ಕೋಲಿ ಸಮಾಜ ಹಿತ ಕಾಪಾಡುವಂತರ ಬೆಂಬಲಿಸಿ: ಮ್ಯಾಕೇರಿ
ಅಫಜಲ್ಪುರ: ಜನರ ಓಟ್ ಬ್ಯಾಂಕ್ಗಾಗಿ ಏನೇನೋ ಸುಳ್ಳು ಭರವಸೆಗಳನ್ನು ನೀಡಿ ಜನರ ಓಲೈಕೆಗಾಗಿ ನಿಮಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಹೇಳುವುದು ಬಹಳ ಅಪಾಯಕಾರಿಯಾಗಿದ್ದು, ಇಂತಹ ಹೇಳಿಕೆಗಳನ್ನು ಕೋಲಿ ಸಮಾಜದ ಮುಖಂಡರುಗಳು ಸಮಾಜ ಬಲಿಕೊಡುವಂತ ಹೇಳಿಕೆಗಳನ್ನು ನಂಬುವುದು ಮತ್ತು ಬಲಿ ಕೊಡುವುದು ಸರಿಯಲ್ಲ ಎಂದು ತಾಲೂಕು ಕೋಲಿ ಸಮಾಜದ ಉಪಾಧ್ಯಕ್ಷ ಶಂಕು ಮ್ಯಾಕೇರಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಶಾರದಾ ಕಲ್ಯಾಣ ಮಂಟಪ ಅಫಜಲ್ಪುರದಲ್ಲಿ ತಾಲೂಕು ಮಟ್ಟದ ಕೋಲಿ ಸಮಾಜದ ಸಭೆ ನಡೆಯಲಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಬಂದು ಸಭೆಯನ್ನು ಯಶಸ್ವಿಗೊಳಿಸುವಂತೆ ಕೋರಿದರು.
ರಾಜಕೀಯ ಮುಖಂಡರುಗಳು ಕೇವಲ ಚುನಾವಣೆ ಸಂದರ್ಭದಲ್ಲಿ ಸಮಾಜವನ್ನು ಮೇಲೆತ್ತುವ ರೀತಿಯಾಗಿ ಮಾತನಾಡಿ, ನಮ್ಮ ಮತಗಳನ್ನು ದೋಚುತ್ತಾರೆ. ಜಿಲ್ಲೆಯ ಕೋಲಿ ಸಮಾಜದ ಜನತೆ ಯಾವುದೇ ಕಾರಣಕ್ಕೂ ಇಂತಹ ಹೇಳಿಕೆಗಳಿಗೆ ಗಮನ ಕೊಡಬಾರದು. ದಿ. ವಿಠ್ಠಲ್ ಹೆರೂರ್ ವಿಚಾರಗಳಲ್ಲಿ ಯಾರು ನಡೆದುಕೊಳ್ಳುತ್ತಾರೋ ಯಾರು ಈ ಸಮಾಜದ ಹಿತ ಕಾಯುತ್ತಾರೋ ಅಂತವರ ಮಾತುಗಳಿಗೆ ಬೆಲೆ ಕೊಡಬೇಕು. ಚುನಾವಣೆ ಹತ್ತಿರ ಬಂದಾಗ ಸಮಾಜದ ಓಟಿಗಾಗಿ ವಿವಿಧ ಪಕ್ಷಗಳ ಮುಖಂಡರುಗಳು ಸಮಾಜವನ್ನು ಬಳಸಿಕೊಳ್ಳುತ್ತಾರೆ. ಚುನಾವಣೆ ನಂತರ ರಾಜಕೀಯ ಮತ್ತು ಇನ್ನಿತರ ಸ್ಥಾನಮಾನಗಳು ಯಾವ ಪಕ್ಷದಲ್ಲಿಯೂ ಕೂಡ ಕೋಲಿ ಸಮಾಜವನ್ನು ಸರಿಯಾಗಿ ನೋಡಿಕೊಂಡಿಲ್ಲ. ಅದಕ್ಕಾಗಿ ಕೋಲಿ ಸಮಾಜದ ಜನತೆ ಸರಿಯಾದ ಯೋಚನೆಯನ್ನು ಮಾಡಿ ಈ ಸಮಾಜದ ಹಿತ ಕಾಪಾಡುವಂತರಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇನ್ನೂ ಪಟ್ಟಣದಲ್ಲಿ ಚೌಡಯ್ಯ ನಗರದಲ್ಲಿ ಅಂಬಿಗರ ಚೌಡಯ್ಯ ಬೃಹತ್ ಪ್ರತಿಮೆಯನ್ನು ನಿರ್ಮಿಸುವ ಯೋಜನೆ ಇದ್ದು, ಎಲ್ಲರ ಸಹಕಾರದೊಂದಿಗೆ ಆದಷ್ಟು ಬೇಗನೆ ಈ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನರಸಿಪುರ ಅಂಬಿಗರ ಚೌಡಯ್ಯ ಪೀಠ ಕಾರ್ಯಧ್ಯಕ್ಷ ಬಸವರಾಜ ಸಪ್ಪನಗೊಳ, ಮಹಾಂತೇಶ ಬಡಿಗೆರಿ, ಮಹಾರಾಯ ಅಗಸಿ, ಭಗವಂತ ಜಮಾದಾರ, ಮಲ್ಲಿಕಾರ್ಜುನ ಸಿವುಣಗಿ, ಸುರೇಶ ಕಲ್ಲೂರ, ಬಸವರಾಜ ನಾಟಿಕಾರ, ಶ್ರೀಕಾಂತ ದಿವಾನಜಿ, ಶ್ರೀಶೈಲ ಪಾಟೀಲ್, ಮಲ್ಕಮ್ಮ ಯಂಕಂಚಿ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

