ಗುಲ್ಬರ್ಗಾ

ಹೈ.ಕ.ಕ್ಕೆ ಕೇಂದ್ರದ ಕೊಡುಗೆ ಅಪಾರ: ಇಸ್ಲಾಂ

Published On :

ಅಫಜಲ್ಪುರ: ಯುಪಿಎ ಸರ್ಕಾರ ಹೈ-ಕ ಪ್ರದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದುದ್ದು. ಅದರಲ್ಲೂ ನಮ್ಮ ಭಾಗದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಯೋಜನೆಗಳು ಹೈ-ಕವನ್ನು ದೇಶಾದ್ಯಂತ ಗುರುತಿಸುವಂತೆ ಮಾಡಿವೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಖಚಿತ ಎಂದು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಖಮರುಲ್ ಇಸ್ಲಾಂ ಹೇಳಿದರು.
ಪಟ್ಟಣದ ಮಣೂರ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ಅಫಜಲ್ಪುರ ಇವರ ವತಿಯಿಂದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಪ್ರಥಮ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಕೇಂದ್ರ ಮಂತ್ರಿಮಂಡಲದಲ್ಲಿ ಅವರಿಗೆ ನೀಡಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಅವುಗಳ ಘನತೆ ಹೆಚ್ಚಿಸಿದ್ದಾರೆ ಎಂದರು.
ಆಡಳಿತದ ಅಸಲಿ ಮುಖವಾಡ: ಇನ್ನೂ ಬಿಜೆಪಿ ಪಕ್ಷ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯನ್ನು ಬಿಂಬಿಸಿ ಪ್ರಚಾರ ಪಡೆಯುತ್ತಿದೆ. ಆದರೆ ಕೇಜ್ರಿವಾಲ್ ಅವರ ಗುಜರಾತ್ ಭೇಟಿಯು ಮೋದಿ ಆಡಳಿತದ ಅಸಲಿ ಮುಖವಾಡವನ್ನು ಬಯಲಿಗೆಳೆದಿದ್ದಾರೆ. ಇಂತಹ ವ್ಯಕ್ತಿಯಿಂದ ದೇಶದ ಅಭಿವೃದ್ಧಿ ಆಗುತ್ತದೆ ಎಂಬುದು ಬರಿ ವದಂತಿಯಷ್ಟೆ. ಅದು ಕೇವಲ ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯ ಸರ್ವ ಜನಾಂಗದ ಶಾಂತಿಗಾಗಿ ದುಡಿಯುವ ಕಾಂಗ್ರೆಸ್‌ಗೆ ಜನ ಬೆಂಬಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
 ಮಾಜಿ ಸಂಸದ ಇಕ್ಬಾಲ್ ಅಹ್ಮದ ಸರಡಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗನಗೌಡ ಸುಂಕನೂರ, ಜಿಪಂ ಉಪಾಧ್ಯಕ್ಷೆ ಅನೀತಾ ವಳಕೇರಿ, ಮಾಜಿ ಎಂಎಲ್‌ಸಿ ಮಾರುತಿ ಮಾಲೆ, ಮಕ್ಬೂಲ್ ಪಟೇಲ್ ಮಾತನಾಡಿದರು. ಜಿಪಂ ಸದಸ್ಯ ನಿತೀನ್ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೇವೂರ, ಬಿ.ವೈ. ಪಾಟೀಲ್, ರಝಾಕ ಪಟೇಲ್, ಸಿದ್ದು ಹಳಗೋಧಿ, ಸಿದ್ದಣಗೌಡ ಪಾಟೀಲ್ ಬಾಸಗಿ, ಎಪಿಎಂಸಿ ಸದಸ್ಯರಾದ ಗುರುಬಾಳ ಜಕಾಪೂರ, ಸಿದ್ದಯ್ಯ ಸ್ವಾಮಿ, ಮಕ್ಸೂದ್ ಪಟೇಲ್, ಸಿದ್ದು ಮ್ಯಾಕೇರಿ, ಮಹಾಂತೇಶ ಪಾಟೀಲ್, ಶಿವಪುತ್ರಪ್ಪ ಗೌಡಗಾಂವ, ಬಾಬುರಾವ್, ಬಸಯ್ಯ ಹಿರೇಮಠ, ಶಾಂತಯ್ಯ ಹಿರೇಮಠ, ಪಪಂ ಸದಸ್ಯ ಪಾಶಾ ಮಣೂರ, ರಾಜಶೇಖರ ಹಿರೇಮಠ ಇತರರು ಇದ್ದರು.

ಸಚಿವರ ಬೆಂಬಲಿಗರ ಹೇಳಿಕೆ ಖಂಡನೆ
ಗುಲ್ಬರ್ಗ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಬೆಂಬಲಿಗರ ಸುಳ್ಳು ಹೇಳಿಕೆ ವಿರೋಧಿಸಿ ಹಾಗರಗಾ ನಾಗರಿಕ ಹೋರಾಟ ಸಮಿತಿ ಉಗ್ರವಾಗಿ ಖಂಡಿಸುತ್ತದೆ.
ಹಾಗರಗಾ ಗ್ರಾಮದ ಸರ್ವೇ ನಂ.315ರಲ್ಲಿರುವ 51 ಎಕರೆ 37 ಗುಂಟೆಗಳಲ್ಲಿ ಜವಹಾರ ನವೋದಯ ಶಾಲೆಗಾಗಿ ಕೇಂದ್ರ ಸರ್ಕಾರ 25 ಎಕರೆ ಜಮೀನನ್ನು ಮಂಜೂರು ಮಾಡಿದೆ. ಅದರ ಕಾರ್ಯವು ಆರಂಭವಾಗಿರುವ ಮಧ್ಯದಲ್ಲಿ ಗ್ರಾಮದ ಜನರಿಗೆ ಗೊತ್ತಿರದೆ ಸ್ಥಳದಲ್ಲಿ ಮುಸ್ಲಿಂ ಹಜ್ ಕಮಿಟಿ, ಈದ್ಗಾ ಮೈದಾನ ನಿರ್ಮಾಣ ಮಾಡಲು ಅಧಿಕಾರಿಗಳು ಆದೇಶ ನೀಡಿರುವುದು ಗೊಂದಲವನ್ನುಂಟು ಮಾಡಿದೆ.
ಈ ವಿಷಯಕ್ಕೆ ಸಂಬಂಧ ಪಟ್ಟ ಆದೇಶ ಪತ್ರಗಳಿದ್ದು, ಸರಿಯಾದ ಮಾಹಿತಿ ಇಲ್ಲದೆ ಸುಳ್ಳು ಹೇಳುತ್ತಿರುವ ಸಚಿವರ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಉಗ್ರ ಹೋರಾಟ ಮಾಡಿವುದಾಗಿ ಎಚ್ಚರಿಕೆ ನೀಡಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಎಸ್.ಕೊರಿ ತಿಳಿಸಿದ್ದಾರೆ. ಅಧ್ಯಕ್ಷ ಶಿವಕುಮಾರ ಜಿ.ಎಂ, ಉಪಾಧ್ಯಕ್ಷ ಪ್ರಕಾಶ ಎಸ್. ಹಾಗರಗಿ, ಬಸವರಾಜ ಬಿರಾದಾರ, ಸಹ ಕಾರ್ಯದರ್ಶಿ ಧರಂಸಿಂಗ್ ತಿವಾರಿ, ಶಿವಕುಮಾರ ಬಿರಾದರ ಮುಂತಾದವರು ಹೇಳಿಕೆಗೆ ಸಹಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.