ಪಾದಯಾತ್ರೆಗೆ ಉತ್ತಮ ಸ್ಪಂದನೆ
ಗುಲ್ಬರ್ಗ: ವಿಶ್ವ ಮಧ್ವ ಮಹಾ ಪರಿಷತ್ ಗುಲ್ಬರ್ಗ ಘಟಕದಿಂದ ಹಮ್ಮಿಕೊಂಡ ಹನುಮಂತ ದೇವರ ಪುಣ್ಯತಾಣ ಚಿತ್ತಾಪುರ ತಾಲೂಕಿನ ಕೊಂಚೂರು ಪಾದಯಾತ್ರೆಗೆ ಆಸ್ತಿಕ ಭಕ್ತವೃಂದದಿಂದ ಉತ್ತಮ ಸ್ಪಂದನೆ ದೊರಕಿತು. ವಾಡಿಯ ಲಕ್ಷ್ಮೀ ನಾರಾಯಣ ಮಂದಿರದಿಂದ ಶುರುವಾದ ಪಾದಯಾತ್ರೆಯಲ್ಲಿ ರಘುನಾಥ ತೀರ್ಥ ಅಧ್ಯಯನಾಶ್ರಮದ ಮುಖ್ಯಸ್ಥ ಪಂ. ರಾಮಾಚಾರ್ಯ ಅವಧಾನಿ, ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ವಿಮಮ ಪರಿಷತ್ ಜಿಲ್ಲಾಧ್ಯಕ್ಷ ಅರವಿಂದ ನವಲಿ ಇದ್ದರು. 200ಕ್ಕೂ ಹೆಚ್ಚು ಭಕ್ತರು ಬಾಗವಹಿಸಿದ್ದ ಪಾದಯಾತ್ರೆ ಬೆಳಗ್ಗೆ ಆರಂಭವಾಗಿ ಮಧ್ಯಾಹ್ನದ ಹೊತ್ತಿಗೆ ಕೊಂಚೂರು ತಲುಪಿತು. ಪಂ. ಗುರುಮಧ್ವಾಚಾರ್ಯ ನವಲಿ, ಭೀಮಸೇನಾಚಾಯಂ ಜೋಷಿ, ವಿನೋದಾಚಾರ್ಯ ಗಲಗಲಿ, ಪ್ರಸನ್ನಾಚಾರ್ಯ ಜೋಷಿ, ಗಿರೀಶಾಚಾರ್ಯ ಅವಧಾನಿ, ಗಿರಿಯಾಚಾರ್ಯ ಕೊಪ್ಪರ, ವಿಷ್ಣುದಾಸಾಚಾರ್ಯ ಖಜೂರಿ ನೇತೃತ್ವದಲ್ಲಿ ಪವಮಾನ ಹೋಮ ನಡೆಯಿತು. ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸುಧಾ ಪಂಡಿತರು ಭಾಗವಹಿಸಿದ್ದು, ಶೋಭೆ ತಂದಿತು. ಕಲ್ಯಾಣರಾವ್ ಭಕ್ಷಿ, ಶ್ರೀಹರಿ ಆಚಾರ್ಯ, ಆನಂದ ತೀರ್ಥಾಚಾರ್ಯ, ಹಣಮಂತಾಚಾರ್ಯ ಕಾಳಗಿ, ಅನಂತ ಕಾಮೇಗಾಂವ್, ಚಂದ್ರಕಾಂತ ಜೋಷಿ, ಕುಲ್ಕರ್ಣಿ, ಮೇಲಗಿರಿ ಆಚಾರ್ಯ, ವಾಸುದೇವಾಚಾರ್ಯ ಶಾಬಾದ್, ಪುರುಷೋತ್ತಮ ಜೋಶಿ, ರವಿ ಲಾತೂರ ಪಾದಯಾತ್ರೆಯಲ್ಲಿದ್ದರು. ಸತ್ಯಾತ್ಮ ಸೇನೆ, ಸತ್ಯಾನಂದ ಭಜನಾ ಮಂಡಳಿ, ಪಾಂಡುರಂಗ ಯುವಕ ಸಂಘ, ಗಾಯತ್ರಿ ಯುವ ಸಂಘದ ಯುವ ಬಳಗದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

