'ಮನಸ್ಸು ಮಂದಾರ' ಕೃತಿ ಪರಿಚಯ
ಹಾಸನ: ಮನೋವಿಜ್ಞಾನದ ಸಂಗತಿಗಳು ಸಾಹಿತ್ಯದ ಬಹು ಮುಖ್ಯ ಭಾಗ ಎಂದು ಯುವ ಸಾಹಿತಿ ಶ್ರೀನಿವಾಸ ಡಿ. ಶೆಟ್ಟಿ ಅಭಿಪ್ರಾಯಪಟ್ಟರು. ಹಾಡ್ಲಹಳ್ಳಿ ಪಬ್ಲಿಕೇಶನ್ ಆವರಣದಲ್ಲಿ ಡಾ. ಎ.ಎಂ. ನಾಗೇಶ್ ಅವರ ಮನಸ್ಸು ಮಂದಾರ ಕೃತಿಯನ್ನು ಪರಿಚಯಿಸುತ್ತ ಮಾತನಾಡಿದರು. ಮೂಲತಃ ಸಾಹಿತಿ ಎಂಬ ಹಣೆಪಟ್ಟಿ ಇಲ್ಲದ ಡಾ. ನಾಗೇಶ್ ಅವರಲ್ಲಿ ಹಲವಾರು ಕೌತುಕದ ಸಂಗತಿಗಳಿವೆ. ಅಂಕಣ ಬರಹಗಳ ಸಂಕಲನವಾದರೂ ಎಲ್ಲಿಯೂ ಬಿಡಿ ಚಿತ್ರಗಳಂತೆ ಕಾಣಿಸದೆ ಒಂದು ಲೇಖನದಿಂದ ಮತ್ತೊಂದು ಲೇಖನಕ್ಕೆ ಪಾತ್ರಗಳ ಮೂಲಕ ಬಂಧ ಬೆಸೆಯುತ್ತ ಅಪರೂಪದ ಕೃತಿಯನ್ನು ಡಾ. ನಾಗೇಶ್ ನೀಡಿದ್ದಾರೆ ಎಂದು ಹೇಳಿದರು.ಪುಸ್ತಕ ಬಿಡುಗಡೆ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ದನ್ ಮಾತನಾಡಿ, ಮನೋವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಅಭಿಪ್ರಾಯಪಟ್ಟರು. ಚಿನ್ನೇನಹಳ್ಳಿಸ್ವಾಮಿ ಸ್ವಾಗತಿಸಿ, ನಿರೂಪಿಸಿದರು. ಸಾಹಿತಿ ಜ.ಹೊ. ನಾರಾಯಣಸ್ವಾಮಿ, ಡಾ.ಹಂಪನಹಳ್ಳಿ ತಿಮ್ಮೇಗೌಡ, ಡಾ. ಎಚ್.ಎಲ್. ಮಲ್ಲೇಶಗೌಡ, ಜ.ನಾ ತೇಜಶ್ರೀ, ಜೆ.ಪಿ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

