ಕರೋಡ್ ಖರ್ಗೆ ದಂ'ಪತಿ'
ಚ ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.20
ರಾಜ್ಯ ಕಾಂಗ್ರೆಸ್ಸಿನ ಘಟಾನುಘಟಿ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪತ್ನಿ ರಾಧಾಬಾಯಿ ಖರ್ಗೆ ದಂಪತಿ ಕರೋಡ್ ಪತಿಗಳು.
ಅದರಲ್ಲೂ ಸಂಪತ್ತಿನ ವಿಚಾರದಲ್ಲಿ ಪತಿ ಮಲ್ಲಿಕಾರ್ಜುನ ಖರ್ಗೆಯವರಿಗಿಂತ ಅವರ ಪತ್ನಿ ರಾಧಾಬಾಯಿ ಖರ್ಗೆ ಒಂದು 'ಕೈ' ಮುಂದೆ ಎಂದೇ ಹೇಳಬೇಕು.
ಬ್ಯಾಂಕ್ ಠೇವಣಿ, ಷೇರು, ಎಲ್ಐಸಿ, ಚಿನ್ನಾಭರಣ, ವಾಣಿಜ್ಯ ಮಳಿಗೆಗಳು; ಬೆಂಗಳೂರು, ಗುಲ್ಬರ್ಗ ಹಾಗೂ ಗುಂಡಗುರ್ತಿ ಸೇರಿದಂತೆ ಹಲವೆಡೆ ಜಮೀನು ರೂಪದಲ್ಲಿರುವ ಸ್ಥಿರ- ಚರಾಸ್ತಿಯಿಂದಾಗಿ ಕೋಟಿ ಕೋಟಿ ಸಂಪತ್ತಿನ ಒಡೆಯರಾಗಿದ್ದರೂ ಈ ದಂಪತಿ ಹೆಸರಲ್ಲಿ ಸಂಚಾರಕ್ಕೆಂದು ಸ್ವಂತದ ವಾಹನವಿಲ್ಲ!.
ಅಷ್ಟೇ ಯಾಕೆ, ಕರೋಡ್ಪತಿ ಖರ್ಗೆ ದಂಪತಿಗೆ 74.10 ಲಕ್ಷ ಮೊತ್ತದ ಸಾಲದ ಹೊರೆಯೂ ಬೆನ್ನ ಮೇಲಿದೆ.
ಗುಲ್ಬರ್ಗ ಮೀಸಲು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಮಾ.20ರಂದು ನಾಮಪತ್ರ ಸಲ್ಲಿಸಿರುವ ಖರ್ಗೆ, ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡಿವಿಟ್ನಲ್ಲಿ ತಾವು ಹಾಗೂ ತಮ್ಮ ಪತ್ನಿ, ಮಕ್ಕಳು ಹೊಂದಿರುವ ಸ್ಥಿರ- ಚರಾಸ್ತಿಗಳ ಮಾಹಿತಿ ನೀಡಿದ್ದಾರೆ. ಖರ್ಗೆ ಅವರು ಸಲ್ಲಿಸಿರುವ ಆಸ್ತಿ-ಪಾಸ್ತಿ ಮಾಹಿತಿಯ ಅಫಿಡಿವಿಟ್ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು, ಅದರಲ್ಲಿ ನಮೂದಾಗಿರುವ ಖರ್ಗೆ ದಂಪತಿ ಆಸ್ತಿ ವಿವರವಿದು.
ಮಲ್ಲಿಕಾರ್ಜುನ ಖರ್ಗೆ
ನಗದು ಹಣ- 4 ಲಕ್ಷ, ಪಿಕೆಜಿಬಿ, ಕೆನರಾ ಬ್ಯಾಂಕ್, ಎಸ್ಬಿಐ ಬೆಂಗಳೂರು, ನವ ದೆಹಲಿ ಶಾಖೆಗಳಲ್ಲಿ ಠೇವಣಿ, ಉಳಿತಾಯ ಖಾತೆ ರೂಪದಲ್ಲಿ 70.30 ಲಕ್ಷ, ಷೇರುಗಳಲ್ಲಿ ಹೂಡಿಕೆ- 12.85 ಲಕ್ಷ, 15 ಲಕ್ಷ ಮೌಲ್ಯದ ಎಲ್ಐಸಿ ಪಾಲಿಸಿ. ಸ್ವಂತ ಬಳಕೆಗೆ ವಾಹನಗಳಿಲ್ಲ. 5.56 ಲಕ್ಷ ಬೆಲೆ ಬಾಳುವ 255 ಗ್ರಾಂ. ಬಂಗಾರ, 3.24 ಲಕ್ಷ ಬೆಲೆಯ 6 ಕೆ.ಜಿ. ಬೆಳ್ಳಿ ಪರಿಕರಗಳು.
ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಬಳಿ 1.08 ಎಕರೆ(ಕೃಷಿಯೇತರ) ಜಮೀನು- ಮಾರುಕಟ್ಟೆ ಬೆಲೆ 2.43 ಲಕ್ಷ, ಸದಾಶಿವ ನಗರದಲ್ಲಿ ಪಾಲುದಾರಿಕೆ ಆಸ್ತಿ- ಮಾರುಕಟ್ಟೆ ಬೆಲೆ- 79.42 ಲಕ್ಷ, ಗುಲ್ಬರ್ಗ ಬಸವನಗರದಲ್ಲಿ ಮನೆ- 8 ಲಕ್ಷ, ಬೆಂಗಳೂರು ಸದಾಶಿವ ನಗರದಲ್ಲಿರುವ ವಾಸದ ಮನೆ- 3.12 ಕೋಟಿ(ಸದ್ಯದ ಮಾರುಕಟ್ಟೆ ಬೆಲೆ). ಮಲ್ಲಿಕಾರ್ಜುನ ಖರ್ಗೆ ಹೆಸರಲ್ಲಿ 10 ಲಕ್ಷ ಸಾಲದ ಹೊರೆಯೂ ಇರುವುದನ್ನು ನಾಮಪತ್ರ ಆಸ್ತಿಪಾಸ್ತಿ ವಿವರದಲ್ಲಿ ನಮೂದಾಗಿದೆ.
ಖರ್ಗೆ ಪತ್ನಿ ಧನಲಕ್ಷ್ಮೀ
ಖರ್ಗೆಯವರ ಪತ್ನಿ ರಾಧಾಬಾಯಿ ಅವರಂತೂ ಧನಲಕ್ಷ್ಮೀ. ಏಕೆಂದರೆ ಆಸ್ತಿಪಾಸ್ತಿ ವಿಚಾರದಲ್ಲಿ ಪತಿ ಮಲ್ಲಿಕಾರ್ಜುನ ಖರ್ಗೆಗಿಂತ ಇವರು ಒಂದು 'ಕೈ' ಮುಂದೆ. ಇಲ್ಲಿದೆ ನೋಡಿ ಖರ್ಗೆ ಪತ್ನಿ ರಾಧಾಬಾಯಿಯವರ ಹೆಸರಲ್ಲಿರುವ ಆಸ್ತಿಪಾಸ್ತಿ ಮಾಹಿತಿ.
ನಗದು ಹಣ- 2.50 ಲಕ್ಷ, ವಿವಿಧ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ, ಠೇವಣಿ ರೂಪದಲ್ಲಿರುವ ಹಣ- 18.33 ಲಕ್ಷ, ಯುಟಿಐನಲ್ಲಿ ಹೂಡಿಕೆ 2.12 ಲಕ್ಷ, ವಾಹನಗಳಿಲ್ಲ, 805 ಗ್ರಾಂ. ಚಿನ್ನ- 18.83 ಲಕ್ಷ, 11 ಕೆ.ಜಿ. ಬೆಳ್ಳಿ ಪರಿಕರಗಳು- 5.94 ಲಕ್ಷ, ಗುಂಡಗುರ್ತಿಯಲ್ಲಿ ಭೂಮಿ- 6.20 ಎಕರೆ, ಬೆಲೆ- 9.11 ಲಕ್ಷ(ಪಾಲಕರಿಂದ ಕಾಣಿಕೆ ಬಂದದ್ದು).
ಚಿತ್ತಾಪುರದ ಗುಂಡಗುರ್ತಿಯಲ್ಲೇ 15.20 ಹಾಗೂ ಹಾಗೂ 4.9 ಎಕರೆ ಹೊಲ- ಒಟ್ಟು ಮೌಲ್ಯ- 33.36 ಲಕ್ಷ, ಸದಾಶಿವ ನಗರದಲ್ಲಿನ ಭೂ ಆಸ್ತಿಯಲ್ಲಿ ಪಾಲುದಾರಿಕೆ- ಈಗಿನ ಮಾರುಕಟ್ಟೆ ದರ- 79.48 ಲಕ್ಷ, ಗುಲ್ಬರ್ಗದ ಐವಾನ್- ಎ- ಷಾಹಿಯಲ್ಲಿರುವ ವಾಸದ ಮನೆ- 30.08 ಲಕ್ಷ, ಮಠದ ಹಳ್ಳಿ ಎಕ್ಸಟೆನ್ಷನ್ನಲ್ಲಿರುವ ಆಸ್ತಿಯಲ್ಲಿನ ಪಾಲುದಾರಿಕೆ ಮೌಲ್ಯ- 36 ಲಕ್ಷ, ಬೆಂಗಳೂರಲ್ಲಿ ಕಮಿಷ್ನರೇಟ್ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆ- 1.40 ಕೋಟಿ ಮೌಲ್ಯ. ಆರ್ಟಿ ನಗರ ಬೆಂಗಳೂರಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಶೇ.50ರಷ್ಟು ಪಾಲುದಾರಿಕೆ- 60 ಲಕ್ಷ.
ರಾಧಾಬಾಯಿ ಖರ್ಗೆ ಅವರ ಹೆಸರಲ್ಲಿ ಹಲವು ಮೂಲಗಳಲ್ಲಿ ಒಟ್ಟು 64.10 ಲಕ್ಷ ಮೊತ್ತದಷ್ಟು ಸಾಲದ ಹೊರೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

