗೊಂಡ, 2011ರ ಏಪ್ರಿಲ್ ಒಂದರವರೆಗೆ ಕಾರ್ಯನಿರ್ವಹಿಸಿದ ಹೊರಸಂಪನ್ಮೂಲ ಬೋಧಕ ಸಿಬ್ಬಂದಿಗಳಿಗೆ ಉಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಸೇವಾ ಕೃಪಾಂಕವನ್ನು ನೀಡಿ ಆಯ್ಕೆ ಪಟ್ಟಿ ಸಿದ್ಧಪಡಿಸಬೇಕಾಗಿದೆ.
ಏಪ್ರಿಲ್ 1, 2011ರಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರು, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಶಿಕ್ಷಕರು, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಕಂಪ್ಯೂಟರ್ ಮತ್ತು ದೈಹಿಕ ಶಿಕ್ಷಕರು ಈ ಕೆಳಕಂಡ ಸೇವಾ ದಾಖಲೆಗಳನ್ನು ಪ್ರಾಂಶುಪಾಲರುಗಳಿಂದ, ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕ ಸಮಾಜ ಕಲ್ಯಾಣ ಅಧಿಕಾರಿಗಳು, ವಸತಿ ಶಾಲೆಗಳ ಕಾಯಂ ಪ್ರಾಂಶುಪಾಲರ ಕಚೇರಿಗಳಿಂದ ಪಡೆದು ಕೂಡಲೇ ಸಂಬಂಧಿಸಿದ ಪ್ರಾಂಶುಪಾಲರಿಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಲಾಗಿದೆ.
ಅರ್ಜಿಗಳನ್ನು ಪ್ರಾಂಶುಪಾಲರು 03-3-2014ರೊಳಗಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಯಾದಗಿರಿ ರವರಲ್ಲಿ ಸಲ್ಲಿಸಲು ಸೂಚಿಸಿದೆ. ಹೊರಸಂಪನ್ಮೂಲ ಏಜೆನ್ಸಿಗಳ ಮೂಲಕ ನೇಮಕಗೊಂಡ ಬೋಧಕ ಸಿಬ್ಬಂದಿಗಳ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಶಾಲಾ ಹಾಜರಾತಿ ನಕಲು, ಹೊರಸಂಪನ್ಮೂಲ ಏಜೆನ್ಸಿಗಳ ಮೂಲಕ ವೇತನ ಪಾವತಿಸಿದ ಬಗ್ಗೆ ಬಟವಾಡೆ ವಹಿ ಅಥವಾ ಇದಕ್ಕೆ ಸಂಬಂಧಿಸಿದ ಹಿಂಬರಹಗಳ ಅಥವಾ ಬ್ಯಾಂಕ್ ಖಾತೆ ದೃಢೀಕೃತ ತಖ್ತೆಗಳು, ಹೊರಸಂಪನ್ಮೂಲ ಏಜೆನ್ಸಿದಾರರಿಂದ ನೀಡಲಾದ ನೇಮಕಾತಿ ಆದೇಶದ ಪ್ರತಿಗಳು ಮಾಹಿತಿ ಇತ್ಯಾದಿ ಸಲ್ಲಿಸಬೇಕು. ಸೇವೆ ಸಲ್ಲಿಸಿದ್ದಕ್ಕೆ ಇನ್ನಿತರ ಯಾವುದೇ ಪೂರಕ ದಾಖಲೆಗಳನ್ನು ಕೂಡ ಪರಿಶೀಲಿಸಿ ಸಲ್ಲಿಸಬೇಕು ಎಂದು ಜಿ.ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

