ಗುಲ್ಬರ್ಗಾ

ಕರಿಭಾವಿ ಕರಾಳ ಸ್ಥಿತಿಗೆ ಕಳವಳ

Published On :

ಕೆಂಭಾವಿ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೆಂಭಾವಿ ಸಮೀಪದ ಕರಿಭಾವಿ ಗ್ರಾಮಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಸ್ಥರಿಂದ ಸಮಸ್ಯೆಗಳನ್ನು ಅರಿತ ಅವರು ನೀರೇ ಇಲ್ಲದಿದ್ದ ಮೇಲೆ 15 ಲಕ್ಷ ವೆಚ್ಚದ ಪೈಪ್‌ಲೈನ್ ಮಾಡಿದ್ದಾದರೂ ಏಕೆ, 10 ಲಕ್ಷ ವೆಚ್ಚದ ಟ್ಯಾಂಕ್ ಕಟ್ಟಿಸಿದ್ದೀರಿ ಪೈಪ್‌ಲೈನ್ ಕೆಲಸವಾಗಿದೆ. ಆದರೆ ನೀರು ಇಲ್ಲದೆಡೆ ಪೈಪಲೈನ್ ಮಾಡಿದ್ದು ನನಗೆ ಸರಿ ಎನಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
'ಜಾಪುರ ಜಿಲ್ಲೆಯ ಶಳ್ಳಗಿ ಗ್ರಾಮದಿಂದ ಸಮೀಪದ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಕುಡಿಯುವ ನೀರಿನ ಕೆಲಸ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ನೀರು ಮಾತ್ರ ಸಿಗುತ್ತಿಲ್ಲ. 600- 700 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ನಿಜಾಮರ ಕಾಲದ ಎರಡು ಬಾವಿಗಳಿದ್ದು ಅವುಗಳಲ್ಲಿಯೂ ಕಣ್ಣೀರಿನಂತೆ ನೀರುಬರುತ್ತದೆ. ಇಡೀ ಗ್ರಾಮದ ಜನತೆ ಅದರ ಮೇಲೆ ಅವಲಂಬಿಸಿದ್ದು ನಾವು ಹುಟ್ಟಿದಾಗಿನಿಂದ ನಮ್ಮ ಪರಿಸ್ಥಿತಿ ಇದೇ ಮಟ್ಟದಲ್ಲಿದೆ' ಎಂದು ಗ್ರಾಮದ ಭೀಮಣ್ಣ ಉಸ್ತುವಾರಿ ಕಾರ್ಯದರ್ಶಿಗಳಿಗೆ ವಿವರಿಸಿದರು.
ತಿಂಗಳೊಳಗೆ ಯೋಜನೆ ಪೂರ್ಣ: ಗ್ರಾಮಕ್ಕೆ ಕುಡಿವ ನೀರು ಸರಬರಾಜು ಮಾಡಲು ರೂಪಿಸಿದ ಎಲ್ಲ ಯೋಜನೆಗಳು ವಿಫಲವಾಗಿದ್ದು, ಸದ್ಯ ಎನ್‌ಐಆರ್‌ಡಿ ಯೋಜನೆಯಡಿ ಕಾಲುವೆ ಹತ್ತಿರ ಸರ್ಕಾರಿ ಜಮೀನಿನಲ್ಲಿ ಬಾವಿ ತೆರೆದು ಗ್ರಾಮಕ್ಕೆ ನೀರೊದಗಿಸುವ ಯೋಜನೆ ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ತಾಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯ ಹಿರೇಮಠ ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಬಾವಿಯಲ್ಲಿ ನೀರಿದ್ದು ಟ್ಯಾಂಕರ್ ಮೂಲಕ ನೀರು ಕೊಡುವ ಅವಶ್ಯಕತೆ ಇಲ್ಲ ಎಂದು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ವಿವರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಯದರ್ಶಿಗಳು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ಕೊಟ್ಟು ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ತಿಳಿಸಲಾಗಿದೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಸಹಾಯಕ ಆಯುಕ್ತ ಪರುಶುರಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಸವರಾಜ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.