ಗುಲ್ಬರ್ಗಾ

ಮಠಗಳಿಂದ ಸಮಾಜಮುಖಿ ಕಾರ್ಯ: ನಾಲವಾರ ಶ್ರೀಗಳು

Published On :

ಜೇವರ್ಗಿ: ಮಠ ಮಾನ್ಯಗಳು ಯಾವತ್ತು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದ್ದು, ಸಮಾಜ ಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಮಠ ಹಾಗೂ ಮಠಾಧೀಶರಿಗೆ ಶ್ರೇಯಸ್ಸು ಬರುತ್ತದೆ ಎಂದು ಡಾ. ಸಿದ್ದತೋಂಟೇಂದ್ರ ಶಿವಾಚಾರ್ಯ ಸ್ವಾಮಿ ಅಭಿಪ್ರಾಯಪಟ್ಟರು.
ಶಾಖಾಪುರ ತಪೋವನ ಮಠದಲ್ಲಿ ಮಂಗಳವಾರ ವಿಶ್ವಾರಾಧ್ಯರು ಹಾಗೂ ಮಾತೋಶ್ರೀ ಬಸವಾಂಬೆ ಅವರ ಜೋಡು ರಥೋತ್ಸವದ ನಂತರ ನಡೆದ ಧರ್ಮಸಭೆಯಲ್ಲಿ ಸಾನಿಧ್ಯವಹಿಸಿ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಸಿದ್ಧರಾಮ ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಬಡ ಮತ್ತು ಅನಾಥ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣ ಕ್ಷೇತ್ರದಲ್ಲಿಯು ಕ್ರಾಂತಿ ನಡೆಸಿದ್ದಾರೆ.
ಈ ಭಾಗದ ರೈತರಿಗೆ ಕೃಷಿ ಯೋಜನೆಗಳ ಕುರಿತು ಮಾಹಿತಿ ಒದಗಿಸಲು ಜಾತ್ರಾ ಉತ್ಸವದಲ್ಲಿ ಕೃಷಿಯ ಸಮ್ಮೇಳನ ಆಯೋಜಿಸಿ ರೈತರಿಗೆ ನೆರವಾಗಿದ್ದು ಶ್ಲಾಘನೀಯ ಎಂದು ಬಣ್ಣಿಸಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಧರ್ಮಸಭೆಯನ್ನು ಉದ್ಘಾಟಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಹೊನ್ನಕಿರಣಗಿಯ ಚಂದ್ರಗೂಡ ಶ್ರೀ, ಸರಡಗಿಯ ರೇವಣಸಿದ್ಧ ಶ್ರೀ, ಗಡಿಗೌಡಗಾಂವದ  ಶಾಂತಲಿಂಗ ಶ್ರೀ, ಮಳಖೇಡ ದರ್ಗಾದ ಹಜರತ್ ಸೈಯದ್ ಶಹಾ ಮುಸ್ತಾಫ್ ಖಾದ್ರಿ ಸೇರಿದಂತೆ ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್ ಆಂದೋಲಾ, ರಮೇಶಬಾಬು ವಕೀಲ್, ಸಿದ್ರಾಮಪ್ಪಗೌಡ ಹರನೂರ ಇದ್ದರು. ಶಿವಕವಿ ಹಿರೇಮಠ ಜೊಗೂರ ನಿರೂಪಿಸಿದರು. ಶಂಕರಗೌಡ ಹಾಲಗಡ್ಲಾ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.