ಸುರಕ್ಷತೆಗೆ ಜೆಸ್ಕಾಂ ಜತೆ ಜನತೆಯೂ ಕೈಜೋಡಿಸಿ
ಗುಲ್ಬರ್ಗ: ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕು. ಸುರಕ್ಷತೆ ಎಂಬುದು ಕೇವಲ ವಿದ್ಯುತ್ ಪೂರೈಕೆ ಸಂಸ್ಥೆ ಜವಾಬ್ದಾರಿ ಮಾತ್ರವಲ್ಲ. ಅದನ್ನು ಬಳಸುವ ಸಾರ್ವಜನಿಕರದ್ದೂ ಆಗಿದೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪಲ್ಲವಿ ಆಕುರಾತಿ ಹೇಳಿದ್ದಾರೆ. ಸಂಸ್ಥೆಯ ಕೆಲಸದಲ್ಲಿ ಸಾರ್ವಜನಿಕರು ಸಹಕರಿಸಿದಲ್ಲಿ ಅವಘಡ ಮುಕ್ತ ವಿದ್ಯುತ್ ಪೂರೈಕೆ, ಸೇವೆಗಳನ್ನು ನೀಡಲು ಸಾಧ್ಯ ಎಂದು ಹೇಳುವ ಮೂಲಕ ಕಂಪನಿ ಜೊತೆ ಸುರಕ್ಷತಾ ವಲಯ ಗಟ್ಟಿಗೊಳಿಸಲು ಕೈಜೋಡಿಸಲು ಅವರು ಜನತೆಗೆ ಮನವಿ ಮಾಡಿದರು. ವಿದ್ಯುತ್ ಸುರಕ್ಷತೆ ಮಾಸಾಚರಣೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಸಿಬ್ಬಂದಿ ಕೆಲಸದ ವೇಳೆಯಲ್ಲಿ ತೀವ್ರ ಎಚ್ಚರಗಿಂದಿರಬೇಕು. ಸಾರ್ವಜನಿಕರೂ ಸಹ ವಿದ್ಯುತ್ ವೈರಿಂಗ್, ಕಂಬಗಳಲ್ಲಿ ತೊಂದರೆ, ದೋಷ ಕಂಡಲ್ಲಿ ತಕ್ಷಣ ಕಂಪನಿಯ ಗಮನಕ್ಕೆ ತರಬೇಕು. ಅದರಿಂದಲೂ ಅನಾಹುತಗಳನ್ನು ತಪ್ಪಿಸಬಹುದು ಎಂದರು.
ಫೆಬ್ರವರಿ ತಿಂಗಳನ್ನು ಅಪಾಯಕಾರಿ ಪರಿಕರಗಳಲ್ಲಿನ ಲೋಪಗಳನ್ನು ಸರಿಪಡಿಸುವ ಮಾಸವಾಗಿ ಆಚರಿಸಲಾಗುತ್ತಿದೆ. ಇದಲ್ಲದೆ ಪ್ರತಿ ಉಪ ವಿಭಾಗಕ್ಕೂ ಏಣಿ ಸೌಕರ್ಯವಿರುವ ಹಾಗೂ ಗ್ರಾಹಕರ ತುರ್ತು ಕರೆಗಳಿಗೆ ಸ್ಪಂದಿಸುವಂತಹ ವಾಹನ ಸೌಕರ್ಯ ಕಲ್ಪಿಸಲಾಗುತ್ತದೆ. ಆಯ್ದ 21 ಪಟ್ಟಣಗಳಲ್ಲಿ ಹಳೆ ವೈರ್‌ಗಳನ್ನು ಬದಲಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಹಂತಹಂತವಾಗಿ ವಿದ್ಯುತ್ ಸುರಕ್ಷತೆ ವಿಚಾರದಲ್ಲಿ ಹೆಚ್ಚಿನ ಕೆಲಸಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಪಲ್ಲವಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

