ಕುಡಿವ ನೀರಿಗಾಗಿ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಏ. 2
ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ನಾಗರಾಜಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಆವರಣದಲ್ಲಿ ಮಂಗಳವಾರ ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಚಟಚಟಹಳ್ಳಿ ಪಂಚಾಯ್ತಿ ವ್ಯಾಪ್ತಿಯ ನಾಗರಾಜಪುರದಲ್ಲಿ ಸುಮಾರು 170-180 ಕುಟುಂಬಗಳು ವಾಸವಾಗಿದ್ದು, ನೀರಿನ ಸಮಸ್ಯೆ ಎದುರಾಗಿದೆ. ಬೋರ್ವೆಲ್ಗಳು ನೀರು ಬಾರದೆ ನಿಂತು ಹೋಗಿದೆ. ಬೋರ್ವೆಲ್ಗಳನ್ನು ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಹಳ್ಳಕೊಳ್ಳ, ಕೆರೆಕಟ್ಟೆಗಳು ಬತ್ತಿವೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಉಲ್ಬಣಗೊಂಡಿದೆ ಎಂದು ಆರೋಪಿಸಿದರು. ಗ್ರಾಮಗಳಲ್ಲಿರುವ ದೊಡ್ಡ ಟ್ಯಾಂಕ್ಗಳಿಗೆ ನೀರು ಸಂಗ್ರವಾಗದೆ ಟ್ಯಾಂಕ್ಗಳು ಹಾಳಾಗುತ್ತಿವೆ. ಟ್ಯಾಂಕ್ನಿಂದ ಹನಿ ನೀರೂ ಬರುತ್ತಿಲ್ಲ. ಕೆಲವು ಟ್ಯಾಂಕ್ನಲ್ಲಿ ಸಂಗ್ರಹವಾಗುತ್ತಿರುವ ನೀರು ಪ್ರತಿನಿತ್ಯ ಎಲ್ಲಿಗೆ ಪೂರೈಕೆಯಾಗುತ್ತಿದೆ ಎಂಬುದೂ ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ತಮಗೆ ಬೇಕಾದ ಕಡೆಗಳಿಗೆ ನೀರನ್ನು ಹರಿಸಿ ಈ ಗ್ರಾಮಸ್ಥರಿಗೆ ಕಳೆದು ಕೆಲವು ತಿಂಗಳಿನಿಂದ ಸರಿಯಾಗಿ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಮನೆಗಳಲ್ಲಿ ಇರುವ ಬೋರ್ವೆಲ್ಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಅದರಲ್ಲೂ ನೀರಿಲ್ಲ. ನಾಲ್ಕೈದು ಕಿ.ಮೀ.ನಷ್ಟು ದೂರ ಕ್ರಮಿಸಿದರೂ ನೀರು ಲಭ್ಯವಾಗುತ್ತಿಲ್ಲ ಎಂದು ಅಲವತ್ತುಕೊಂಡರು.
ಪೈಪ್ ಮೂಲಕ ನೀರು ನೀಡಿ: ಆದ್ದರಿಂದ ಬೇಲೂರು ತಾಲೂಕಿನ ಯಗಚಿ ಹೊಳೆಯಿಂದ ಅರಸೀಕೆರೆಗೆ ಪೈಪ್ಲೈನ್ ಹೋಗಿದ್ದು, ಈ ಪೈಪ್ಲೈನ್ ಗ್ರಾಮದಿಂದ ಸುಮಾರು 300 ರಿಂದ 350 ಮೀ. ಅಂತರದಲ್ಲಿದ್ದು, ಇದರಿಂದಲೇ ಗ್ರಾಮಕ್ಕೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಘು ನಂದನ್, ರಾಮಯ್ಯ, ತಿಮ್ಮಯ್ಯ, ಸೋಮಣ್ಣ, ರಮೇಶ್, ಲಿಂಗರಾಜು, ಎನ್.ಎನ್. ವೆಂಕಟೇಶ್, ವೆಂಕಯ್ಯ, ಎನ್.ಎಂ. ಕೃಷ್ಣ, ಎನ್.ವಿ.ನಾಗರಾಜು, ಕುಮಾರ್, ಸೋಮು, ಶಿವಣ್ಣ, ಗಂಗಾ ಹಾಗೂ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

