ಗುಲ್ಬರ್ಗಾ

ಖೋ ಖೋ, ಕಬಡ್ಡಿ ಪಂದ್ಯಾಟ: ಅಪ್ಪಾ ಶಾಲೆ ಮಕ್ಕಳ ಗೆಲವು

Published On :

ಗುಲ್ಬರ್ಗ: ಶಕುಂತಲಾ ಶಾಲೆ ಹುಮನಾಬಾದ್, ಹೈ-ಕ ನವೋದಯ ಸ್ಕೂಲ್ ಕಾಂಪ್ಲೆಕ್ಸ್ ಸಂಯುಕ್ತಾಶ್ರಯದಲ್ಲಿ ನಡೆದ ಸಿಬಿಎಸ್‌ಇ ಅಂತರ ಶಾಲೆ ಕಬಡ್ಡಿ- ಖೋ ಖೋ ಪಂದ್ಯಾಟದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಪಬ್ಲಿಕ್ ಸ್ಕೂಲ್‌ನ ಮಕ್ಕಳು ಎರಡೂ ಆಟಗಳಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಕಬಡ್ಡಿ ತಂಡದ ಶಿವಕುಮಾರ, ಸಂಗನಗೌಡ, ರಾಕೇಶ, ಮಲ್ಲಾರೆಡ್ಡಿ, ದೇವರಾಜ, ಚನ್ನಮಲ್ಲಯ್ಯ, ಹರ್ಷಾ, ವರುಣ, ಫೈಜಲ್, ಶ್ರೀಧರ, ನಕೀಬ್, ರಾಹುಲ್ ಉತ್ತಮ ಪ್ರದರ್ಶನ ನೀಡಿ ಬಹುಮಾನ ತಮ್ಮದಾಗಿಸಿಕೊಂಡರು. ಖೋ ಖೋ ತಂಡದ ಪ್ರಶಾಂತ್, ವಿಶಾಲ, ಶಿವಪ್ರಸಾದ, ಬಸವರಾಜ, ಶಾಕೀರ, ವಿಶಾಲ ಆರ್.ಎಸ್., ಸಚಿನ್, ಪ್ರವೀಣ, ಮಹಾದೇವ, ಜಯ್, ಅಮೋಘ ಹಾಗೂ ಹರೀಶ ಇವರೂ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಸಾಧನೆಗೆ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಪ್ರಾಚಾರ್ಯ ದೇವರಕಲ್ ಅಭಿನಂದಿಸಿದ್ದಾರೆ.



ವಕೀಲರ ಸಂಘದಿಂದ ಬೈಕ್, ಕಾರ್ ರ್ಯಾಲಿ


ಗುಲ್ಬರ್ಗ: ಕೆಎಟಿ ಗುಲ್ಬರ್ಗದಲ್ಲಿ ಸ್ಥಾಪಿಸಬೇಕು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಗುಲ್ಬರ್ಗ ಪೀಠದ ವ್ಯಾಪ್ತಿಗೆ ಸೇರಿಸುವಂತೆ ಆಗ್ರಹಿಸಿ ಕಲಾಪ ಬಹಿಷ್ಕಾರ ಮಾಡಿ ಹೋರಾಟ ನಡೆಸಿದ್ದ ಗುಲ್ಬರ್ಗ ವಕೀಲರು ತಮ್ಮ ಕಾರ್, ಬೈಕ್ ವಾಹನಗಳಲ್ಲಿ ರಸ್ತೆಗಿಳಿದು ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ರಮೇಶ ದೊಡ್ಮನಿ, ಜಂಟಿ ಕಾರ್ಯದರ್ಶಿ ಪಿ.ಎನ್. ಕಪನೂರ್, ಎಸ್.ಎಸ್. ಪಡಸೆಟ್ಟಿ, ನ್ಯಾಯವಾದಿಗಳಾದ ಜಿ.ಎಸ್. ಬಿರಾದಾರ, ಬಾಬೂರಾವ ಮಂಗಾಣೆ, ಸುಭಾಷ ಬಾಣಿ, ಹೈಕೋರ್ಟ್ ಪೀಠದ ನ್ಯಾಯವಾದಿ ಸಂಘದ ಬಸವರಾಜ ಜಾಕಾ, ಹರ್ಷವರ್ಧನ, ಅಶೋಕ ಮೂಲಗೆ, ದೇವನಾಥ, ಗುರುರಾಜ, ಶೈಲೇಶ ಶ್ರೀನಿವಾಸ ಅಂಕೋಲೆ, ವಿಶ್ವರಾಧ್ಯ ಇಜೇರಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.