ಗುಲ್ಬರ್ಗಾ

ನದಿ ತೀರದ ಗ್ರಾಮಸ್ಥರಿಗೆ ಜೈನ್ ಎಚ್ಚರಿಕೆ!

Published On :

ಶಹಾಪುರ: ತಾಲೂಕಿನ ಮರಕಲ್- ಕೊಳ್ಳೂರ ಬಳಿಯ ಕೃಷ್ಣಾ ನದಿತೀರಕ್ಕೆ ಬಸವಸಾಗರ ಅಣೆಕಟ್ಟಿನಿಂದ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಧಿಕಾರಿ ಮನೋಜಕುಮಾರ ಜೈನ್ ಭೇಟಿ ನೀಡಿ ಪರಿಶೀಲಿಸಿದರು. ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಮರಕಲ್ ಕೊಳ್ಳೂರ, ಟೊಣ್ಣೂರ, ಗೌಡೂರ, ಯಕ್ಷಂತಿ, ಹೈಯಾಳ ಮುಂತಾದ ಗ್ರಾಮಗಳ ನದಿತೀರದ ಜನರಿಗೆ ಹಾಗೂ ಜಾನುವಾರುಗಳಿಗೆ ತೊಂದರೆಯಾಗಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆಗೆ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ವಂಶಿಕೃಷ್ಣ ಅವರೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ಡಾ. ರಮೇಶ ಬಾಬು ಮುನ್ನೆಚ್ಚರಿಯ ಕ್ರಮಗಳಾದ ನದಿತೀರದ ಗ್ರಾಮಗಳಲ್ಲಿ ಡಂಗೂರ ಸಾರಬೇಕು. ಮಹಿಳೆಯರು ನದಿತೀರಕ್ಕೆ ಬಟ್ಟೆ ತೊಳೆಯಲು ಹೋಗಕೂಡದು. ಜಾನುವಾರುಗಳನ್ನು ನದಿಯ ಕಡೆಗೆ ಬಿಡಬಾರದು. ಮಕ್ಕಳು ಹಾಗೂ ನಾಗರಿಕರು ನದಿಯ ಕಡೆಗೆ ಸುಳಿಯದಂತೆ ಗ್ರಾಮಗಳಲ್ಲಿ ಜನರು ಗಸ್ತು ತಿರುಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ತಹಸೀಲ್ದಾರ್ ಡಾ. ರಮೇಶ ಬಾಬು, ಸಿಪಿಐ ಜೆ.ಎಸ್. ನ್ಯಾಮೇಗೌಡ, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಚಿಗಡ್ಡಿಗೆ ಡಿಸಿ ಭೇಟಿ
ಸುರಪುರ: ನಾರಾಯಣಪುರ ಜಲಾಶಯದಿಂದ 1 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗಿದ್ದು, ಕೃಷ್ಣಾ ನದಿ ತೀರದ ಬೆಂಚಿಗಡ್ಡಿಗೆ ಜಿಲ್ಲಾಧಿಕಾರಿ ಮನೋಜಕುಮಾರ್ ಜೈನ್ ಬುಧವಾರ ಭೇಟಿ ನೀಡಿ, ತಹಸೀಲ್ದಾರ್‌ರೊಂದಿಗೆ ಚರ್ಚಿಸಿದರು. ನೀಲಕಂಠರಾಯನ ಗಡ್ಡಿಯ ಸುತ್ತಲೂ ನೀರಿನ ಪ್ರಮಾಣ ಹೆಚ್ಚಾಗಿದ್ದು, ಗಡ್ಡಿಯಲ್ಲಿ ವಾಸವಾಗಿರುವ ಜನರ ಸಂಪರ್ಕ ಕಡಿತಗೊಂಡಿದ್ದು, ಅವರು ತಮ್ಮಗೆ ಬೇಕಾದ ದಿನ ನಿತ್ಯದ ಸಾಮಗ್ರಿಗಳನ್ನು ತರಲು ಕಕ್ಕೇರಾ ಗ್ರಾಮಕ್ಕೆ ಬರಬೇಕು. ಆದರೆ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಅವರಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ 2 ಬೋಟ್‌ಗಳನ್ನು ಒದಗಿಸಲಾಗಿದೆ ಎಂದು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು. ಈಗಾಗಲೇ ಲಿಂಗದಳ್ಳಿ ಸೇರಿದಂತೆ ಕೆಲ ಗ್ರಾಮಗಳ ನಾಗರಿಕರಿಗೆ ನದಿ ತೀರ ಕಡೆಗೆ ಹೋಗದಂತೆ ಹಾಗೂ ಜಾನುವಾರು ಬಿಡದಂತೆ ಎಚ್ಚರಿಕೆ ನೀಡಲಾಗಿದೆ. ನೀಲಕಂಠರಾಯನ ಗಡ್ಡಿಯ ಜನತೆಗೆ ಆಹಾರ ಸಾಮಗ್ರಿಗಳನ್ನು ಮತ್ತು ಸೀಮೆಎಣ್ಣೆ ಕೊರತೆಯಾದಲ್ಲಿ ತಾಲೂಕು ಆಡಳಿತದ ವತಿಯಿಂದ ಪೂರೈಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.