ರೈಲು ನಿಲ್ದಾಣ ಬಳಿ ಪೊಲೀಸ್ ಚೌಕಿ ನಿರ್ಮಿಸಲು ಒತ್ತಾಯ
ಗುಲ್ಬರ್ಗ: ಗುಲ್ಬರ್ಗ ರೈಲ್ವೆ ಸ್ಟೇಷನ್ ಹತ್ತಿರ ಪೊಲೀಸ್ ಚೌಕಿ ಕಟ್ಟಡ ನಿರ್ಮಿಸಿ, ಪೊಲೀಸರು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಮಾಡಬೇಕೆಂದು ಪಂಚ ಜಿಲ್ಲೆ ಜನಪರ ಹೋರಾಟ ಸಮಿತಿ ಆಗ್ರಹಿಸಿದೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಸುಮಾರು ವರ್ಷಗಳಿಂದ ರೈಲ್ವೆ ಸ್ಟೇಷನ್ ಮುಂದೆ ಇದ್ದಾಗ ಯಾವುದೇ ಅಹಿತಕರ ಘಟನೆ ನಡೆಯುತ್ತಿರಲಿಲ್ಲ. ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಸರ್ಕಾರಿ ನೌಕರರು ರೈಲ್ವೆ ಸ್ಟೇಷನಿಗೆ ನಿರಾತಂಕವಾಗಿ ಹೋಗುತ್ತಿದ್ದರು. ರಸ್ತೆ ಅಗಲೀಕರಣ ಹಾಗೂ ಕೆಲವೊಂದು ಕಾರಣದಿಂದ ಪೊಲೀಸ್ ಠಾಣೆಯನ್ನು ಒಡೆದು ಹಾಕಿದರು. ಇದರಿಂದ ಸಾರ್ವಜನಿಕರಿಗೆ ಕುಡುಕರ ಹಾವಳಿಯಿಂದ ಇನ್ನಿತರ ಜನರಿಂದ ತುಂಬಾ ತೊಂದರೆಯಾಗುತ್ತಿದೆ.
ಕಾಮಗಾರಿ: ಈಗಾಗಲೇ ಪೊಲೀಸ್ ಠಾಣೆಯ ಸ್ಥಳದಲ್ಲಿ ವ್ಯಾಪಾರಗೋಸ್ಕರ ಹೋಟೆಲ್, ಬಂಡಿಗಳು, ಪ್ರಾರಂಭವಾಗುತ್ತಿದ್ದು, ಈ ಮೊದಲು ಮಹಾನಗರ ಪಾಲಿಕೆ ಅಧಿಕಾರಿಯವರು ಈ ಸ್ಥಳದಲ್ಲಿ ಇಲಾಖೆಗೆ ಎರಡು ಕೋಣೆ ನಿರ್ಮಿಸಿಕೊಡುವುದಾಗಿ ಹೇಳಿ ಕಾಂಪೌಂಡ್, ಬೇಸ್ಮೆಂಟ್ವರೆಗೆ ಮಾಡಿಸಿ ಕಾಮಗಾರಿ ಕೆಲಸ ಅರ್ಧಕ್ಕೆ ನಿಲ್ಲಿಸಲಾಗಿದೆ.
ಕೂಡಲೇ ಪೊಲೀಸ್ ಠಾಣೆಯ ಹಳೆಯ ಜಾಗದಲ್ಲಿ ಶೀಘ್ರದಲ್ಲಿ ಪೊಲೀಸ್ ಚೌಕಿ ಕಟ್ಟಡ ನಿರ್ಮಿಸಿ ಅಲ್ಲಿ ಪೊಲೀಸರು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಮಾಡಲು ನಿರ್ಲಕ್ಷವಹಿಸಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರವಣಕುಮಾರ ಅವರಾದ, ಸಿದ್ರಾಮ ಪೂಜಾರಿ, ರಾಜಶೇಖರ ಆರ್. ಬೋಳೆವಾಡ, ಪೀರಪ್ಪಾ ಚಾಮನೂರು ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

