ಸಾಧಕರಿಗೆ ಕುಶಾಗ್ರಮತಿ ಖರ್ಗೆ ಪುರಸ್ಕಾರ ಪ್ರದಾನ
ಗುಲ್ಬರ್ಗ: ಕಲಾನಿಕೇತನ ಕಲಾ ವಿದ್ಯಾಲಯದಲ್ಲಿ ಖರ್ಗೆ ಅಭಿಮಾನಿಗಳ ಸಂಘ ಏರ್ಪಡಿಸಿದ್ದ ಖರ್ಗೆ ಅವರ 72ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿನ 11 ಸಾಧಕರಿಗೆ ಕುಶಾಗ್ರಮತಿ ಖರ್ಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ರೈಲ್ವೆ ಇಲಾಖೆಯ ರಜನಿಕಾಂತ್, ಪತ್ರಿಕೋದ್ಯಮಿ ವೀರೇಶ ಚಿನಗುಡಿ, ಪತ್ರಿಕಾ ಛಾಯಾಗ್ರಾಹಕ ಮಹ್ಮದ್ ಅಮ್ಜದ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಶರಣೇಂದ್ರ ಪಾಗಾ, ಸಮಾಜ ಸೇವಕಿ ರಾಜಶ್ರೀ ದೇಶಮುಖ, ಕವಿ ವಿಠ್ಠಲ್ ಚಾಂಬಾಳ, ಹೋರಾಟಗಾರ ಸೋಮನಾಥ ಕಟ್ಟಿಮನಿ, ಸಚಿನ್ ಫರತಾಬಾದ್ ಹಾಗೂ ಲಿಂಗಣ್ಣ ಹೆರೂರ್ ಇವರಿಗೆ ಸುಲಫಲ ಶ್ರೀಗಳು, ಡಾ. ಚೆನ್ನಾರೆಡ್ಡಿ ಪಾಟೀಲ್, ಖ್ಯಾತ ಕಲಾವಿದ ವಿ.ಜಿ. ಅಂದಾನಿ ಸೇರಿದಂತೆ ಹಿರಿಯರು ಪುರಸ್ಕಾರ ನೀಡಿ ಗೌರವಿಸಿದರು.
ಪುರಸ್ಕಾರ ಪಡೆದವರ ಪರವಾಗಿ ಮಾತನಾಡಿದ ಡಾ. ಶರಣೇಂದ್ರ ಪಾಗಾ, ಸದಾಕಾಲ ತಮ್ಮಷ್ಟಕ್ಕೆ ತಾವು ಕೆಲಸದಲ್ಲಿರುವವರಿಗೆ ಈ ಪುರಸ್ಕಾರ ಅಚ್ಚರಿ ತಂದಿದೆ. ಅಭಿಮಾನಿ ಬಳಗದ ಕಾರ್ಯಕರ್ತರೇ ಬಂದು ನಿಮ್ಮ ಕೆಲಸ ಮೆಚ್ಚಿದ್ದೇವೆ. ಪುರಸ್ಕಾರ ನೀಡಿ ಗೌರವಿಸುತ್ತಿದ್ದೇವೆಂದು ಎಲ್ಲ 11 ಸಾಧಕರಿಗೆ ಹೇಳಿದಾಗ ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಎಂದರು. ಇದೇ ವೇಳೆ ವಿವೇಕಾನಂದ ಶಾಲೆಯ ಮಕ್ಕಳಿಗೆ ಸಸಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಖರ್ಗೆ ಜನ್ಮದಿನ ನಿಮಿತ್ತ ವನಮಹೋತ್ಸವ ಸಹ ಆಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

