ಉಕ್ಕಿ ಹರಿಯುವ ಚರಂಡಿ ನೀರು
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಏ.4
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಶುಚಿತ್ವ ಅದ್ವಾನವಾಗಿದ್ದು, ಪಟ್ಟಣದ ಎಲ್ಲೆಂದರಲ್ಲಿ ಒಳಚರಂಡಿ ಕಟ್ಟಿಕೊಂಡು ಕೊಳಚೆ ನೀರು ರಸ್ತೆಗಳಲ್ಲಿ ಉಕ್ಕಿ ಹರಿಯುವ ಸ್ಥಿತಿ ತಲುಪಿದೆ.
ಇದಕ್ಕೆ ತಾಜಾ ಉದಾಹರಣೆ ಎಎಲ್ಎನ್ ಚಿತ್ರ ಮಂದಿರದ ರಸ್ತೆ ಪುರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣ ಮುಂಭಾಗದಲ್ಲಿ ಒಳಚರಂಡಿ ತುಂಬಿ ವಾರಗಳೇ ಕಳೆದರೂ ರಸ್ತೆಗಳಲ್ಲಿ ಉಕ್ಕಿ ಹರಿಯುತ್ತಿರುವ ಗಲೀಜು ನೀರನ್ನು ತಡೆಯುವಲ್ಲಿ ಮುಂದಾಗದೆ ಇರುವುದಕ್ಕೆ ವಾಣಿಜ್ಯ ಸಂಕೀರ್ಣ ಮಾಲೀಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಪುರಸಭೆ ಆರೋಗ್ಯಾಧಿಕಾರಿಗೆ ದೂರು ನೀಡಿದರೆ ರೀ ಇಡ್ರಿ ಪೋನ್ ನಮಗೆ ಬೇರೆ ಕೆಲಸ ಇರೋಲ್ವ ಸದ್ಯಕ್ಕೆ ಬೇರೆ ಕಡೆ ಕೆಲಸ ಮಾಡೀತೀದೀವಿ ಎಂದು ಹೇಳ್ತಾರೆ ಎಂಬುದು ಸಾರ್ವಜನಿಕರ ದೂರು. ಇನ್ನು ಒಳಚರಂಡಿ ಉಕ್ಕಿ ಹರಿಯತ್ತಿರುವ ಚರಂಡಿ ಪಕ್ಕದಲ್ಲೇ ರಸ್ತೆ ಬದಿ ಕ್ಯಾಂಟಿನ್ಗಳು ಬೆಳಗಿನಿಂದ ಸಂಜೆಯವರಗೆ ತಮ್ಮ ವಹಿವಾಟು ನಡೆಸುತ್ತಿವೆ. ಈ ದುರ್ನಾತದ ನಡುವೆ ಪಟ್ಟಣದಲ್ಲಿ ದೈನಂದಿನ ಕೂಲಿ ಕಾರ್ಮಿಕರು ಇದೇ ಸ್ಥಳದಲ್ಲಿ ನಿಂತು ಕ್ಯಾಂಟೀನ್ನಲ್ಲಿ ದೊರೆಯುವ ಪಲಾವ್, ಚಿತ್ರನ್ನ ತಿಂದು ತಮ್ಮ ದೈನಂದಿನ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ಆರೋಗ್ಯ ಕಾಪಾಡಬೇಕಾದ ಪುರಸಭೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿರುವುದು ಅವರ ಕರ್ತವ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅದೃಷ್ಟವಶಾತ್ ಉಕ್ಕಿ ಹರಿಯುತ್ತಿರುವ ದುರ್ನಾತದ ನೀರು ಪಕ್ಕದಲ್ಲಿನ ಚರಂಡಿಗೆ ಹೋಗುತ್ತಿದೆ. ಈಗಲಾದರೂ ಪುರಸಭೆ ಆರೋಗ್ಯ ಇಲಾಖೆ ಒಳಚರಂಡಿ ದುರಸ್ತಿ ಮಾಡಿಸುವರೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

