ಮಾತೆ ಮಹಾದೇವಿ ಅಕ್ಕಮಹಾದೇವಿಯ ಪ್ರತಿರೂಪ
ಕ.ಪ್ರ. ವಾರ್ತೆ ಬೀದರ್ ಮಾ.16
ಮಾತೆ ಮಹಾದೇವಿ ಅವರು ಅಕ್ಕಮಹಾದೇವಿಯವರ ಪ್ರತಿರೂಪವಾಗಿದ್ದಾರೆ ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಗಮದ ನುಡಿದರು.
ನಗರದ ಬಸವ ಮಂಟಪದಲ್ಲಿ ಭಾನುವಾರ ಬೆಳಿಗ್ಗೆ ಜಿಲ್ಲಾ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಸಮಾಜದಿಂದ ಮಾತೆ ಮಹಾದೇವಿ ಅವರ 69ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಾತಾಜಿ ಅವರು ಬಸವಕಲ್ಯಾಣದಲ್ಲಿ 108 ಅಡಿ ಬಸವ ಪುತ್ಥಳಿ ನಿರ್ಮಿಸುವುದರ ಮೂಲಕ ವಿಶ್ವ ಮರೆಯಲಾರದಂತಹ ಕೊಡುಗೆ ನೀಡಿದ್ದಾರೆ ಎಂದರು.
ಅವರು ಯಾವುದೇ ಮಠಾಧೀಶರ, ರಾಜಕೀಯ ಶಕ್ತಿಯ ಬೆಂಬಲವಿಲ್ಲದೆ ಏಕಾಂಗಿಯಾಗಿ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಅವರು 100 ವರ್ಷ ಕಾಲ ಬಾಳಲಿ ಎಂದು ಹಾರೈಸಿದರು.
ಮಾತೆ ಮಹಾದೇವಿ ಕಾರ್ಯಕ್ಕೆ ಮೆಚ್ಚುಗೆ: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಪತ್ರಕರ್ತ ಮಲ್ಲಿಕಾರ್ಜುನ ಬಿದಾರಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಸವಣ್ಣನವರು ಗತಿಸಿ 800 ವರ್ಷ ಕಳೆದರೂ ಇಂದಿಗೂ ಅವರು ಜನಮನದಲ್ಲಿ ಉಳಿಯಲು ಕಾರಣ ಅವರು ಮಾಡಿದ ಅಗಾಧ ಸಾಧನೆ ಮತ್ತು ಸಮಾಜ ಪರಿವರ್ತನೆಯಾಗಿದೆ. ಅಂತಹ ಬಸವಣ್ಣನವರ ತತ್ವಗಳನ್ನು ನಿಜವಾಗಿಯೂ ಪ್ರಚಾರ ಮಾಡುತ್ತಿರುವ ಏಕೈಕ ಜಗದ್ಗುರು ಮಾತೆ ಮಹಾದೇವಿಯಾಗಿದ್ದಾರೆ. ಇನ್ನು ಅನೇಕ ಜನ ಪ್ರಚಾರ ಮಾಡುತ್ತಿರಬಹುದು ಆದರೆ ಅವರೆಲ್ಲ ಮಾತಾಜಿ ಅವರ ಸನ್ನಿಧಿಯಲ್ಲಿ ಅವರ ಪ್ರಭಾವದಿಂದ ರೂಪುಗೊಂಡವರು ಎಂದರು.
ಎಷ್ಟೇ ಅಡೆತಡೆಗಳು ಬಂದರೂ ಮಾತಾಜಿ ಎದೆಗುಂದದೆ ಯಾವುದೇ ಆಮಿಷಕ್ಕೆ ಒಳಗಾಗದೆ ನಿಜವಾದ ಸಮಾಜ ಸೇವೆ ಮಾಡುತ್ತಿದ್ದಾರೆ. ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸ ಯಾರು ಮಾಡಬಾರದು ಎಂದು ಹೇಳಿದರು.
ಲಿಂಗಾಯತ ಧರ್ಮ ಮಾನ್ಯತೆ ಹೋರಾಟಕ್ಕೆ ಕೈಜೋಡಿಸಿ: ಮುಖಂಡ ಶ್ರೀಕಾಂತ ಸ್ವಾಮಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಂವಿಧಾನಾತ್ಮಕ ಮಾನ್ಯತೆಗಾಗಿ ಮಾತಾಜಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು. ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ್ ಖಾಜಾಪೂರ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಪಾಟೀಲ್ ಅತಿವಾಳ ನೇತೃತ್ವ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದೀಪಕ ವಾಲಿ, ಅತಿಥಿಯಾಗಿ ವಿಜಯಕುಮಾರ ಕುಲಕರ್ಣಿ, ಕುಶಾಲ್ರಾವ ರತ್ನಾಪೂರ, ಶಾಲಿವಾನ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿಶ್ವನಾಥ ಪಾಟೀಲ್, ಸಂಜುಕುಮಾರ ಪಾಟೀಲ್, ಮಲ್ಲಿಕಾರ್ಜುನ್ ಮನ್ನಳ್ಳಿ, ಶಾಂತಪ್ಪ ಮುಗಳಿ, ಚಂದ್ರಕಾಂತ ಸ್ವಾಮಿ, ಬಸವಂತರಾವ ಬಿರಾದಾರ, ಮನ್ಮಥಯ್ಯಾ ಸ್ವಾಮಿ, ಶೀತಲ್ ಸೂರ್ಯವಂಶಿ, ಈರಮ್ಮ ಕೋರೆ, ಶರಣಪ್ಪ ಬಿರಾದಾರ, ಕಲ್ಯಾಣರಾವ್ ಬೊಂಬುಳಗೆ, ವಿದ್ಯಾವತಿ ನಿಡಗುಂದೆ, ರಾಜೇಂದ್ರಕುಮಾರ, ಗಣಪತಿ ಬಿರಾದಾರ, ಮಹಾದೇವ್ ಕಾಂಬಳೆ, ಮಲ್ಲಿಕಾರ್ಜುನ್ ಮೂಲಗೆ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಮಹಾಲಿಂಗಸ್ವಾಮಿ ಚಟ್ನಳ್ಳಿ ಸ್ವಾಗತಿಸಿ, ಸುರೇಶಕುಮಾರ ಸ್ವಾಮಿ ನಿರೂಪಿಸಿದರು. ಬಸವಕುಮಾರ ಚಟನಳ್ಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

