ಗುಲ್ಬರ್ಗಾ

ವಿದ್ಯುತ್ ಸ್ಪರ್ಶ: ಯುವಕ ಸಾವು

Published On :

ಕ.ಪ್ರ. ವಾರ್ತೆ ್ಣ ಚಿತ್ತಾಪುರ ್ಣ ಜೂ.3
ತಾಲೂಕಿನ ಸಾತನೂರ ಗ್ರಾಮದ ಕಿರು ನೀರು ಸರಬರಾಜು ಘಟಕಕ್ಕೆ ಸಂಪರ್ಕ ಕಲ್ಪಿಸುವ ಬೋರ್ಡ್‌ನಲ್ಲಿನ ವಿದ್ಯುತ್ ಸ್ಪರ್ಶದಿಂದ ಯುವಕ ಶಿವರಾಜ ಭೀಮಣ್ಣ ಹಲಗಿ(18) ಮಂಗಳವಾರ ಬೆಳಗ್ಗೆ 8.30ಕ್ಕೆ ಮೃತಪಟ್ಟಿದ್ದಾನೆ.
ಮೃತ ಯುವಕ ಬೆಳಗ್ಗೆ ನೀರು ಸರಬರಾಜು ಮಾಡುವ ಯಂತ್ರ ಪ್ರಾರಂಭಿಸಲು ಹೋಗಿದ್ದಾನೆ. ಆ ಯಂತ್ರದಲ್ಲಿ ವಿದ್ಯುತ್ ಸಂಚಾರವಾಗಿದೆ. ಕೈಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇಲ್ಲಿಯ ಗ್ರಾಪಂನ ನೀರು ಸರಬರಾಜು ಮಾಡುವ ಯಂತ್ರ ಯಾವಾಗಲೂ ತೆರೆದಿರುತ್ತದೆ. ಅದು ಸುರಕ್ಷಿತವಿಲ್ಲದ ಕಾರಣ ಯಾರು ಬೇಕಾದರೂ ಹೋಗಿ ಯಂತ್ರ ಪ್ರಾರಂಭ ಮಾಡಿ ನೀರು ಸರಬರಾಜು ಮಾಡಿಕೊಳ್ಳುತ್ತಾರೆ.
ಅಸುರಕ್ಷಿತ: ಅದರಂತೆ ಮೃತ ವ್ಯಕ್ತಿ ಶಿವರಾಜ ಮಂಗಳವಾರ ನೀರು ಸರಬರಾಜು ಮಾಡುವ ಯಂತ್ರ ಪ್ರಾರಂಭ ಮಾಡಲು ಹೋದಾಗ ಸೋಮವಾರ ರಾತ್ರಿ ಸುರಿದ ಮಳೆಯಿಂದ ಯಂತ್ರದ ತುಂಬೆಲ್ಲ ವಿದ್ಯುತ್ ಸಂಚಾರವಾಗಿ ಮೃತ ಪಟ್ಟಿದ್ದಾನೆಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಪಂ ನಿರ್ಲಕ್ಷ್ಯ ಮತ್ತು ಸಿಬ್ಬಂದಿ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ. ಇದರಿಂದ ಹರಿಜನ ವಾಡಕ್ಕೆ ನೀರು ಸರರಾಜು ಮಾಡಲು ಅಲ್ಲಿಯ ಜನರು ದಿನನಿತ್ಯ ಯಂತ್ರ ಪ್ರಾರಂಭ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಸಿಬ್ಬಂದಿಯೂ ಬರುತ್ತಿಲ್ಲ: ಇಲ್ಲಿಯ ಗ್ರಾಪಂನವರು ನೀರು ಸರಬರಾಜು ಮಾಡುವ ಯಂತ್ರಕ್ಕೆ ಸುರಕ್ಷತೆ ಒದಗಿಸಿಲ್ಲ. ಹಾಗೂ ದಿನಾಲು ಹರಿಜನವಾಡಕ್ಕೆ ನೀರು ಸರರಾಜು ಮಾಡಲು ಯಾವ ಸಿಬ್ಬಂದಿಯೂ ಬರುತ್ತಿಲ್ಲ ಎಂದು ಹರಿಜನವಾಡ ಜನರ ಆರೋಪವಾಗಿದೆ. ಗ್ರಾಪಂ ನಿರ್ಲಕ್ಷ್ಯದಿಂದ ಯುವಕನೊಬ್ಬ ಪ್ರಾಣ ಕಳೆದುಕೊಳ್ಳಬೇಕಾಗಿದೆ ಎಂದು ಗ್ರಾಪಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಯುವಕ ಬೆಳಗ್ಗೆ ಮೃತಪಟ್ಟರೂ ಸಂಬಂಧಿಸಿದ ಪಿಡಿಒ ಹಾಗೂ ಸಿಬ್ಬಂದಿ ಮಧ್ಯಾಹ್ನದವರೆಗೂ ಸ್ಥಳಕ್ಕೆ ಅಗಮಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.