ಹಾಸನ

ನೀರಿಗಾಗಿ ನಾರಿಯರ ಪರದಾಟ

Published On :

ರಾಜ್ಯದಲ್ಲೇ ಅತಿ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿರುವ ಆಲೂ ರು ತಾಲೂಕಿನ ಜನತೆ ನಾನಾ  ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸ್ವಾತಂತ್ರ್ಯ ಬಂದು 66 ವರ್ಷ ಕಳೆದರೂ ವಿಶೇಷವಾದ ಯಾವ ಬದಲಾವಣೆಗಳನ್ನು ಕಾಣದೆ ತಾಲೂಕಿನ ಜನತೆ ಪರಿತಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಅರಿವಾಗಲೆಂಬ ದೃಷ್ಟಿಯಿಂದ ಈ ಸರಣಿ ವರದಿ ಇಂದಿನಿಂದ ಆರಂಭ.

- ಎಚ್.ವಿ.ರಾಘವೇಂದ್ರ
ಆಲೂರು: ತಾಲೂಕು ಕೇವಲ 429 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. 2001ರ ಜನಗಣತಿಯ ಪ್ರಕಾರ ಒಟ್ಟು 86,071 ಜನಸಂಖ್ಯೆಯಿದ್ದು, ಗ್ರಾಮೀಣ ಭಾಗದಲ್ಲಿ 79,938 ಹಾಗೂ ನಗರದಲ್ಲಿ  6133 ಜನರು ಜೀವನ  ಸಾಗಿಸುತ್ತಿದ್ದಾರೆ.  
ಅರೆ ಮಲೆನಾಡು ಪ್ರದೇಶವಾದ ಇಲ್ಲಿ ಪ್ರಮುಖವಾಗಿ ಕಾಡಾನೆಗಳ ಹಾಗೂ ವಿದ್ಯುತ್, ಕುಡಿಯುವ ನೀರಿನ  ಸಮಸ್ಯೆ, ಸಾರಿಗೆ, ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿದ್ದು, ಒಟ್ಟಾರೆ ತಾಲೂಕು  ಸಮಸ್ಯೆಗಳ ತವರೂರಾಗಿದೆ.
ಒಟ್ಟು ನಾಲ್ಕು ಹೋಬಳಿಗಳಿದ್ದು, 15 ಗ್ರಾಮ ಪಂಚಾಯ್ತಿ, 11 ಪಟ್ಟಣ ಪಂಚಾಯ್ತಿ ಸದಸ್ಯರಿದ್ದಾರೆ. ಅತಿ ಚಿಕ್ಕ ಪಟ್ಟಣ ಪಂಚಾಯ್ತಿ ಹೊಂದಿರುವ ಆಲೂರು ತಾಲೂಕು ಕೇಂದ್ರದಲ್ಲಿ 11 ವಾರ್ಡ್ಗಳಿದ್ದು, ಹಾಸನ ನಗರದ  ನಾಲ್ಕನೇ ವಾರ್ಡಿನ ಜನಸಂಖ್ಯೆಗಿಂತಲೂ ಕಡಿಮೆ ಜನಸಂಖ್ಯೆಯಿದ್ದು, ಇಲ್ಲಿನ ಜನರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪಪಂ ಸದಸ್ಯರು ವಿಫಲರಾಗಿದ್ದಾರೆ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 11 ವಾರ್ಡ್ಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು,  ಕುಡಿಯುವ ನೀರಿಗಾಗಿ ಜನತೆ ಪರದಾಡುವಂತಾಗಿದೆ. ಪಟ್ಟಣಕ್ಕೆ ಕುಡಿಯುವ ನೀರನ್ನು ಎರಡು ಕಿ.ಮೀ. ದೂರದ  ಹುಣಸುವಳ್ಳಿ ಬಳಿ ಇರುವ ಯಗಚಿ ನದಿಯಿಂದ ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ  ಹುಣಸವಳ್ಳಿ  ಬಾರೆಯಲ್ಲಿ ಫಿಲ್ಟರ್ಹೌಸ್ ನಿರ್ಮಿಸಲಾಗಿದೆ.
ಅರ್ಧ ಪಟ್ಟಣಕ್ಕೆ ಹಳೇ ಸಂತೆ ಬೀದಿಯಲ್ಲಿರುವ ಓವರ್ ಹೆಡ್ ಟ್ಯಾಂಕಿನಿಂದ ಹಾಗೂ ಉಳಿದರ್ಧ ಪಟ್ಟಣಕ್ಕೆ  ಹೌಸಿಂಗ್ ಬೋರ್ಡ್ನಲ್ಲಿರುವ ಟ್ಯಾಂಕ್ನಿಂದ ಹಾಗೂ ಹೌಸಿಂಗ್ ಬೋರ್ಡ್ಹಾಗೂ ಹಳೇ ಆಲೂರಿಗೆ
ಬೋರ್ವೆಲ್ನಿಂದ  ಕಿರು ನೀರು ಸರಬರಾಜು ಯೋಜನೆಯಿಂದ ನೀರು ಬಿಡಲಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಹೇಳತೀರದು. ಪ್ರತಿ ಗಂಟೆಗೆ ಒಮ್ಮೆಯಂತೆ ವಿದ್ಯುತ್ ವ್ಯತ್ಯಯ. ಇದರಿಂದಾಗಿ   ನೀರಿನ ಟ್ಯಾಂಕ್ ತುಂಬಲು ಕನಿಷ್ಠ ಆರು ಗಂಟೆ  ಬೇಕಾಗುತ್ತದೆ.
ಹೀಗಾಗಿ ಪ್ರತಿದಿನ ಎಲ್ಲ ವಾರ್ಡ್ಗಳಿಗೂ ನೀರು ನೀಡಲು ವಾಟರ್ಮನ್ಗಳ ಪರದಾಟ ಹೇಳತೀರದು. ಪ್ರತಿದಿನ ನಾಗರಿಕರು ಇವರೊಂದಿಗೆ ಜಗಳವಾಡುವಂತಾಗಿದೆ. ಪಂಪ್ಹೌಸ್ನಿಂದ ಫಿಲ್ಟರ್ಹೌಸ್ಗೆ ನೀರು  ಬಂದು ಅಲ್ಲಿ ಶುದ್ಧೀಕರಣಗೊಂಡು ಅಲ್ಲಿಂದ ಟ್ಯಾಂಕಿಗೆ ಬರಲು ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ. ಗಂಟೆಗೊಮ್ಮೆ  ವಿದ್ಯುತ್ ಕಡಿತಗೊಂಡರೆ ಪೈಪ್ನಲ್ಲಿನ ನೀರು ಪುನಃ ವಾಪಸ್ ಹೋಗುತ್ತದೆ. ಹೀಗಾಗಿ ಟ್ಯಾಂಕ್ಗಳನ್ನು ತುಂಬಿಸಿಕೊಳ್ಳಲು ಸಾಧ್ಯವಾಗದು. ಕೆಲವೆಡೆ ಪಪಂನವರು ಟ್ಯಾಂಕರ್ಗಳಲ್ಲಿ ನೀರು ಬಿಡುತ್ತಿದ್ದು, ಅದನ್ನು ಕುಡಿಯಲು ಹಾಗೂ ಬಳಸಲು ಜನತೆ ಹಿಂಜರಿಯುತ್ತಿದ್ದಾರೆ.
ಕೈ ಪಂಪ್ಗಳಿಂದ ನೀರು ತರೋಣವೆಂದರೆ ಪಟ್ಟಣದ ಶೇ. 90 ಭಾಗ ಬೋರ್ವೆಲ್ಗಳು ಕೆಟ್ಟು ನಿಂತಿವೆ. ಇದರಿಂದಾಗಿ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ. ಸಮಸ್ಯೆ ಬಗೆಹರಿಸುವಂತೆ ನೂತನವಾಗಿ  ಆಯ್ಕೆಗೊಂಡಿರುವ ಪಪಂ ಸದಸ್ಯರನ್ನು ಜನತೆ ಒತ್ತಾಯಿಸಿದ್ದಾರೆ.
ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಪಪಂ ಸದಸ್ಯರ ಪದಗ್ರಹಣ ನಡೆಯುವಂತಿಲ್ಲ. ಜನರು ಇವರನ್ನು ಬಿಡುವಂತಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 65 ಲಕ್ಷ ರು. ವೆಚ್ಚದಲ್ಲಿ ಕಂದಲಿ ಎಂಎಸ್ಎಸ್ನಿಂದ  ಹುಣಸವಳ್ಳಿ  ಪಂಪ್ಹೌಸ್ವರೆಗೆ ಪ್ರತ್ಯೇಕ ಎಕ್ಸ್ಪ್ರೆಸ್ ವಿದ್ಯುತ್ ಲೈನ್ ನಿರ್ಮಾಣ ಕಾರ್ಯ ಆರಂಭಗೊಂಡು ಎರಡು ವರ್ಷ ಕಳೆಯುತ್ತಾ ಬಂದಿದ್ದು, ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.
2010ರ ಏ.22 ರಲ್ಲಿ ಪ್ರತ್ಯೇಕ ಮಾರ್ಗ ರಚನೆ ಪ್ರಕ್ರಿಯೆ ಪ್ರಾರಂಭಗೊಂಡು 2011ರ ಅ.11ರಂದು  ಸ್ವಯಂ ನಿರ್ವಹಣಾ ಯೋಜನೆಯಡಿ ಕೆಲಸ ನಿರ್ವಹಿಸಲು ಅನುಮತಿ ದೊರೆತಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.