ಗುಲ್ಬರ್ಗಾ

ಯುವಜನತೆ ಸಮಾಜ ಪರಿವರ್ತನೆಯ ಹರಿಕಾರರಾಗಲಿ: ಡಾ. ಉಷಾ ಶರ್ಮಾ

Published On :

ಶಹಾಪುರ: ಸದಾ ಶೈಕ್ಷಣಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತ ಒತ್ತಡದ ಮನಸ್ಸಿನಲ್ಲಿ ದಿನ ದೂಡುತ್ತಿರುವ ಇಂದಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಪ್ರತಿಭೆ ಹೊರಹಾಕಿ, ದಣಿದ ಮನಸ್ಸಿಗೆ ಕೊಂಚ ಉಲ್ಲಾಸ ವಿನೋದವನ್ನು ನೀಡಬೇಕೆಂದು ಸಮೂದಾಯ ಮಹಿಳಾ ಮಹಾವಿದ್ಯಾಲಯದ ನಿರ್ದೇಶಕಿ ಡಾ. ಉಷಾ ಶರ್ಮಾ ಪಾಟೀಲ ಅಭಿಪ್ರಾಯಪಟ್ಟರು.
  ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ 2013-14ರ ಸಾಲಿನ 5 ಅಂತರ ಮಹಾವಿದ್ಯಾಲಯ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಜಾತಿ ಧರ್ಮಗಳ ನಡುವಿನ ಗೋಡೆಯನ್ನು ಕೆಡವಿ ನವ ಸಮಾಜದ ಕನಸನ್ನು ಸಾಕಾರಗೊಳಿಸುವಲ್ಲಿ ಯುವ ಜನತೆ ಕಾರ್ಯಪ್ರವೃತ್ತರಾಗಬೇಕು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಸೂಸಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದು ಪುರಸ್ಕಾರದೊಂದಿಗೆ ಪ್ರತಿಭೆ ಸಾಕ್ಷಾತ್ಕಾರಗೊಳಿಸಬೇಕು. ನಾನಾ ಮೂಲೆಯ ವಿದ್ಯಾರ್ಥಿ ಯುವ ಪ್ರತಿಭೆಗಳ ಅನಾವರಣ, ಸಂಸ್ಕೃತಿಯ ಪರಿಚಯದ ಜತೆ ಪ್ರದರ್ಶನಕ್ಕೆ ಯುವಜನೋತ್ಸವ ವೇದಿಕೆಯಾಗುತ್ತದೆ ಎಂದರು.
ಪಾಶ್ಚಿಮಾತ್ಯ ಸಂಸ್ಕೃತಿಗೆ ಕಳವಳ: ನೌಕರಿಗಾಗಿ ಶಿಕ್ಷಣ ಪಡೆಯುವುದಲ್ಲ ಬದಲಾಗಿ ಬದುಕಿನಲ್ಲಿ ಸಾಮರಸ್ಯದಿಂದ ಜೀವನ ನಡೆಸಿ ಸಮಾಜಕ್ಕೆ ಒಳ್ಳೆಯ ವಿಚಾರ ನೀಡುವಂತವರಾಗಬೇಕು. ಇತ್ತೀಚಿಗೆ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವದು ವಿಪರ್ಯಾಸ ಎಂದು ಕಳವಳಪಟ್ಟರು.
  ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ನಾನಾ ಕಲೆಯ ಸ್ಪರ್ಧೆ ಏರ್ಪಡಿಸಿದ್ದರು. ದೇಶಭಕ್ತಿ ಗೀತೆಗಳು ನಾನಾ ವಿದ್ಯಾರ್ಥಿಗಳು ಹಾಡಿದರು. ವೇದಿಕೆಯ ಮೇಲೆ ರಾಯಚೂರ ಕೃಷಿ ವಿದ್ಯಾಲಯದ ಡೀನ್ ಡಾ.ಎ.ನಾಗಣ್ಣಗೌಡ. ತಾಂತ್ರಿಕ ವಿಭಾಗದ ಡಾ ಬಾಲಕೃಷ್ಣನ್, ಗುಲ್ಬರ್ಗ ಕೃಷಿ ವಿದ್ಯಾಲಯದ ಡಾ.ಬಿ.ಟಿ. ಪೂಜಾರ, ಡಾ. ನಾಯಕ, ಡಾ. ಚಿತ್ತಾಪುರ ಉಪಸ್ಥಿತರಿದ್ದರು.
  ಡಾ. ಶಿವಶಂಕರ, ಡಾ. ಬಿ.ಎಂ ಚಂದರಗಿ, ಡಾ. ಕಚನೂರ. ಡಾ. ಸುಮಾ ಇತರರಿದ್ದರು. ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೀಗುಡಿ ಕೃಷಿ ವಿದ್ಯಾಲಯದ ಡಾ.ಆರ್.ಎಸ್. ಗಿರಡ್ಡಿ ಸ್ವಾಗತಿಸಿದರು. ಡಾ. ಪಾಟೀಲ ನಿರೂಪಿಸಿ ಡಾ. ಪಾಟೀಲ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.