ಗುಲ್ಬರ್ಗಾ

ಬಡಾವಣೆಯಲ್ಲಿ ಬಹಿರ್ದೆಸೆಗೆ ಅಡ್ಡಿ; ಮಹಿಳೆಯರ ಆಕ್ರೋಶ

Published On :

ಆಳಂದ: ಪಟ್ಟಣದ ಹತ್ತ್ಯಾನಗಲ್ಲಿ, ಡೋಹರ್‌ಗಲ್ಲಿ, ಕಪ್ಪರಬೌಡಿ ಅಲೈಕಟ್ಟೆ ಬಡಾವಣೆಯಲ್ಲಿನ ಮಹಿಳೆಯರಿಗೆ ಬಹಿರ್ದೆಸೆಗೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಬಾರಿ ಸಂಖ್ಯೆಯಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ರವಿವಾರ ನಡೆದಿದೆ.
ಹಲವು ವರ್ಷಗಳಿಂದ ಬಹಿರ್ದೆಸೆ ಕುಳಿತುಕೊಳ್ಳಲಾಗಿದೆ. ಹಠಾತಾಗಿ ಸ್ಥಳದಲ್ಲಿ ಬರಲು ಅಡ್ಡಿಪಡಿಸಿದ್ದಾರೆ.ಪುರಸಭೆಯವರು ಬಹಿರ್ದೆಸೆಗೆ ಸ್ಥಳಗುರುತಿಸಿಕೊಡಬೇಕು ಎಂದು ಆಗ್ರಹಿಸಿದರು.
ಹಲವು ವರ್ಷ ಕಳೆಯುತ್ತಾ ಬಂದರು ಸಹಿತ ಹಿಂದುಳಿದ ಈ ಬಡಾವಣೆಗಳಲ್ಲಿ ಮಹಿಳಾ ಶೌಚಾಲಯ ನಿರ್ಮಿಸಿಲ್ಲ ಎಂದು ಟೀಕಿಸಿದರು.ಹಲವು ವರ್ಷಗಳಿಂದ ಮಹಿಳೆಯರು ಬಹಿರ್ದೆಸೆ ಕುಳಿತುಕೊಳ್ಳತ್ತಾ ಬರಲಾಗಿದ್ದು, ಹಠಾತಾಗಿ ಅಡ್ಡಿಪಡಿಸಿರುವುದು ಮಹಿಳೆಯರು ಎಲ್ಲಿ ಬಹಿರ್ದೆಸೆ ಮಾಡಬೇಕು ಎಂದು ಬಡಾವಣೆಯ ಮಹಿಳೆಯರು ಆಕ್ರೋಶವ್ಯಕ್ತಪಡಿಸಿದರು.
ಸಂಬಂಧಿಸಿದ ಜನ ಪ್ರತಿನಿಧಿಗಳು, ಪುರಸಭೆ ಆಡಳಿತ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಮಹಿಳೆಯರ ಆಕ್ರೋಶಕ್ಕೆ ನೂರಾರು ಯುವಕರು ಧ್ವನಿಗೂಡಿಸಿ ಬಹಿರಂಗವಾಗಿ ಎಚ್ಚರಿಕೆ ನೀಡಿದರು. ನಂತರ ಪೊಲೀಸ್ ಠಾಣೆಗೆ ತೆರಳಿದ ಮಹಿಳೆಯರು ಮತ್ತು ಯುವಕರು ದೂರು ನೀಡಿ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ದೂರು ಸ್ವೀಕರಿಸಿದ ಪಿಎಸ್‌ಐ ಮಹಾದೇವ ಪಂಚಮುಖಿ ಅವರು ಈ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕ್ಕೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಹಿಂದುರುಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.