ಗುಲ್ಬರ್ಗಾ

ನ್ಯಾ. ಸದಾಶಿವ ಆಯೋಗದ ವರದಿ ಬಹಿರಂಗಪಡಿಸಲು ದಸಂಸ ಒತ್ತಾಯ

Published On :

ಯಾದಗಿರಿ: ನ್ಯಾಯಮೂರ್ತಿ ಏ.ಕೆ. ಸದಾಶಿವ ಆಯೋಗದ ವರದಿಯನ್ನು ಕೂಡಲೇ ಬಹಿರಂಗ ಚರ್ಚೆಗೆ ಒತ್ತಾಯಿಸಿ ಮಾದಿಗ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
  ಶಹಾಪುರದ ತಾಲೂಕಿನ ಕನ್ಯಾಕೋಳುರು ಗ್ರಾಮದ ದೇವೆಂದ್ರಪ್ಪ ದಳಪತಿ ಅವರನ್ನು ಕೊಲೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಗ್ಗಾನಹಳ್ಳಿ ದಲಿತರ ಕುಟುಂಬಕ್ಕೆ ಬಹಿಷ್ಕಾರ ಹಾಕಿದವರಿಗೆ ಜೀವಾವಧಿ ಶಿಕ್ಷೆ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಗೋನಾಳ ಭೀಮಪ್ಪ ಇವರ ವಿರುದ್ಧ ಸುಳ್ಳು ಆರೋಪ ಮಾಡಿದ ಲೋಕಸತ್ತಾ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಬೇಕು, ಧಾರವಾಡ ವಿಶ್ವವಿದ್ಯಾಲಯ ಉಪಕುಲಪತಿಗಳ ವಿರುದ್ಧ ಕ್ರಮ, ವಿವಿಧ ಇಲಾಖೆಗಳ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದು ಪಡಿಸಿ, ಅವರನ್ನು ಖಾಯಂಗೊಳಿಸಬೇಕೆಂದು ಜಿಲ್ಲಾಧ್ಯಕ್ಷ ಎಂ.ಎಂ. ಕಾಂತಿಮನಿ ಆಗ್ರಹಿಸಿದ್ದಾರೆ.
  ರಾಜ್ಯದ ಪತ್ರಿಯೊಂದು ಹಳ್ಳಿಗಳಲ್ಲಿ ಡಾ. ಬಾಬು ಜಗಜೀವನರಾಂ ಭವನ ಮತ್ತು ಮಾದಿಗರ ಸಮಾಜ ಭವನವನ್ನು ನಿರ್ಮಿಸಬೇಕು. ಮಾದಿಗ ಜನಾಂಗದವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರನ್ನು ಖಾಯಂ ಗೊಳಿಸಬೇಕೆಂದು ಮನವಿ ಒತ್ತಾಯಿಸಿದ್ದಾರೆ.
  ಶಾಂತಿರಾಜ ಮೋಟ್ನಳ್ಳಿ, ಆನಂದ ಗೋಡಿಹಾಳ, ನಾಗರಾಜ ದಾಸನಕೇರಿ, ಭೀಮಾಶಂಕರ ಆಲ್ದಾಳ್ ಮೇಘಾನ ಮುಳ್ಳಗಸಿ, ವಿ.ಟಿ. ದಾಸನಕೇರಿ, ಎಂ.ಕೆ. ಭೀರನೂರ, ಸ್ವಾಮಿದೇವ ದಾಸನಕೇರಿ, ವಿಜಯಕುಮಾರ ಕೊಡಚೂರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.