ಗುಲ್ಬರ್ಗಾ

ಕಾರ್ಮಿಕರ ಬಾಕಿ ವೇತನ ಪಾವತಿಸಿ

Published On :

ಗುಲ್ಬರ್ಗ; ಪೌರ ಕಾರ್ಮಿಕರ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಪೌರ ಕಾರ್ಮಿಕ ಸಂಘ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದೆ. ಜೂನ್ 2007ರಿಂದ ಮೇ 2010ರ ವರೆಗೆ ನೀಡಬೇಕಾದ ಪೌರ ಕಾರ್ಮಿಕರ ಬಾಕಿ ವೇತನ ವೇತನ ಪಾವತಿಗಾಗಿ 2009 ಮತ್ತು 2010ರಲ್ಲಿ ಸತತವಾಗಿ ಶಾಂತಿಯುತ ಉಪವಾಸ ಸತ್ಯಾಗ್ರಹ ಮಾಡಲಾಯಿತು.
ಅವುಗಳ ಪರಿಣಾಮವಾಗಿ ಪೌರ ಕಾರ್ಮಿಕರ ವಿರುದ್ಧ ಸುಮಾರು 40  ಕ್ರಿಮಿನಲ್ ಮೊಕದ್ದಮೆಗಳು ಹೂಡಿ ಪೌರ ಕಾರ್ಮಿಕರನ್ನು ಜೈಲಿಗೆ ಅಟ್ಟಿಸಲಾಯಿತು. ಅದರಲ್ಲಿ ಸುಮಾರು 200 ಜನ ಮಹಿಳಾ ಪೌರ ಕಾರ್ಮಿಕರನ್ನು ರಾಯಚೂರ್, ಬೆಳಗಾವಿ, ಬಳ್ಳಾರಿ ಮತ್ತು ಧಾರವಾಡ ಕಾರಾಗೃಹಗಳಲ್ಲಿ ಇಡಲಾಯಿತು. ಪೌರ ಕಾರ್ಮಿಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರೂ ಕೆಲಸ ಮಾಡಿದ ಸಂಬಳ ಕೇಳಿದರೆ ಕಾರಾಗೃಹಕ್ಕೆ ಅಟ್ಟಲಾಯಿತು. ಈಗಲೂ ವ್ಯಾಜ್ಯಗಳು ನ್ಯಾಯಾಲಯದಲ್ಲಿವೆ.  ಮಹಾನಗರ ಪಾಲಿಕೆ ಮತ್ತು ಸರ್ಕಾರದ ಈ ಧೋರಣೆಯಿಂದ ಬೇಸತ್ತು ಕಾನೂನಿನ ಪ್ರಕಾರ ವೇತನ ಪಾವತಿ ಕಾಯ್ದೆಯಡಿ ಬಾಕಿ ವೇತನ ಜೂನ್ 2007ರಿಂದ ಮೇ 2010ರ ವರೆಗೆ 35 ತಿಂಗಳ ವೇತನ ಪಡೆಯಲಾಗಿತ್ತು. ಅದರಂತೆ ಕೂಡಲೇ ಬಾಕಿ ವೇತನವನ್ನು ಜುಲೈ 2010ರಿಂದ ಮೇ 2014  ರ ವರೆಗೆ ಪಾವತಿಸುವಂತೆ ಸಂಘ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.